ಮಾನನಷ್ಟ ಕೇಸ್ ದಾಖಲಿಸುವುದಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರ: ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು
ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸಿದ್ದು ನಿಜ ಕನಸುಗಳು ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಈ ಕುರಿತಾಗಿ ಟಿವಿ9ಗೆ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಬಿಜೆಪಿ ಪಕ್ಷ ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಅವರನ್ನು ಗುರಿಯಾಗಿಸಿಕೊಂಡು ಸಿದ್ದು ನಿಜ ಕನಸುಗಳು ಪುಸ್ತಕ (Siddu Nija Kanasu Book) ಬಿಡುಗಡೆ ಮಾಡಲಾಗಿದೆ. ಮಾನನಷ್ಟ ಕೇಸ್ ದಾಖಲಿಸುವುದಾಗಿ ಕೂಡ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಾಗಿ ನಗರದಲ್ಲಿ ಟಿವಿ9ಗೆ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದು, ಮಾನನಷ್ಟ ಆಗುವ ಕೆಲಸ ಮಾಡಿದ್ದಾರೆಂದು ಇದರಿಂದ ಗೊತ್ತಾಗುತ್ತೆ. ಸಿದ್ದರಾಮಯ್ಯ ಹೇಳಿಕೆಗಳನ್ನು ನಾವು ಜನರ ಮುಂದೆ ಇಟ್ಟಿದ್ದೇವೆ. ಧರ್ಮ ಒಡೆಯುವ ಕೆಲಸ, ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಹಿಂದುತ್ವ ಎಂಬುದು ನಮ್ಮತನ, ಇದನ್ನು ಜನರಿಗೆ ಹೇಳುತ್ತೇವೆ ಅಷ್ಟೇ ಎಂದು ಹೇಳಿದರು.
ಹಿಂದೂ, ಹಿಂದುತ್ವ ಎರಡು ಒಂದೇ ಇದನ್ನು ಅರ್ಥಮಾಡಿಕೊಳ್ಳಲಿ
ನಾನು ಹಿಂದುತ್ವದ ವಿರುದ್ಧ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಹಿಂದೂ, ಹಿಂದುತ್ವ ಎರಡು ಒಂದೇ ಇದನ್ನು ಅರ್ಥಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಪುಸ್ತಕ ಬಿಡುಗಡೆ ವಿಚಾರವಾಗಿ ಮಾತನಾಡಿ, ಅವರು ಕೂಡ ಜನರಿಗೆ ಪುಸ್ತಕ ತಲುಪಿಸಲು ಅಡ್ಡಿಪಡಿಸುವುದಿಲ್ಲ. ಕಾನೂನು ಉಲ್ಲಂಘಿಸುವ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು.
ಇದನ್ನೂ ಓದಿ: ಇಂದು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ ಸಿದ್ಧರಾಮಯ್ಯ
ಇನ್ನು ಈ ಕುರಿತಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದು, ಬಿಜೆಪಿಯವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ಖಡ್ಗ ಹಿಡಿದುಕೊಂಡು ಡ್ರೆಸ್ ಹಾಕಿದ್ದವರು ಯಾರು? ನನ್ನ ತೇಜೋವಧೆ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ಬಿಜೆಪಿಯ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲೇ ಟೌನ್ ಹಾಲ್ ಮುಂದೆ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು, ‘ಸಿದ್ದು ನಿಜ ಕನಸುಗಳು’ ಪುಸ್ತಕ ಸುಟ್ಟು ಪ್ರತಿಭಟಿಸಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಟೌನ್ಹಾಲ್ನತ್ತ ಸಿದ್ದರಾಮಯ್ಯ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Siddu Nija Kanasugalu Book: ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ತಡೆಯುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೆಪಿಸಿಸಿ
ಸಿದ್ದರಾಮಯ್ಯ ಆಪ್ತರಿಂದಲೂ ಪುಸ್ತಕ ಬಿಡುಗಡೆಗೆ ಪ್ಲಾನ್
ಬಿಜೆಪಿಯ ಸಿದ್ದು ನಿಜ ಕನಸುಗಳು ಪುಸ್ತಕದ ಪ್ರತಿಯಾಗಿ ಸಿದ್ದರಾಮಯ್ಯ ಆಪ್ತರಿಂದಲೂ ಪುಸ್ತಕ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗುತ್ತಿದೆ. ‘ಸಿದ್ದು ನಿಜ ಕನಸು’ ಪುಸ್ತಕ ಬಿಡುಗಡೆಗೆ ಬೆಂಬಲಿಗರು ಮುಂದಾಗಿದ್ದಾರೆ. ಸದ್ಯ ಪೋಸ್ಟರ್ ಮೂಲಕ ಪುಸ್ತಕದ ಸಾರಾಂಶ ಪ್ರಕಟಿಸಿದ್ದು, ಸಿದ್ದರಾಮಯ್ಯ ಅವಧಿಯ ಕಾರ್ಯಕ್ರಮಗಳ ವಿವರವುಳ್ಳ ಪುಸ್ತಕ ಇದಾಗಿದೆ. ಈಗಾಗಲೇ ಸಿದ್ದರಾಮಯ್ಯ ಆಪ್ತರಿಂದ ಪುಸ್ತಕ ರಚನೆಯ ಕಾರ್ಯ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.