ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಪ್ರಧಾನಿಯವರ ರಾಜ್ಯ ಪ್ರವಾಸ ಹಿನ್ನೆಲೆ ಪಿಎಂ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ರಿಲೀಸ್ ಮಾಡಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. #ನ್ಯಾಯಬೇಕು_ಮೋದಿ ಎಂಬ ಹ್ಯಾಶ್ ಟ್ಯಾಗ್ನಡಿ ಅಭಿಯಾನ ಶುರುಮಾಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ನಮ್ಮ ರೈತನ ನಂದಿನಿ ಮೇಲೆ ಗುಜರಾತ್ನ ಅಮುಲ್ ಕಣ್ಣು ಬಿದ್ದಿದೆ. ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ಬುದ್ಧಿ ಬಿಡುವುದು ಯಾವಾಗ? ಶರಾವತಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ? ಎಂದು ಟ್ವೀಟ್ ಮೂಲಕ ಮೋದಿಗೆ ಹಲವು ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ.
#ನ್ಯಾಯಬೇಕು_ಮೋದಿ @narendramodi @PMOIndia pic.twitter.com/uuZ7QbPVF7
— Siddaramaiah (@siddaramaiah) January 19, 2023
#ನ್ಯಾಯಬೇಕು_ಮೋದಿ @narendramodi @PMOIndia pic.twitter.com/fXS5u4rxbX
— Siddaramaiah (@siddaramaiah) January 19, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:55 pm, Thu, 19 January 23