ಕುರಿ ಮೇಕೆಗಳಿಗೆ ಬ್ಲೂಟಂಗ್​ ಕಾಯಿಲೆ ಬರುತ್ತೆ, ಆದಷ್ಟು ಬೇಗ ಲಸಿಕೆ ನೀಡಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಗ್ರಹ

| Updated By: ಆಯೇಷಾ ಬಾನು

Updated on: Sep 20, 2022 | 1:41 PM

ವಿಧಾನಸಭೆಯಲ್ಲಿ ಕುರಿಗಳಿಗೆ ಬ್ಲೂಟಂಗ್​ ಕಾಯಿಲೆಗಳು ಬರುವ ಬಗ್ಗೆ ಚರ್ಚೆ ನಡೆದಿದ್ದು ಕಾಯಿಲೆಗೆ ಆದಷ್ಟು ಬೇಗ ಲಸಿಕೆ ನೀಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕುರಿ ಮೇಕೆಗಳಿಗೆ ಬ್ಲೂಟಂಗ್​ ಕಾಯಿಲೆ ಬರುತ್ತೆ, ಆದಷ್ಟು ಬೇಗ ಲಸಿಕೆ ನೀಡಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ
Follow us on

ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿಗಳಿಗೆ ಬ್ಲೂಟಂಗ್​ ಕಾಯಿಲೆಗಳು ಬಂದು ಅವುಗಳು ಸಾಯುವ ಬಗ್ಗೆ, ಬ್ಲೂಟಂಗ್​ ಕಾಯಿಲೆಯ ಲಸಿಕೆ ಕೊರತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಕುರಿಗಳಿಗೆ ಬ್ಲೂಟಂಗ್​ ಕಾಯಿಲೆ ಹೆಚ್ಚಾಗಿದೆ. ಹೀಗಾಗಿ ಈ ಬಗ್ಗೆ ಗಮನ ಹರಿಸುವಂತೆ ಸಿದ್ದರಾಮಯ್ಯ(Siddaramaiah) ಮನವಿ ಮಾಡಿದ್ದಾರೆ.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಸಿದ್ದರಾಮಯ್ಯ, ಕುರಿ ಮೇಕೆಗಳಿಗೆ ಮಳೆ ಶೀತ ಕಾರಣಕ್ಕಾಗಿ ಬ್ಲೂಟಂಗ್​ ಕಾಯಿಲೆ ಬರುತ್ತದೆ. ಇದರಿಂದ ಕುರಿಗಳು ಸಾವನ್ನಪ್ಪುತ್ತವೆ. ಕುರಿ ಮಾಲೀಕರಿಗೆ ಬಹಳ ನಷ್ಟವಾಗುತ್ತದೆ. ಹೀಗಾಗಿ ಬ್ಲೂಟಂಗ್​ ಕಾಯಿಲೆ ತಡೆಯಲು ಲಸಿಕೆ ಹಾಕಿಸಬೇಕು ಎಂದರು. ರಾಜ್ಯದಲ್ಲಿ ಒಂದು ಕೋಟಿ ಹತ್ತು ಲಕ್ಷ ಕುರಿ, 61 ಲಕ್ಷ ಮೇಕೆಗಳಿವೆ. ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರೋಗದಿಂದ ಕುರಿಗಳು ಸಾಯುತ್ತವೆ. ಇದರಿಂದ ವ್ಯಾಪಕವಾಗಿ ಲಸಿಕೆ ಕುರಿಗಳಿಗೆ ಹಾಕಬೇಕು ಎಂದು ಆಗ್ರಹಿಸಿದರು. ಬಾಗಲಕೋಟೆಯಲ್ಲೇ ಎರಡೂವರೆ ಲಕ್ಷ ಕುರಿಗಳಿವೆ. ಆದ್ರೆ ಸರ್ಕಾರ ಕೇವಲ 50 ಸಾವಿರ ಲಸಿಕೆ ಮಾತ್ರ ಪೂರೈಸಿದೆ. ಉಳಿದದನ್ನೂ ಪೂರೈಸುವುದು ಯಾವಾಗ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: Protein Powder: ವಿಧಾನಸೌಧದಲ್ಲಿ ಪ್ರತಿಧ್ವನಿಸಿದ ಪ್ರೋಟೀನ್ ಪೌಡರ್ ದಂಧೆ: ಈ ಪುಡಿ ಅದೆಷ್ಟು ಅಪಾಯಕಾರಿ? ಇಲ್ಲಿದೆ ವಿವರ

ಸಿದ್ದರಾಮಯ್ಯ ಪ್ರಶ್ನೆಗೆ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಉತ್ತರಿಸಿದ್ದು, ಕೋಲಾರ, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುರಿಗಳಿಗೆ ಬ್ಲೂಟಂಗ್​ ಕಾಯಿಲೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕುರಿಗಳಿಗೆ ಬ್ಲೂಟಂಗ್​ ಕಾಯಿಲೆ ಹೆಚ್ಚಾಗಿದೆ. ಶೀಘ್ರದಲ್ಲೇ ಕುರಿಗಳ ಕಾಯಿಲೆ ತಡೆಗೆ 1 ಲಕ್ಷ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:41 pm, Tue, 20 September 22