ಸಿದ್ದರಾಮಯ್ಯರನ್ನು ನಾವು ತಿಕ್ಕಲು ನಾಯಕ ಎನ್ನುತ್ತೇವೆ: MLC ಛಲವಾದಿ ನಾರಾಯಣಸ್ವಾಮಿ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2022 | 5:44 PM

ಮೋದಿಗೆ ಪುಕ್ಕಲು ನಾಯಕರು ಎಂದಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾವು ತಿಕ್ಕಲು ನಾಯಕರು ಅನ್ನುತ್ತೇವೆ ಎಂದು ವಿಧಾನಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾಧಿ ನಾರಾಯಣಸ್ವಾಮಿ ಹೇಳಿಕೆ ನೀಡಿದರು.

ಸಿದ್ದರಾಮಯ್ಯರನ್ನು ನಾವು ತಿಕ್ಕಲು ನಾಯಕ ಎನ್ನುತ್ತೇವೆ: MLC ಛಲವಾದಿ ನಾರಾಯಣಸ್ವಾಮಿ ಕಿಡಿ
MLC ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಇತ್ತೀಚೆಗೆ ರಾಜಕೀಯ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿಗೆ ಪುಕ್ಕಲು ನಾಯಕರು ಎಂದಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾವು ತಿಕ್ಕಲು ನಾಯಕರು ಅನ್ನುತ್ತೇವೆ ಎಂದು ವಿಧಾನಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾಧಿ ನಾರಾಯಣಸ್ವಾಮಿ (chalavadi narayanaswamy) ಹೇಳಿಕೆ ನೀಡಿದರು. ತಿಕ್ಕಲು ಅಂದರೆ ಹುಚ್ಚು ಅಂತ. ಕೀಳು ಅಭಿರುಚಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ದಿವಾಳಿತನ ತೋರಿಸುತ್ತದೆ. ಕಟೀಲ್ ಅವರನ್ನು ಜೋಕರ್ ಎಂದಿದ್ದಾರೆ. ಕಟೀಲ್​ಗೆ ಜೋಕರ್ ಅಂದರೆ ಏನು ಅಂತ ಗೊತ್ತಿಲ್ಲ. ಯಾಕಂದ್ರೆ ಸಿದ್ದರಾಮಯ್ಯ ತರಹ ಅವರಿಗೆ ಇಸ್ಪೀಟ್ ಬರಲ್ಲ. ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ. ರಾತ್ರಿಯಲ್ಲಾ ಇಸ್ಪೀಟ್ ಆಡೋದು, ಬೆಳಗ್ಗೆ ಎಲ್ಲಿ ಕೂರುತ್ತಾರೋ ಅಲ್ಲೇ ನಿದ್ದೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಒಬ್ಬ ವ್ಯಕ್ತಿಯ ಆರೋಗ್ಯದ ಬಗ್ಗೆ ಮಾತಾಡಬಾರದು. ಬೊಮ್ಮಾಯಿಯವರಿಗೆ ಕಾಲು ನೋವು ಇದೆ. ಒಂದು‌ ಕಿಲೋ ಮೀಟರ್ ನಡೆಯಿರಿ ನೋಡೋಣ ಅಂತ ಚಾಲೆಂಜ್ ಹಾಕ್ತೀರಲ್ಲಾ? ರಾಜ್ಯದಲ್ಲಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ‌. ನಿಮ್ಮ ಪಕ್ಷದ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಏನಾಗಿದೆ ಗೊತ್ತಿದೆ‌. ನಿಮ್ಮ ಬಾಯಿ ಚಪಲ ಸರಿಯಲ್ಲ. ದೇವೇಗೌಡರ ಕಾಲು ಹಿಡಿದು ಡಿಸಿಎಂ ಆದರು. ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು. ದಲಿತರ ತಲೆ ಹಿಡಿದು ಕುತ್ತಿಗೆ ಹಿಚುಕಿ ಪರಮೇಶ್ವರ ಅವರನ್ನು ಸೈಡ್ ಮಾಡಿ ಸಿಎಂ ಆದಿರಿ. ನಿಮ್ಮ ಹಾಗೇ ಬಿಟ್ಟಿ ಭಾಗ್ಯಗಳ ಬಗ್ಗೆ ಮಾತಾಡಲ್ಲ.


ನಾವು ಮೀಸಲಾತಿ ಕೊಟ್ಟಿದ್ದೇವೆ, ಅದಕ್ಕೆ ಹೇಳಿಕೊಳ್ಳುತ್ತಿವೆ. ಮಾನ ಮರ್ಯಾದೆ ಇದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ. ನಿಮ್ಮಿಂದ ರಾಜ್ಯದ ಜನರಿಗೆ ನೆಮ್ಮದಿ ಇಲ್ಲ ಎಂದು ಛಲವಾಧಿ ನಾರಾಯಣಸ್ವಾಮಿ ಗುಡುಗಿದರು.

ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಅಂತ ಹೇಳುತ್ತಾರೆ: ಕೆಎಸ್ ಈಶ್ವರಪ್ಪ

ವಿಜಯಪುರ: ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಅಂತ ಹೇಳುತ್ತಾರೆ. ಸರ್ಜಿಕಲ್ ಸ್ಟ್ರೈಕ್ ಆಯ್ತು ಅದು ಗೊತ್ತಿತ್ತಾ ಅವರಿಗೆ? ಅದು ಆದ ಮೇಲೆ ಒಂದು ಹೆಜ್ಜೆ ಆದರೂ ಅವರು ಮುಂದೆ ಬಂದಿದ್ದಾರಾ ಅವರು. ಪುಕ್ಕಲು ಯಾರು ಅನ್ನೋದು ಇಡೀ ವಿಶ್ವ ನೋಡತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಮೋದಿ ಪ್ರಧಾನಿ ಆಗುವ ಮುಂಚೆ ಇಡೀ ವಿಶ್ವ ಪಾಕಿಸ್ತಾನದ ಜೊತೆ ಇತ್ತು. ಭಾರತ ಒಬ್ಬಂಟಿಯಾಗಿತ್ತು. ಇಂದು ಎಲ್ಲರೊಂದಿಗೆ ಸ್ನೇಹ ಮಾಡಿ ಶಸ್ತ್ರಾಸ್ತ್ರ ಜಾಸ್ತಿ ಮಾಡಿಕೊಂಡು ಬಜೆಟ್​ನಲ್ಲಿ ಹೆಚ್ಚಿನ ಹಣ ಅದಕ್ಕೆ ಮೀಸಲು ಇಟ್ಟಿದ್ದರು. ಇಂದು ಇಡಿ ವಿಶ್ವ ಭಾರತದೊಂದಿಗೆ ಇದೆ ಪಾಕಿಸ್ತಾನ ಒಬ್ಬಂಟಿಯಾಗಿದೆ. ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದು ಹೇಳಿದ ಕೆಎಸ್ ಈಶ್ವರಪ್ಪ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Thu, 13 October 22