ಆಗಸ್ಟ್​​​​ನಲ್ಲಿ ಎರಡನೇ ಬಾರಿ ಗಾಳಿಪಟ ಹಾರಿಸ್ತಾರೆ ಭಟ್ರು; ‘ಗಾಳಿಪಟ 2’ ರಿಲೀಸ್ ದಿನಾಂಕ ಅನೌನ್ಸ್​

ಯೋಗರಾಜ್​ ಭಟ್​ ಅವರ ಸಿನಿಮಾ ಯಾವಾಗಲೂ ಡಿಫರೆಂಟ್​ ಆಗಿರುತ್ತವೆ. ಅವರ ಸಾಹಿತ್ಯವಂತೂ ಇನ್ನೂ ಡಿಫರೆಂಟ್​. ಇತ್ತೀಚೆಗೆ ರಿಲೀಸ್ ಆಗಿದ್ದ ಈ ಸಿನಿಮಾದ ‘ಎಕ್ಸಾಂ ಸಾಂಗ್​..’ ಮೆಚ್ಚುಗೆ ಪಡೆದುಕೊಂಡಿತ್ತು.

ಆಗಸ್ಟ್​​​​ನಲ್ಲಿ ಎರಡನೇ ಬಾರಿ ಗಾಳಿಪಟ ಹಾರಿಸ್ತಾರೆ ಭಟ್ರು; ‘ಗಾಳಿಪಟ 2’ ರಿಲೀಸ್ ದಿನಾಂಕ ಅನೌನ್ಸ್​
ದಿಗಂತ್​-ಗಣೇಶ್​-
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 07, 2022 | 9:57 PM

ಗಣೇಶ್ (Ganesh)​, ದಿಗಂತ್​, ಪವನ್​ ಕುಮಾರ್​ ನಟಿಸುತ್ತಿರುವ ‘ಗಾಳಿಪಟ 2’ (Gaalipata 2) ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯೋಗರಾಜ್​ ಭಟ್​ ನಿರ್ದೇಶನದ ಆ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮೊದಲು ತೆರೆಗೆ ಬಂದಿದ್ದ ‘ಗಾಳಿಪಟ’ ಸಿನಿಮಾ ಹಿಟ್ ಆಗಿತ್ತು. ಈಗ ಸೀಕ್ವೆಲ್​ನ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಈ ಬಗ್ಗೆ ಯೋಗರಾಜ್​ ಭಟ್ (Yogaraj Bhat)​ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯೋಗರಾಜ್​ ಭಟ್​ ಅವರ ಸಿನಿಮಾ ಯಾವಾಗಲೂ ಡಿಫರೆಂಟ್​ ಆಗಿರುತ್ತವೆ. ಅವರ ಸಾಹಿತ್ಯವಂತೂ ಇನ್ನೂ ಡಿಫರೆಂಟ್​. ಇತ್ತೀಚೆಗೆ ರಿಲೀಸ್ ಆಗಿದ್ದ ಈ ಸಿನಿಮಾದ ‘ಎಕ್ಸಾಂ ಸಾಂಗ್​..’ ಮೆಚ್ಚುಗೆ ಪಡೆದುಕೊಂಡಿತ್ತು. ವಿದ್ಯಾರ್ಥಿಗಳ ಪಾತ್ರದಲ್ಲಿ ಗಣೇಶ್​, ಪವನ್​ ಕುಮಾರ್​, ದಿಗಂತ್​ ಕಾಣಿಸಿಕೊಂಡಿದ್ದರು. ಈಗ ಸಿನಿಮಾ ತಂಡದಿಂದ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿದೆ. ಯೋಗರಾಜ್​ ಭಟ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಒಂದಿಷ್ಟು ಮೊಹಬ್ಬತ್, ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರುತ್ತಿದ್ದೇವೆ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ’ ಎಂದು ಯೋಗರಾಜ್​ ಭಟ್ ಬರೆದುಕೊಂಡಿದ್ದಾರೆ. ಈ ಮೂಲಕ ಆಗಸ್ಟ್​​ ಸಮಯದಲ್ಲಿ ಗಾಳಿಪಟ ಹಾರಿಸುವ ಘೋಷಣೆ ಆಗಿದೆ.

ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ ಕಾಂಬಿನೇಷನ್​ ಎಂದರೆ ಸಿನಿಪ್ರಿಯರಿಗೆ ಏನೋ ಒಂದು ಥರ ಕುತೂಹಲ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಆ ಸಿನಿಮಾ ಟ್ರೆಂಡ್​ ಸೆಟರ್​ ಚಿತ್ರವಾಗಿ ಹೊರಹೊಮ್ಮಿತ್ತು. ನಂತರ ‘ಗಾಳಿಪಟ’ ಸಿನಿಮಾದಲ್ಲಿಯೂ ಅವರಿಬ್ಬರು ಕಮಾಲ್​ ಮಾಡಿದ್ದರು. ಆ ಚಿತ್ರದಲ್ಲಿ ನಟ ದಿಗಂತ್​ ಕೂಡ ಕೈ ಜೋಡಿಸಿದ್ದರು. ಈಗ ‘ಗಾಳಿಪಟ 2’ (Gaalipata 2) ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿ ಆಗಿದೆ.

ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮಾ ಎಂ. ರಮೇಶ್​ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್​ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಗಾಳಿಪಟ’ ಚಿತ್ರ ಹಿಟ್ ಆಗಿತ್ತು. ಆ ಕಾರಣದಿಂದ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ ಎಂಬ ಕೌತುಕ ಮೂಡಿದೆ. ಬುಲೆಟ್​ ಪ್ರಕಾಶ್​, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ