ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಇಡೀ ಬೆಂಗಳೂರು ಸಜ್ಜಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿಲಿಕಾನ್ ಸಿಟಿ ಮಂದಿ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ದೀಪಾವಳಿಯ ಮೂರು ದಿನದ ಸಂಭ್ರಮಾಚರಣೆಗೆ ಜನ ನಗರದ ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೇಪೇಟೆಯಲ್ಲಿ ಹಬ್ಬದ ಖರೀದಿ ಜೋರಾಗಿ ಸಾಗಿದೆ. ದೀಪಾವಳಿ ಹಬ್ಬದ ಖರೀದಿಯಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ. ನಾಳೆ ದೀಪಾವಳಿ ಹಿನ್ನೆಲೆ ಇಂದೇ ಜನ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದು ಅವಶ್ಯಕ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದಾರೆ. ಹಬ್ಬಕ್ಕೆ ಹೂ, ಹಣ್ಣು, ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.
ಬೆಲೆ ಹೀಗಿದೆ
ಕೆ.ಜಿ ಮಲ್ಲಿಗೆ ಹೂವು; 1000-1200 ರೂ., ಕನಕಾಂಬರ: 1000-1300 ರೂ., ಕಾಕಡ: 400ರೂ., ಚೆಂಡು ಹೂ: 40 ರೂ., ಬಿಡಿ ಗುಲಾಬಿ ಹೂ ಕೆಜಿಗೆ: 100 ರೂ., ಸೇವಂತಿಗೆ: 30-60 ರೂ., ಸುಗಂಧರಾಜ: 60-70 ರೂ.,
ಏಲಕ್ಕಿ ಬಾಳೆ: 60 ರೂ, ಸೀಬೆ ಹಣ್ಣು: 60 ರೂ, ಮೋಸಂಬಿ: 60 ರೂ ಗೆ ಕೆ.ಜಿ, ಸೇಬು: 120-140 ರೂ, ಸಪೋಟಾ: 80 ರೂ, ಕಿತ್ತಳೆ: 50 ರೂ, ಬಿನ್ಸ್: 60 ರೂ, ಮೂಲಂಗಿ: 60 ರೂ, ಕೊತ್ತಂಬರಿ ಸೊಪ್ಪು ಕಟ್ಟು: 40-45 ರೂ, ಟೊಮ್ಯಾಟೊ: 40 ರೂ
ಇದನ್ನೂ ಓದಿ: Deepavali 2021: ದೀಪಾವಳಿಯಲ್ಲಿ ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸುವಂತೆ ಗ್ರಾಹಕರಿಗೆ ಕೇಂದ್ರ ಸರ್ಕಾರ ಮನವಿ