ಹೊಸೂರುವರೆಗೂ ನಮ್ಮ ಮೆಟ್ರೋ ರೈಲು ಬಿಡಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಿದ್ದರಾಮಯ್ಯ
ತಮಿಳುನಾಡಿನ ಹೊಸೂರುವರೆಗೂ ನಮ್ಮ ಮೆಟ್ರೋ ವಿಸ್ತರಿಸಲು ಮನವಿ ಮಾಡಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಪತ್ರ ಬರೆದಿದ್ದಾರೆ.
ಬೆಂಗಳೂರು: ತಮಿಳುನಾಡಿನ ಹೊಸೂರುವರೆಗೂ ನಮ್ಮ ಮೆಟ್ರೋ ವಿಸ್ತರಿಸಲು ಮನವಿ ಮಾಡಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಪತ್ರ ಬರೆದಿದ್ದಾರೆ. ಬಿಎಂಆರ್ಸಿಎಲ್ – ನಮ್ಮ ಮೆಟ್ರೋ ಯೋಜನೆಯನ್ನ ( BMRCL Namma Metro) ಹೊಸೂರುವರೆಗೆ ವಿಸ್ತರಿಸಲು ಕೃಷ್ಣಗಿರಿ ಸಂಸದ ಚೆಲ್ಲಕುಮಾರ್ ಮನವಿ ಮಾಡಿದ್ದಾರೆ. ಹೊಸೂರಲ್ಲಿ 3,000ಕ್ಕೂ ಹೆಚ್ಚು ಸಣ್ಣ, ಮಧ್ಯಮ ಕೈಗಾರಿಕೆಗಳಿವೆ. ಆ ಕಂಪನಿಗಳ ಕಾರ್ಪೊರೇಟ್ ಕಚೇರಿಗಳು ಬೆಂಗಳೂರಿನಲ್ಲಿವೆ. ಹೀಗಾಗಿ ಹೊಸೂರುವರೆಗೂ ನಮ್ಮ ಮೆಟ್ರೋ ಸಂಪರ್ಕವನ್ನ ವಿಸ್ತರಿಸಿ ಎಂದು ಕೃಷ್ಣಗಿರಿ ಸಂಸದ ಚೆಲ್ಲಕುಮಾರ್ ಅವರ (Krishnagiri MP Chellakumar) ಮನವಿಯನ್ನು ಪರಿಶೀಲಿಸುವಂತೆ ಸಿಎಂ ಬೊಮ್ಮಾಯಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಘಾಜೀಯಾಬಾದ್-ಗ್ರೇಟರ್ ನೋಯ್ಡಾ ಹಾಗೂ ಹರಿಯಾಣದ ಗುರಗಾವ್ -ದೆಹಲಿ ಮಧ್ಯೆ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ. ಅದರಂತೆ ಬೆಂಗಳೂರು-ಹೊಸೂರು ಮಧ್ಯೆ ನಮ್ಮ ಮೆಟ್ರೋ ಮಾರ್ಗ ಕಲ್ಪಿಸುವಂತೆ ಸಂಸದ ಚೆಲ್ಲಕುಮಾರ್ ಗಮನ ಸೆಳೆದಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಕರೆಯಲಾಗಿದೆ. ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ನಿಯಮ 69 ಅಡಿ ಚರ್ಚೆಗೆ ಅವಕಾಶ ನೀಡದ ಸ್ಪೀಕರ್ ಬಗ್ಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ಸ್ಪೀಕರ್‌ಗೆ ಮರು ಅರ್ಜಿ ಸಲ್ಲಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚೆಗೆ ಅವಕಾಶ ಕೇಳುವ ಬಗ್ಗೆ, ಅನುದಾನ ವಿಚಾರವಾಗಿ ತಾರತಮ್ಯ ಪ್ರಸ್ತಾಪಿಸುವ ಬಗ್ಗೆ, ಗೃಹ ಮತ್ತು ಅರೋಗ್ಯ ಇಲಾಖೆಯ ಭ್ರಷ್ಟಾಚಾರ ವಿಚಾರವಾಗಿ ಉಭಯ ಸದನದಲ್ಲಿ ಪ್ರಸ್ತಾಪಿಸಲು ನಿರ್ಧಾರ ಮಾಡಲಾಗಿದೆ. ಹೊಸ ಶಾಸಕರಿಗೆ ಹೆಚ್ಚಿನ ಸಮಯ ನೀಡುವಂತೆ ಸ್ಪೀಕರ್ ಗೆ ಮನವಿ ಸಲ್ಲಿಸುವ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತುಕತೆ ನಡೆಯಲಿದೆ. ಸದನದಲ್ಲಿ ಇನ್ನಷ್ಟು ಅಗ್ರೆಸೀವ್ ಆಗಿ ಸರ್ಕಾರವನ್ನ ಕೌಂಟರ್ ಮಾಡೋ ಬಗ್ಗೆಯೂ ಮಾತುಕತೆ ನಡೆಯಲಿದೆ.
ಸಭೆಯಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ಹೆಚ್ ಕೆ ಪಾಟೀಲ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಶಾಸಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಗೌರವ, ಪ್ರತಿಷ್ಠೆ ಹಾಳುಮಾಡುತ್ತಿರುವ ಭ್ರಷ್ಟರು, ಮೊದಲು ಬಿಬಿಎಂಪಿಯನ್ನ ಸ್ವಚ್ಛಗೊಳಿಸಬೇಕಿದೆ -ಕುಮಾರಸ್ವಾಮಿ
ಇದನ್ನೂ ಓದಿ: ಬೆತ್ತಲಾಗಿ ಓಡಾಡ್ತಿದ್ದ ಬೆಂಗಳೂರಿನ ಬುದ್ಧಿಮಾಂದ್ಯ ಮಹಿಳೆಯ ರಕ್ಷಿಸಿ, ನೆರವಿನ ಹಸ್ತ ಚಾಚಿದ ಕೋಲಾರ ಪೊಲೀಸರು
Published On - 9:27 pm, Mon, 21 March 22