AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ದೇಶದಾದ್ಯಂತ ಹಬ್ಬದ ಪ್ರಯುಕ್ತ ಈ ವಾರದಲ್ಲಿ 5 ದಿನ ಬ್ಯಾಂಕ್ ರಜಾ

ಈ ವಾರದಲ್ಲಿ 5 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್​ಗಳು ಕೆಲಸ ನಿರ್ವಹಿಸುವುದಿಲ್ಲ. ಎಲ್ಲೆಲ್ಲಿ ಮತ್ತು ಯಾವ ಕಾರಣಕ್ಕೆ ರಜಾ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Bank Holidays: ದೇಶದಾದ್ಯಂತ ಹಬ್ಬದ ಪ್ರಯುಕ್ತ ಈ ವಾರದಲ್ಲಿ 5 ದಿನ ಬ್ಯಾಂಕ್ ರಜಾ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 03, 2021 | 11:54 AM

Share

ಈ ವಾರದಲ್ಲಿ ಏನಾದರೂ ಬ್ಯಾಂಕ್​ ಶಾಖೆಗೆ ತೆರಳಿ ಮಾಡಬೇಕಾದ ಕೆಲಸಗಳೇನಾದರೂ ಇದ್ದವಾ? ಸರಿಯಾಗಿ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ಇಂದಿನಿಂದ, ಅಂದರೆ ನವೆಂಬರ್ 3ರಿಂದ 5 ದಿನಗಳ ಕಾಲ ದೇಶದ ನಾನಾ ಭಾಗಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಅಧಿಕೃತ ರಜಾ ದಿನಗಳ ಪಟ್ಟಿಯಂತೆಯೇ ಈ ರಜಗಳು ಇವೆ. ಆದ್ದರಿಂದ ಈಗಲೇ ನೋಡಿಕೊಂಡು ಬಿಡಿ; ಯಾವುದಾದರೂ ಬ್ಯಾಂಕ್​ ಕೆಲಸಗಳು ಇದ್ದಲ್ಲಿ ಮುಂದಕ್ಕೆ ಹಾಕಿಕೊಳ್ಳಿ. ಅಷ್ಟೇ ಅಲ್ಲ, ಮುಂದಿನ ವಾರ ಸಹ ಇದೇ ಥರ ಕಿಕ್ಕಿರಿದ ರಜಾ ದಿನಗಳಿವೆ. ಮುಂದಿನ ವಾರ ಸಹ 5 ದಿನಗಳ ಕಾಲ ರಜಾ ಇರಲಿದೆ. ಆದ್ದರಿಂದ ಬ್ಯಾಂಕ್​ಗಳ ಕಾರ್ಯ ನಿರ್ವಹಣೆ ಇಲ್ಲದ ದಿನಗಳು ಯಾವುವು ಎಂಬ ಕಡೆಗೆ ಗಮನ ನೀಡಿ.

ಬ್ಯಾಂಕ್ ರಜಾ ದಿನಗಳು ನವೆಂಬರ್ 3: ನರಕ ಚತುರ್ದಶಿ ಪ್ರಯುಕ್ತ ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ರಜಾ.

ನವೆಂಬರ್ 4: ಕರ್ನಾಟಕವನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲೂ ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜಾ ಪ್ರಯುಕ್ತ ರಜಾ.

ನವೆಂಬರ್ 5: ಗುಜರಾತ್, ಕರ್ನಾಟಕ, ಉತ್ತರಪ್ರದೇಶ, ಉತ್ತರಾಖಂಡ, ಸಿಕ್ಕಿಂ, ರಾಜಸ್ಥಾನ, ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ/ ವಿಕ್ರಂ ಸಂವಂತ್ ಹೊಸ ವರ್ಷದ ದಿನ/ ಗೋವರ್ಧನ್ ಪೂಜೆ ರಜಾ ಇದೆ.

ನವೆಂಬರ್ 6 ಸಿಕ್ಕಿಂ, ಮಣಿಪುರ್, ಹಿಮಾಚಲ್ ಪ್ರದೇಶ್, ಉತ್ತರಪ್ರದೇಶದಲ್ಲಿ ಭಾಯ್ ದುಜ್/ ಚಿತ್ರಗುಪ್ತ್ ಜಯಂತಿ/ಲಕ್ಷ್ಮೀ ಪೂಜೆ/ದೀಪಾವಳಿ/ನಿಂಗೊಲ್ ಛಾಕೌಬ

ನವೆಂಬರ್ 7 ಭಾನುವಾರದ ಪ್ರಯುಕ್ತ ರಜಾ

ಈ ತಿಂಗಳಲ್ಲಿ ಇರುವ ಇತರ ಬ್ಯಾಂಕ್ ರಜಾ ದಿನಗಳು ನವೆಂಬರ್ 10 ಛಾತ್ ಪೂಜಾ/ ಸೂರ್ಯ ಪಷ್ಟಿ ದಳ ಛಾತ್ (ಸಾಯನ್ ಅರ್ಧ್ಯ)

ನವೆಂಬರ್ 11 ಛಾತ್ ಪೂಜಾ

ನವೆಂಬರ್ 12 ವಂಗಲ ಹಬ್ಬ

ನವೆಂಬರ್ 13 ಎರಡನೇ ಶನಿವಾರ

ನವೆಂಬರ್ 14 ಭಾನುವಾರ

ನವೆಂಬರ್ 19 ಗುರು ನಾನಕ್ ಜಯಂತಿ/ಕಾರ್ತೀಕ ಪೂರ್ಣಿಮೆ

ನವೆಂಬರ್ 21 ಭಾನುವಾರ

ನವೆಂಬರ್ 22 ಕನಕದಾಸ ಜಯಂತಿ

ನವೆಂಬರ್ 23 ಸೆಂಗ್​ ಕುಟ್ಸೆನೆಮ್

ನವೆಂಬರ್ 27 ನಾಲ್ಕನೇ ಶನಿವಾರ

ನವೆಂಬರ್ 28 ಭಾನುವಾರ

ಇದನ್ನೂ ಓದಿ: Car Loans: ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ಒದಗಿಸುತ್ತಿವೆ ಈ 9 ಬ್ಯಾಂಕ್​ಗಳು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ