ಸ್ಟಿಂಗ್ ಆಪರೇಷನ್ ಪ್ರಕರಣ: ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ಕೊಟ್ಟ ವಿಡಿಯೋದಲ್ಲಿರುವ ಮಹಿಳೆ 

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿಸಿಬಿ ವಿಚಾರಣೆ ವೇಳೆ ಮಹಿಳೆಯಿಂದ ಸ್ಫೋಟಕ ಸತ್ಯ ಬಯಲಾಗಿದ್ದು ಮಾಜಿ ಸಿಎಂಗೆ ಕ್ಲೀನ್ ಚೀಟ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಕರಣದ ಹಿಂದೆ ಜೆಡಿಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಎಲ್ಲ ಸತ್ಯಾಂಶ ಬಿಚ್ಚಿಡ್ತೇನೆ ಎಂದೂ ಅವರು ತಿಳಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಪ್ರಕರಣ: ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ಕೊಟ್ಟ ವಿಡಿಯೋದಲ್ಲಿರುವ ಮಹಿಳೆ 
ಸಿದ್ದರಾಮಯ್ಯ
Image Credit source: PTI
Edited By:

Updated on: Oct 25, 2026 | 1:40 PM

ಬೆಂಗಳೂರು, ಅಕ್ಟೋಬರ್​​ 25: ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ವಿಡಿಯೋದಲ್ಲಿರುವ ಮಹಿಳೆ ಹೇಳಿಕೆಯನ್ನು ಸಿಸಿಬಿ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್​ಚಿಟ್​ ಸಿಗುವ ಸಾಧ್ಯತೆ ದಟ್ಟವಾಗಿದೆ. ಸಿದ್ದರಾಮಯ್ಯ ಯಾವುದೇ ತೊಂದರೆ ಕೊಟ್ಟಿಲ್ಲ. ನನಗೆ ಹೇಳಿಕೊಟ್ಟಹಾಗೆ ನಾನು ಹೇಳಿದ್ದೆ ಎಂದು ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದು, ತಾನು ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ ಎಂದಿದ್ದಾಳಂತೆ. ಹೀಗಾಗಿ ರೆಕಾರ್ಡ್ ಮಾಡುವವರ ಅಣತಿಯಂತೆ ಎಲ್ಲವೂ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಉದ್ದೇಶ ಪೂರ್ವಕವಾಗಿ ಹೇಳಿಕೆ ಪಡೆದು ವಿಡಿಯೋ ಮಾಡಿದ ಮಾಹಿತಿ ಲಭ್ಯವಾಗಿದೆ.

‘ಸ್ಟಿಂಗ್ ವಿವಾದಕ್ಕೆ ಜೆಡಿಎಸ್ ಮೂಲ ಕಾರಣ’

ಮತ್ತೊಂದೆಡೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಸ್ಫೋಟಕ ಆರೋಪ ಮಾಡಿದ್ದು, ಸ್ಟಿಂಗ್ ವಿವಾದಕ್ಕೆ ಜೆಡಿಎಸ್ ಮೂಲ ಕಾರಣ ಎಂದಿದ್ದಾರೆ. ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಎಂಬಾತನಿಂದ ಮೊಬೈಲ್ ಕೊಳ್ಳಲು 50 ಸಾವಿರ ಹಣ ರವಾನೆ ಆಗಿದೆ. ಸ್ಟಿಂಗ್ ವಿಡಿಯೋ ಹರಿಬಿಟ್ಟ ವ್ಯಕ್ತಿ ಕೆನಡಾಗೆ ಹೋಗಿ ವಿಡಿಯೋ ಆಪ್​​ಲೋಡ್ ಮಾಡಿದ್ದಾನೆ. ಇದಕ್ಕೂ ಮುಂಚೆ ಆತನಿಗೆ ಜೆಡಿಎಸ್ ನಿಂದಲೇ 5 ಲಕ್ಷ ಹಣ ಸಂದಾಯವಾಗಿದೆ. ಮೂವರನ್ನು ಅರೆಸ್ಟ್ ಮಾಡಿದ್ರೆ ಈ ವಿಚಾರದ ಸತ್ಯ ಹೊರಬರಲಿದೆ. ಓರ್ವ ಕುಮಾರಸ್ವಾಮಿ ರೈಟ್ ಹ್ಯಾಂಡ್ ಮತ್ತೊಬ್ಬ ಲೆಫ್ಟ್ ಹ್ಯಾಂಡ್, ಇನ್ನೊಬ್ಬ ಮಿಡಲ್ ಹ್ಯಾಂಡ್ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಸ್ಟಿಂಗ್​ ಆಪರೇಷನ್​​ ಪ್ರಕರಣ: ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ

‘ಇನ್ನೊಂದು ವಾರದಲ್ಲಿ ಎಲ್ಲ ಸತ್ಯಾಂಶ ಬಹಿರಂಗ’

ಮೋಹನ್ ಗೌಡ ಮನೆ ಮೇಲೆ ಸಿಸಿಬಿ ರೈಡ್ ಆಗಿದ್ದು, ಬರೋಬ್ಬರಿ 17 ಪೆನ್​​ಡ್ರೈವ್​​ಗಳು ಸಿಕ್ಕಿವೆ. ಅವುಗಳಲ್ಲಿ ಇರುವ ವಿಚಾರವನ್ನು ಖುದ್ದು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ಬಹಿರಂಗ ಪಡಿಸುತ್ತಾರೆ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಏನೇನ್ ಮಾಡಿದ್ರಿ? ಸುಪ್ರೀಂಕೋರ್ಟ್​​ನಲ್ಲಿ ದಾವೆ ಹೂಡಲು ವಕೀಲರಿಗೆ 10 ಲಕ್ಷ ಕೊಟ್ಟ ವಿಚಾರವೂ ಪೆನ್​​ಡ್ರೈವ್​​ನಲ್ಲಿದೆ. ಇನ್ನೊಂದು ವಾರದಲ್ಲಿ ಎಲ್ಲ ಸತ್ಯಾಂಶ ಬಿಚ್ಚಿಡ್ತೇನೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Major Relief For Siddaramaiah As Woman In Viral Sting Video Admits Being Scripted By Creators

Published On - 1:35 pm, Sun, 25 October 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us