ಬೆಂಗಳೂರು: ಅನಾರೋಗ್ಯ ಸಮಸ್ಯೆಯಾಗಿ ಮೈನರ್ ಶಸ್ತ್ರಚಿಕಿತ್ಸೆ (Minor Surgery) ಅಗತ್ಯವಿದೆ ಎಂಬ ವೈದ್ಯರ ಅಭಿಪ್ರಾಯದ ಮೇರೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎಚ್ಎಎಲ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಸಿದ್ದರಾಮಯ್ಯ ಅವರ ಆರೋಗ್ಯ ಪರಿಶೀಲಿಸಿದ ವೈದ್ಯರು, ‘ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು, ವಿಶ್ರಾಂತಿಗೆ ಸಲಹೆ ನೀಡಿ ಮನೆಗೆ ಕಳಿಸಿದರು. ಇದಕ್ಕೂ ಮೊದಲು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ ವೈದ್ಯರು ನಾಲ್ಕು ದಿನಗಳ ವಿಶ್ರಾಂತಿ ಸಲಹೆ ಮಾಡಿದ್ದರು.
ಮತ್ತೊಂದು ಕ್ಷೇತ್ರದ ವರದಿ ತರಿಸಿಕೊಂಡ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ದಿಷ್ಟವಾದ ಕ್ಷೇತ್ರವಿಲ್ಲ. ಮತ್ತೊಂದೆಡೆ ಮುಂದಿನ ಸಿಎಂ ಘೋಷಣೆ ಕೂಗು ನಿಂತಿಲ್ಲ.. ಕೋಲಾರದ ರಾಜಕೀಯ (Kolar Politics) ಸಮಸ್ಯೆ ಕೊನೆಯಾಗಿಲ್ಲ. ವರುಣದಲ್ಲಿ ನಿಲ್ಲಲು ಅಡ್ಡಿಯಿಲ್ಲ. ಆದರೂ ಮಗನ ರಾಜಕೀಯ ಭವಿಷ್ಯ ಹಿನ್ನೆಲೆಯಲ್ಲಿ ಸಿದ್ದುಗೆ ವರುಣಾದಿಂದ (Varuna) ಸ್ಪರ್ಧಿಸಲು ಮನಸ್ಸಿಲ್ಲ. ಇಷ್ಟೆಲ್ಲಾ ಗೊಂದಲದ ಮಧ್ಯೆ ಸಿದ್ದರಾಮಯ್ಯ ಮತ್ತೆ ವರುಣಾದ ಕಡೆಯೇ ಹೆಜ್ಜೆ ಹಾಕ್ತಾರಾ ಅನ್ನೋ ಚರ್ಚೆ ಶುರುವಾಗಿದೆ.
ಕ್ಷೇತ್ರ ಹುಡುಕಾಟದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇವರ್ಯಾರು ಅನ್ನೋ ರೀತಿ ಕ್ಷೇತ್ರಗಳ ಪ್ಲಸ್, ಮೈನಸ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಿ ನಿಂತ್ರೆ ಗೆಲ್ಲಬಹುದು ಎಂದು ರಣತಂತ್ರ ರೂಪಿಸುತ್ತಿದ್ದಾರೆ. ಆದ್ರೆ, ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಸಿದ್ದು, ಸ್ಪರ್ಧೆ ಬಗ್ಗೆ ಕೇಳಿದ್ರೆ ಹೈಕಮಾಂಡ್ ಹೇಳಿದಂತೆ ನಿಲ್ಲುತ್ತೇನೆ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಅವರೇನೋ, ಹೈಕಮಾಂಡ್ ಹೇಳಿದಂತೆ ಎಂದು ದೆಹಲಿ ಅಂಗಳಕ್ಕೆ ಚೆಂಡು ಎಸೆದು ಕ್ಷೇತ್ರಾನ್ವೇಷಣೆಯಲ್ಲಿ ತೊಡಗಿದ್ದಾರೆ. ಸದ್ಯ ಯಾವ ಕ್ಷೇತ್ರ ಫಿಕ್ಸ್ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ಹೀಗಿದ್ದರೂ ಸಿದ್ದು ಅಭಿಮಾನಿಗಳು ಮಾತ್ರ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಘೋಷಣೆ ಕೂಗುತ್ತಿದ್ದಾರೆ.
ಸಿದ್ದರಾಮಯ್ಯ ಕಾಲಿಟ್ಟ ಕಡೆ ಮುಂದಿನ ಸಿಎಂ ಸಿದ್ದು ಅನ್ನೋ ಘೋಷಣೆ ಮುಗಿಲು ಮುಟ್ಟುತ್ತೆ, ಇವತ್ತು ಮೈಸೂರಿಗೆ ಭೇಟಿ ನೀಡಿದ್ದ ವೇಳೆಯು ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಸಿದ್ದು ಸಹ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಗೆಲ್ಲೋ ಕಣವನ್ನ ಸಿದ್ಧ ಮಾಡ್ತಿದ್ದಾರೆ. ಈಗಲೂ ಕೋಲಾರನಾ, ವರುಣಾನಾ ಅನ್ನೋ ಗೊಂದಲದಲ್ಲೇ ಇದ್ದಾರೆ. ಈ ಮಧ್ಯೆ ಆಪ್ತರು ಸಿದ್ದುಗೆ ಸಲಹೆಯೊಂದನ್ನ ನೀಡಿದ್ದಾರೆ.
ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Fri, 2 December 22