ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು

ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು
ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು

ನೆತ್ತಿ ಸುಡುವಂತಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು ಪತ್ತೆಯಾಗುತ್ತಿವೆ. ಅಧಿಕ ಮಾಸ್ಕ್ ಧಾರಣೆಯಿಂದ ಮಾಸ್ಕ್ ಆಕ್ನೆ ಸೃಷ್ಟಿಯಾಗುತ್ತಿದೆ.

TV9kannada Web Team

| Edited By: Ayesha Banu

Apr 07, 2022 | 11:36 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ 2 ವರ್ಷ ಹಾಳಾಗಿದೆ. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಕೊರೊನಾದಿಂದ ಮುಕ್ತಿಸಿಕ್ಕಂತಾಗಿದೆ. ಆದ್ರೆ ಮಾಸ್ಕ್ಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೊರೊನಾ ಕಡಿಮೆಯಾದರೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ತಲುಪಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸುವುದು ದೊಡ್ಡ ಕಂಟಕವೇ ಆಗಿದೆ. ಸದ್ಯ ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ.

ನೆತ್ತಿ ಸುಡುವಂತಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು ಪತ್ತೆಯಾಗುತ್ತಿವೆ. ಅಧಿಕ ಮಾಸ್ಕ್ ಧಾರಣೆಯಿಂದ ಮಾಸ್ಕ್ ಆಕ್ನೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನರು ಚಿಕಿತ್ಸೆ ಪಡೆಯಲು ಚರ್ಮ ತಜ್ಞರ ಮೊರೆ ಹೋಗುತ್ತಿದ್ದಾರೆ. ಯುವಕ, ಯುವತಿಯರು, ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ಮಾಸ್ಕ್ನೊಳಗೆ ಬೆವರಿನಿಂದ ಮೊಡವೆಗಳು ಮೂಡುತ್ತಿವೆ. ಹೀಗಾಗಿ ಬಟ್ಟೆ ಮಾಸ್ಕ್ ಪ್ರತಿ‌ನಿತ್ಯ ಸ್ವಚ್ಛವಾಗಿ ತೊಳೆದು ಬಳಸಲು ತಜ್ಞರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೊವಿಡ್ 19 ನಿಯಂತ್ರಣ ನಿರ್ಬಂಧಗಳು ಇರೋದಿಲ್ಲ; ಏನೆಲ್ಲ ಬದಲಾವಣೆ ಆಗಲಿದೆ? ಈಗೊಂದು ಎರಡು ವರ್ಷಗಳಿಂದ ದೇಶದಲ್ಲಿ ಕೊವಿಡ್ 19 ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡಿದೆ. ರೋಗ ಭಯ, ಅದನ್ನು ತಡೆಯಲು ಮಾಡಿದ ಕಟ್ಟುನಿಟ್ಟಿನ ಕಾನೂನುಗಳು, ಅದನ್ನು ಮೀರಿದರೆ ದಂಡ-ಶಿಕ್ಷೆಯ ಆತಂಕ..ಹೀಗೆ ಒಂದೆರಡೇ ಅಲ್ಲ. ಮನೆಯಿಂದ ಹೊರಗೆ ಬಂದು ಯಾವುದೇ ಕೆಲಸಕ್ಕೆ ಹೋದರೂ ಕೊವಿಡ್ 19 ನಿಯಂತ್ರಣ ನಿಯಮಗಳು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದವು. ಆದರೆ ಇಂದಿನಿಂದ ಬದಲಾವಣೆಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನೂ ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ ಕೊವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಆಗುವುದಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳು, ಜಿಮ್, ರೆಸ್ಟೋರೆಂಟ್, ಪಾರ್ಕ್ಗಳು, ಸಿನಿಮಾ ಹಾಲ್ಗಳು, ಮದುವೆ ಸಮಾರಂಭ, ಅಂತ್ಯಕ್ರಿಯೆ, ಸಾರ್ವಜನಿಕ ಸಭೆ-ಸಮಾರಂಭ..ಹೀಗೆ ಯಾವುದಕ್ಕೂ ಜನಮಿತಿಯಿಲ್ಲ, ನಿರ್ಬಂಧಗಳಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ನಿಯಮಗಳು ಹಾಗೇ ಇವೆ. ದೆಹಲಿ, ಮಹಾರಾಷ್ಟ್ರಗಳು ಮಾಸ್ಕ್ ಕೂಡ ಕಡ್ಡಾಯವಾಗಿ ಇಟ್ಟಿಲ್ಲ. ಒಮ್ಮೆ ಮಾಸ್ಕ್ ಧರಿಸಿದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಹೇಳಿವೆ.

ಮಾರ್ಚ್ನಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದರು. ಏಪ್ರಿಲ್ 1ನೇ ತಾರೀಖಿನಿಂದ ದೇಶದಲ್ಲಿ ಕೊವಿಡ್ 19 ನಿಯಂತ್ರಣಾ ನಿಯಮಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಬರುವುದಿಲ್ಲ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪತ್ತೆ ಹಚ್ಚುವಿಕೆ, ಕಣ್ಗಾವಲು, ಸಂಪರ್ಕಿತರನ್ನು ಟ್ರೇಸ್ ಮಾಡುವುದು, ಚಿಕಿತ್ಸೆ, ಲಸಿಕೆ ನೀಡಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು, ವ್ಯವಸ್ಥೆಗಳನ್ನೂ ಹೆಚ್ಚಿಸಲಾಗಿದೆ. ಹಾಗಾಗಿ ನಿಯಮಗಳನ್ನು ಸಡಿಲಿಸಬಹುದು ಎಂದೂ ಹೇಳಿದ್ದರು.

ಇದನ್ನೂ ಓದಿ: ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ

Petrol Diesel Price Increase: ಕಚ್ಚಾತೈಲ ದರ ಏರಿಕೆ ಹಿನ್ನೆಲೆ ಬೆಂಗಳೂರಿನ ಬಹುತೇಕ ಪೆಟ್ರೋಲ್ ಬಂಕ್​ಗಳಲ್ಲಿ ನೋ ಸ್ಟಾಕ್ ಬೋರ್ಡ್

Follow us on

Related Stories

Most Read Stories

Click on your DTH Provider to Add TV9 Kannada