ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಮತ್ತು ಟೊಯೋಟಾ ಕಿರ್ಲೋಸ್ಕರ ಕಂಪನಿ‌ ನಡುವೆ ಬಂಡವಾಳ ಹೂಡಿಕೆ ಒಡಂಬಡಿಕೆ ಪತ್ರಕ್ಕೆ ಸಹಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 07, 2022 | 10:04 PM

ಕೈಗಾರಿಕೆಗಳು ಟೌನ್ ಶಿಪ್ ಮತ್ತು ಕಾರಿಡಾರ್ ಗಳನ್ನ ನಿರ್ಮಿಸುವುದರ ಮೂಲಕ ಹೊಸ ಭಾರತಕ್ಕೆ ನವ ಕರ್ನಾಟಕವನ್ನ ರೂಪಿಸುವುದು ನಮ್ಮ ಗುರಿಯಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಮತ್ತು ಟೊಯೋಟಾ ಕಿರ್ಲೋಸ್ಕರ ಕಂಪನಿ‌ ನಡುವೆ ಬಂಡವಾಳ ಹೂಡಿಕೆ ಒಡಂಬಡಿಕೆ ಪತ್ರಕ್ಕೆ ಸಹಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಬೆಂಗಳೂರಿನಲ್ಲಿ 4800 ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಯ (Investment) ಒಡಂಬಡಿಕೆ ಪತ್ರಕ್ಕೆ ಕರ್ನಾಟಕ ಸರ್ಕಾರ ಮತ್ತು ಟೊಯೋಟಾ ಕಿರ್ಲೋಸ್ಕರ ಕಂಪನಿ‌ ನಡುವೆ ಸಹಿ ಹಾಕಲಾಯಿತು. ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕಿ ಗುಂಜನ್ ಕೃಷ್ಣಾ‌ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ಸುದೀಪ್ ದಳವಿ ಹಾಗೂ ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಕೆಎಂ ಪ್ರಸಾದ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಕಿರ್ಲೋಸ್ಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮತ್ತು ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತಾನಾಡಿದ ಸಿಎಂ‌ ಬಸವರಾಜ್ ಬೊಮ್ಮಯಿ, ಕೈಗಾರಿಕೆಗಳು ಟೌನ್ ಶಿಪ್ ಮತ್ತು ಕಾರಿಡಾರ್ ಗಳನ್ನ ನಿರ್ಮಿಸುವುದರ ಮೂಲಕ ಹೊಸ ಭಾರತಕ್ಕೆ ನವ ಕರ್ನಾಟಕವನ್ನ ರೂಪಿಸುವುದು ನಮ್ಮ ಗುರಿಯಾಗಿದೆ. ನಮ್ಮ‌ ಬೀಲ್ಡ್ ಫಾರ್ ದಿ ವರ್ಲ್ಡ್ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕ ಸಲ್ಲೈ ಮತ್ತು ಚೈನ್ ಮತ್ತು ಉತ್ಪಾದನೆಯ ಕೇಂದ್ರವಾಗಿ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಟೊಯೋಟಾ ಸಮೂಹ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದ ಮಹತ್ವದ ಹೆಜ್ಜೆಯಾಗಿದೆ. ಎಲೆಕ್ಟ್ರಿಕ್ ವಾಹನಗಳ ಕೇಂದ್ರವಾಗಿರುವ ಕರ್ನಾಟಕ ಈ ತಿಳುವಳಿಕೆಯ ಒಪ್ಪಂದ, ರಾಜ್ಯದ ಸಾಧಾನೆಗೆ ಇನ್ನೊಂದು ಗರಿಯಾಗಿದೆ ಎಂದು ಹೇಳಿದರು.

ಟೊಯೋಟಾ ಸಮೂಹದ ಹೂಡಿಕೆಗಳು ಕರ್ನಾಟಕದಲ್ಲಿ ಸ್ಥಳೀಯ ಪೂರೈಕೆದಾರರ ಅಭಿವೃದ್ಧಿಗೆ ಕಾರಣವಾಗಿವೆ. ಇನ್ನುಂದೆ ಇನ್ನಷ್ಟು ಹೂಡಿಕೆ ಮತ್ತು ಉಧ್ಯೋಗ ಹೂಡಿಕೆಗೆ ನಾಂದಿ ಹಾಡಲಿದೆ ಎಂದು ಕೈಗಾರಿಕಾ ಖಾತೆ ಮುರುಗೇಶ್ ನಿರಾಣಿ ಹೇಳಿಕೆ ನೀಡಿದರು. ಸ್ಥಳೀಯ ಉತ್ಪಾದನಾ ವಲಯವನ್ನ ಉತ್ತೇಜಿಸುವರ ಜೊತೆಗೆ ಈ ಹೂಡಿಕೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯವಾಗಲಿವೆ. ಸಮುದಾಯಗಳ ಅಭಿವೃದ್ಧಿಗೂ ಇವು ಸಹಾಯವಾಗಲಿದೆ. ಟೊಯೋಟಾ ಸ್ಥಿರ, ಸುಸ್ಥಿರ, ಮತ್ತು ಸ್ಪರ್ಧಾತ್ಕಕವಾದ ಸಪ್ಲೈ ಚೈನ್ ರೂಪಿಸಲು ಬದ್ದತೆ ತೋರುತ್ತಿವೆ. ಸರಕಾರದ ಮೇನ್ ಇನ್ ಇಂಡಿಯಾ ಸ್ಟಳೀಯ ಆಟೋ ಬಿಡಿಭಾಗಗಳನ್ನ ಉತ್ತೇಜಿಸಲು ಹೆಚ್ಚು ಕ್ರಮಗಳನ್ನ ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮಗಳನ್ನ ಆಯೋಜಿಸಿ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ನೆರವಾಗಿದೆ. ಟೊಯೋಟಾ ಪೂರೈಕೆದಾರರ ಕೌಶಲ್ಯ ಹೆಚ್ಚಿಸಲು ಪ್ರತಿವರ್ಷ 40 ಸಾವಿರ ಗಂಟೆಗಳ ಶ್ರಮ ತನ್ನ ವ್ಯವಸ್ಥೆ ನಿರ್ವಹಣೆ ಮಾಡಿದೆ. ಟ್ರೈನಿಂಗ್ ಮತ್ತು ಹಾರ್ಡ್ ವೇರ್ ಡೆವಲಪ್ ಮೆಂಟ್ ಮೂಲಕ ವ್ಯಯಿಸುತ್ತಿದೆ ಎಂದು ಹೇಳಿದರು.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.