ಬೆಂಗಳೂರಿನಲ್ಲಿ ಒಂದು ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ: ದೆಹಲಿ ಮಾದರಿ ವಾಯುಮಾಲಿನ್ಯಕ್ಕೆ ಸಾಕ್ಷಿಯಾಗುತ್ತಾ ಸಿಲಿಕಾನ್ ಸಿಟಿ?
ಬಿಬಿಎಂಪಿ ವ್ಯಾಪ್ತಿಯಲ್ಲಿ 1,940 km ನಷ್ಟು ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಈ ರಸ್ತೆಗಳು ಹೆಚ್ಚು ಕಮ್ಮಿ 60 ಲಕ್ಷ ವಾಹನಗಳನ್ನು ಮಾತ್ರ ಕೆಪಾಸಿಟಿ ಮಾತ್ರ ಹೊಂದಿದೆ. ಆದರೆ ಸದ್ಯಕ್ಕೆ 1 ಕೋಟಿಗೂ ಅಧಿಕ ವಾಹನಗಳಿವೆ.
ಬೆಂಗಳೂರು: ನಗರದಲ್ಲಿ ವಾಹನಗಳ (Vehicles) ಸಂಖ್ಯೆ 1 ಕೋಟಿ ಗಡಿ ದಾಟಿದ್ದು, ಸಿಲಿಕಾನ್ ಸಿಟಿಗೆ ನಗರದಲ್ಲಿ ಓಡಾಡುವ ವಾಹನಗಳು ಗಂಡಾಂತರ ತಂದೊಡ್ಡಬಹುದಾಗಿದೆ. ದೆಹಲಿ ಮಾದರಿ ವಾಯುಮಾಲಿನ್ಯಕ್ಕೆ ಬೆಂಗಳೂರು ಸಾಕ್ಷಿಯಾಗುತ್ತಾ ಎನ್ನುವ ಪ್ರಶ್ನೆ ಉಂಟಾಗಿದೆ. ನಗರದಲ್ಲಿ ಟ್ರಾಫಿಕ್, ಸಮಸ್ಯೆಯಿಂದ ವಾಯುಮಾಲಿನ್ಯ ಮಿತಿ ಮೀರಲಿದೆ. ಪ್ರತಿ ವರ್ಷವೂ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚುತ್ತಿದೆ. 2022 ರ ಮೇ ತಿಂಗಳ ವರೆಗೆ ಆಗಿರುವ ವಾಹನಗಳ ನೋಂದಣಿ ಅಂಕಿ ಅಂಶ ಹೀಗಿದೆ. ಬೆಂಗಳೂರು ನಗರದಲ್ಲಿ 68,72,763 ದ್ವಿಚಕ್ರ ವಾಹನಗಳಿವೆ. ರಾಜಧಾನಿಯಲ್ಲಿ 1,15,000 ಟ್ರಕ್, ಲಾರಿಗಳು ಓಡಾಡುತ್ತವೆ. ಟ್ಯಾಕ್ಸಿ, ಆಟೋ-3,50,000, ಇತರೆ ವಾಹನಗಳು-8,08,990. ಬೆಂಗಳೂರಲ್ಲಿ ಒಟ್ಟು ವಾಹನಗಳ ಸಂಖ್ಯೆ– 1,03,21,583. ದಿನೇ ದಿನೆ ವಾಹನಗಳ ನೋಂದಣಿ ಹೆಚ್ಚಳದಿಂದ ಆತಂಕ ಹೆಚ್ಚಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,940 km ನಷ್ಟು ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಈ ರಸ್ತೆಗಳು ಹೆಚ್ಚು ಕಮ್ಮಿ 60 ಲಕ್ಷ ವಾಹನಗಳನ್ನು ಮಾತ್ರ ಕೆಪಾಸಿಟಿ ಮಾತ್ರ ಹೊಂದಿದೆ. ಆದರೆ ಸದ್ಯಕ್ಕೆ 1 ಕೋಟಿಗೂ ಅಧಿಕ ವಾಹನಗಳಿವೆ, ಇದರಿಂದ ರಸ್ತೆ ಗುಣಮಟ್ಟಕ್ಕೆ ಹೊಡೆತ ಉಂಟಾಗಲಿದೆ. ಇದರ ಜೊತೆಗೆ ವಾಹನಗಳಿಂದ ವಾಯು ಮಾಲಿನ್ಯ ಈಗಾಗಲೆಡ ಮಿತಿ ಮೀರಿದೆ.
ಇನ್ನುಷ್ಟ ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.