Deepavali 2021: ದೀಪಾವಳಿಯಲ್ಲಿ ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸುವಂತೆ ಗ್ರಾಹಕರಿಗೆ ಕೇಂದ್ರ ಸರ್ಕಾರ ಮನವಿ

ದೀಪಾವಳಿಯ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವಾಗ ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳನ್ನೇ ಖರೀದಿಸಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

Deepavali 2021: ದೀಪಾವಳಿಯಲ್ಲಿ ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸುವಂತೆ ಗ್ರಾಹಕರಿಗೆ ಕೇಂದ್ರ ಸರ್ಕಾರ ಮನವಿ
ಚಿನ್ನಾಭರಣ
Follow us
TV9 Web
| Updated By: shruti hegde

Updated on:Nov 03, 2021 | 8:33 AM

ದೀಪಾವಳಿಯ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವಾಗ ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳನ್ನೇ ಖರೀದಿಸಿ ಎಂದು ಕೇಂದ್ರ ಸರ್ಕಾರ ಮಂಗಳವಾರ ( ನವೆಂಬರ್ 2) ಖರೀದಿದಾರರಿಗೆ ಮನವಿ ಮಾಡಿದೆ. ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದಡಿಯ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ದೀಪಾವಳಿಯ ಸಂದರ್ಭದಲ್ಲಿ ತಾವು ಹಾಲ್ ಮಾರ್ಕ್ ಇರುವ ಆಭರಣಗಳನ್ನು ಮಾತ್ರ ಖರೀದಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಜನತೆಗೆ ಮನವಿ ಮಾಡಿದೆ.

ದೀಪಾವಳಿಯ ಶುಭ ದಿನದಂದು ಚಿನ್ನ ಖರೀಸುವ ಕುಟುಂಬಕ್ಕೆ ಒಳ್ಳೆಯದಾಗುತ್ತದೆ. ಸುಖ, ಶಾಂತಿ ನೆಮ್ಮದಿ ಜೊತೆಗೆ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಹೀಗಿರುವಾಗ ಅಷ್ಟು ದೊಡ್ಡ ಮೌಲ್ಯದ ಚಿನ್ನಾಭರಣ ಖರೀದಿಸುವಾಗ ಬಂಗಾರದ ಶುದ್ಧತೆಯನ್ನು ಖಾತ್ರಿಪಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಹೀಗಾಗಿ ಖರೀದಿಗೂ ಮುನ್ನು ಕೆಲವು ಅಂಶಗಳನ್ನು ನೆನಪಿನಲ್ಲಿಡಿ.

2021ರ ಜೂನ್ 23ರಿಂದ ಅನ್ವಯವಾಗುವಂತೆ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣ ಕಲಾಕೃತಿಗಳಿಗೆ ಹಾಲ್ ಮಾರ್ಕ್ ಅನ್ನು ದೇಶದ 256 ಜಿಲ್ಲೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಬಿಐಎಸ್ ನೋಂದಾಯಿತ ಆಭರಣಕಾರರು ಮಾತ್ರ ಹಾಲ್‌ ಮಾರ್ಕ್ ಆಭರಣಗಳನ್ನು ಮಾರಾಟ ಮಾಡಬಹುದು.

ಗ್ರಾಹಕರು ಗಮನಿಸಬೇಕಾದ ಅಂಶಗಳು:

*ಬಿಐಎಸ್ ನೋಂದಾಯಿತ ಆಭರಣಕಾರರಿಂದ ಕೇವಲ ಹಾಲ್ ಮಾರ್ಕ್ ಇರುವ ಚಿನ್ನ, ಬೆಳ್ಳಿಯ ಆಭರಣ ಮತ್ತು ಕಲಾಕೃತಿಗಳನ್ನು ಮಾತ್ರ ಖರೀದಿಸಿ

*ಹಾಲ್ ಮಾರ್ಕ್ ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸದಿದ್ದರೆ, ಚಿನ್ನಾಭರಣದ ಅಂಗಡಿಯವರಿಂದ ಮ್ಯಾಗ್ನಿಫೈಯಿಂಗ್ ಗಾಜು ಕೇಳಿ ಪಡೆಯಿರಿ

*ಆಭರಣ ಖರೀದಿಸಿದ ಬಿಲ್ ಮರೆಯದೇ​ ಪಡೆಯಿರಿ

ಬಿಐಎಸ್ ಈ ಸಂಬಂಧ ಟ್ವೀಟ್ ಮಾಡಿದ್ದು, ಕೇವಲ ಹಾಲ್ ಮಾರ್ಕ್ ಇರುವ ಆಭರಣ ಮಾತ್ರವೇ ಖರೀದಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ:

Diwali Muhurat Trading: ದೀಪಾವಳಿ ಹಬ್ಬದ ಮುಹೂರ್ತ ಟ್ರೇಡಿಂಗ್​ಗೆ ಹೂಡಿಕೆ ತಜ್ಞರಿಂದ 5 ಕಂಪೆನಿಯ ಷೇರು ಶಿಫಾರಸು

Deepavali 2021: ದೀಪಾವಳಿ ಹಬ್ಬಕ್ಕೆ ಮನೆಯನ್ನು ಅಲಂಕರಿಸಲು ಕಲರ್​ಫುಲ್​ ರಂಗೋಲಿ ಡಿಸೈನ್ಸ್​ಗಳು; ನಿಮಗಿಷ್ಟದ ರಂಗೋಲಿ ಆಯ್ದುಕೊಳ್ಳಿ

Published On - 8:21 am, Wed, 3 November 21