ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಶೂನ್ಯ ಸಂಪಾದನೆಯೇ? ಸಂಪುಟ ವಿಸ್ತರಣೆ ಗಜ ಪ್ರಸವ ಯಾವಾಗ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
TV9 Kannada Digital Live: ಸಿಎಂ ಬೊಮ್ಮಾಯಿ ಸಮತೋಲಿತ ಸಂಪುಟ ವಿಸ್ತರಣೆ ಯಾವಾಗ? ಬಹು ನಿರೀಕ್ಷಿತ ಸಂಪುಟ ಪುನರಚನೆ ಆಗುತ್ತಾ, ಆಗಲ್ವಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಶೂನ್ಯ ಸಂಪಾದನೆಯೇ? ಮತ್ತು ಮುಂದಿನ ಒಂದು ವರ್ಷದಲ್ಲಿ ಜನೋಪಯೋಗಿ ಕೆಲಸಗಳು ಆಗಬಹುದೇ? ಒಂದು ಚರ್ಚೆ
ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಂಪುಟ ಸಹೋದ್ಯೋಗಿಗಳ ರಾಜೀನಾಮೆಯನ್ನು ಪಡೆದುಕೊಂಡು, ನೇರವಾಗಿ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಇನ್ನು ನಮ್ಮ ರಾಜ್ಯದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಮುಗಿದ ಮೇಲೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೂಚ್ಯವಾಗಿ ಹೇಳಿದ್ದಾರೆ. ಆದರೆ ಅದೂ ದೃಢವಾಗಿ ಹೇಳಿಲ್ಲ (Bommai Cabinet). ಚುನಾವಣೆ ಎದುರಿಗೇ ಇರುವಾಗ ಇರುವ ನಾಲ್ಕು ಸ್ಥಾನ ಭರ್ತಿ ಮಾಡಿ, ಭರ್ತಿ ಸಂಪುಟದೊಂದಿಗೆ ಚುನಾವಣೆಗೆ ಹೋಗುವುದು ಯಾವುದೇ ಮುಖ್ಯಮಂತ್ರಿ ಬಯಸುವುದು ಸಹಜ (TV9 Kannada Digital Live).
ಆದರೆ ಇತ್ತ ಆಕಾಂಕ್ಷಿಗಳು, ಅತ್ತ ಹೈಕಮಾಂಡ್ ಅಲಗುಗತ್ತಿಯ ಮೇಲೆ ಸಿಎಂ ಬೊಮ್ಮಾಯಿ ಸಮತೋಲವಾಗಿ ನಡೆಯಬೇಕಿದೆ. ಹಾಗಾದರೆ ಆ ಸಮತೋಲಿತ ಸಂಪುಟ ವಿಸ್ತರಣೆ ಯಾವಾಗ? ಬಹು ನಿರೀಕ್ಷಿತ ಸಂಪುಟ ಪುನರಚನೆ ಆಗುತ್ತಾ? ಆಗಲ್ವಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಶೂನ್ಯ ಸಂಪಾದನೆಯೇ? ಮತ್ತು ಮುಂದಿನ ಒಂದು ವರ್ಷದಲ್ಲಿ ಜನೋಪಯೋಗಿ ಕೆಲಸಗಳು ಆಗಬಹುದೇ? ಈ ಕುರಿತು ಇಂದಿನ ಡಿಜಿಟಲ್ ಲೈವ್ ನಲ್ಲಿ ಚರ್ಚಿಸೋಣ. ಆ್ಯಂಕರ್ ಪ್ರಮೋದ್ ಶಾಸ್ತ್ರಿ ಮಧ್ಯಾಹ್ನ 3.30 ಕ್ಕೆ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.
Also Watch:
ಕೊರೊನಾ ಮುಗಿದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚರ್ಚಿಸೋಣ ಬನ್ನಿ, ಟಿವಿ 9 ಡಿಜಿಟಲ್ ಲೈವ್