ಸರ್! ನೀವು ಇದ್ದೀರಿ ಅನ್ನುವ ಏಕ ಮಾತ್ರ ಕಾರಣಕ್ಕೆ ಕಾಂಗ್ರೆಸ್​ನಲ್ಲಿದ್ದೇನೆ- ಸಿದ್ದರಾಮಯ್ಯ ಮನೆಯಲ್ಲಿ ಜಮೀರ್ ಖಾನ್ ಹೇಳಿಕೆ

ಸರ್! ನೀವು ಇದ್ದೀರಿ ಅನ್ನುವ ಏಕ ಮಾತ್ರ ಕಾರಣಕ್ಕೆ ಕಾಂಗ್ರೆಸ್​ನಲ್ಲಿದ್ದೇನೆ- ಸಿದ್ದರಾಮಯ್ಯ ಮನೆಯಲ್ಲಿ ಜಮೀರ್ ಖಾನ್ ಹೇಳಿಕೆ
ಸರ್! ನೀವು ಇದ್ದೀರಿ ಅನ್ನುವ ಏಕಮಾತ್ರ ಕಾರಣಕ್ಕೆ ಕಾಂಗ್ರೆಸ್​ನಲ್ಲಿದ್ದೇನೆ- ಸಿದ್ದರಾಮಯ್ಯ ಮನೆಯಲ್ಲಿ ಜಮೀರ್ ಖಾನ್ ಹೇಳಿಕೆ

MLA Zameer Ahmed Khan: ತಮ್ಮ ಪರಮಾಪ್ತನಿಂದ ಇಂತಹ ಮಾತುಗಳು ಕೇಳಿಬಂದಿದ್ದೇ ತಡ ಸಿದ್ದರಾಮಯ್ಯನವರು ಬೇಸರದ ವೇಳೆ ದುಡುಕಿನ ನಿರ್ಧಾರ ಮಾಡುವುದು ಸರಿ ಅಲ್ಲ. ನಿನ್ನ ಜೊತೆ ನಾನು ಗಟ್ಟಿಯಾಗಿದ್ದೇನೆ ಎಂದು ಜಮೀರ್​ಗೆ ಧೈರ್ಯ ತುಂಬಿ ಕಳಿಸಿದ್ದಾರೆ. ಆದರೆ ರಜಾನ್ ಬಳಿಕ ಜಮೀರ್​ ಅಹ್ಮದ್ ರಾಜಕೀಯ ನಡೆ ಎನೋ ಎಂತೋ ಎಂಬಂತಿದೆ.

TV9kannada Web Team

| Edited By: sadhu srinath

Apr 07, 2022 | 4:13 PM

ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್​ ಶಾಸಕ, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಟ್ಟಾಳು ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್​ ಪಕ್ಷ ಬಿಡುವ ಬಗ್ಗೆ ವದಂತಿಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಜಮೀರ್ ಖಾನ್​ರನ್ನು ಎರಡು ದಿನಗಳ ಹಿಂದೆ ಮನೆಗೆ ಕರೆಸಿಕೊಂಡಿದ್ದ ಸಿದ್ದರಾಮಯ್ಯ ಅವರುರಾಜಕೀಯ ವಲಯದಲ್ಲಿ ನಿನ್ನ ಬಗ್ಗೆ ಹಲವು ವಿಷಯ ಹರಿದಾಡ್ತಿದೆ. ನಿನ್ನ ನಿಲುವೇನು? ರಾಹುಲ್ ಪ್ರವಾಸ ವೇಳೆ ಏಕೆ ದೂರವಾಗಿದ್ದೆ? ಬೇಸರವಾಗಿದ್ದರೆ ಏನೆಂದು ಹೇಳು ಎಂದು ಜಮೀರ್​ ಅಹ್ಮದ್​ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸಿದ್ದರಾಮಯ್ಯನವರ ಪ್ರಶ್ನೆಗಳಿಗೆ ಜಮೀರ್ ಅಹ್ಮದ್ ಅಲ್ಲೇ ಪ್ರತಿಕ್ರಿಯೆ ನೀಡಿದ್ದು, ಸರ್.. ನೀವು ಇದ್ದೀರಾ ಅನ್ನುವ ಏಕ ಮಾತ್ರ ಕಾರಣಕ್ಕೆ ಕಾಂಗ್ರೆಸ್​ನಲ್ಲಿ ಇದ್ದೇನೆ. ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಬೇರೆ ನಿರ್ಧಾರ ಕೈಗೊಳ್ಳುತ್ತಿದ್ದೆ. ಸದ್ಯಕ್ಕೆ ನಾನು ಯಾವ ವಿಚಾರವನ್ನೂ ನಿಮಗೆ ಹೇಳುವುದಿಲ್ಲ. ರಂಜಾನ್ ಹಬ್ಬ ಕಳೆದ ಬಳಿಕ ನಾನು ನಿಮ್ಮ ಬಳಿ ಮಾತಾಡುವೆ. ರಂಜಾನ್ ಬಳಿಕ ಎಲ್ಲವನ್ನೂ ತಿಳಿಸುವೆ ಎಂದು ಜಮೀರ್ ಕ್ಲುಪ್ತವಾಗಿ ತಮ್ಮ ಬಾಸ್​ಗೆ ಉತ್ತರಿಸಿದ್ದಾರೆ.

ತಮ್ಮ ಪರಮಾಪ್ತನಿಂದ ಇಂತಹ ಮಾತುಗಳು ಕೇಳಿಬಂದಿದ್ದೇ ತಡ ಸಿದ್ದರಾಮಯ್ಯನವರು ಬೇಸರದ ವೇಳೆ ದುಡುಕಿನ ನಿರ್ಧಾರ ಮಾಡುವುದು ಸರಿ ಅಲ್ಲ. ನಿನ್ನ ಜೊತೆ ನಾನು ಗಟ್ಟಿಯಾಗಿದ್ದೇನೆ ಎಂದು ಜಮೀರ್​ಗೆ ಧೈರ್ಯ ತುಂಬಿ ಕಳಿಸಿದ್ದಾರೆ. ಆದರೆ ರಜಾನ್ ಬಳಿಕ ಜಮೀರ್​ ಅಹ್ಮದ್ ರಾಜಕೀಯ ನಡೆ ಎನೋ ಎಂತೋ ಎಂಬಂತಿದೆ.

Also Read: ಬೆಳಗಾವಿ ಅಜ್ಜಿ ಬಳ್ಳಾರಿ ಕಾಲೇಜಿಗೆ ದೇಹ ದಾನ ಮಾಡಿ ಸಾರ್ಥಕತೆ ಮೆರೆದರು ! ಇದಕ್ಕೆ ಪ್ರೇರಣೆ ಯಾರು? ಇಲ್ಲಿದೆ ಕ್ರಾಂತಿಕಾರಿ ಸ್ಟೋರಿ!

Also Read: ಬೆಂಗಳೂರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಗಮನ ಹಿನ್ನೆಲೆ; ರಾಘವೇಂದ್ರ ಸ್ವಾಮಿ ಮಠಕ್ಕೆ ಸಿಎಂ ಭೇಟಿ

Follow us on

Related Stories

Most Read Stories

Click on your DTH Provider to Add TV9 Kannada