ರೇಷ್ಮೆಗೂಡು ಬೆಲೆ ಕುಸಿತ: ಆತಂಕಕ್ಕೆ ಒಳಗಾಗಬೇಡಿ, ಸರ್ಕಾರ ಮಧ್ಯ ಪ್ರವೇಶಿಸಲಿದೆ ಎಂದ ಕೆಸಿ ನಾರಾಯಣಗೌಡ

ರೇಷ್ಮೆಗೂಡು ಬೆಲೆ ಕುಸಿತ ಹಿನ್ನೆಲೆ ರಾಜ್ಯದ ರೇಷ್ಮೆ ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ರೇಷ್ಮೆಗೂಡು ಬೆಲೆ ಕುಸಿತ: ಆತಂಕಕ್ಕೆ ಒಳಗಾಗಬೇಡಿ, ಸರ್ಕಾರ ಮಧ್ಯ ಪ್ರವೇಶಿಸಲಿದೆ ಎಂದ ಕೆಸಿ ನಾರಾಯಣಗೌಡ
ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 11, 2023 | 5:56 PM

ಬೆಂಗಳೂರು: ರೇಷ್ಮೆಗೂಡು ಬೆಲೆ ಕುಸಿತ ಹಿನ್ನೆಲೆ ರಾಜ್ಯದ ರೇಷ್ಮೆ ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ (KC Narayana Gowda) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ರೇಷ್ಮೆ ಬೆಳೆಗಾರರು ಆತಂಕಪಡಬೇಡಿ, ಸರ್ಕಾರ ಮಧ್ಯ ಪ್ರವೇಶಿಸಲಿದೆ. ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತ ಕಂಡಿರುವುದು ತಾತ್ಕಾಲಿಕವಷ್ಟೇ. ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ‌. ಕಚ್ಚಾ ರೇಷ್ಮೆ ಖರೀದಿಗೆ ರೇಷ್ಮೆ ಮಾರಾಟ ಮಂಡಳಿಯಿಂದ ತುರ್ತು ಕ್ರಮಕೈಗೊಳ್ಳಲಾಗುವುದು. ರೇಷ್ಮೆ ಬೆಳೆಗಾರರು ಆತಂಕಪಡಬೇಕಿಲ್ಲ, ಸರ್ಕಾರ ನಿಮ್ಮ ಪರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೇಷ್ಮೆಗೂಡಿನ ಬೆಲೆ ದಿಢೀರನೆ ಕುಸಿತ ಕಂಡಿದ್ದು ದ್ವಿತಳಿಯ ಗೂಡಿಗೆ ಪ್ರತಿ ಒಂದು ಕೆ,ಜಿಗೆ 800 ರಿಂದ 900 ರೂ ಇದ್ದ ಬೆಲೆ ಈಗ 500 ರಿಂದ 600 ರೂ. ಗೆ ಕುಸಿತವಾಗಿದೆ. ಸಿ.ಬಿ ಗೂಡಿಗೆ 600 ರಿಂದ 700 ರೂ. ಇದ್ದ ಬೆಲೆ ಈಗ 300 ರಿಂದ 400 ರೂ.ಗಳಿಗೆ ಇಳಿಕೆ ಆಗಿದ್ದು, ತಕ್ಷಣ ಸರ್ಕಾರ ರೇಷ್ಮೆ ಬೆಳೆಗಾರರ ರಕ್ಷಣೆಗಾಗಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ

ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ರೇಷ್ಮೆ ಬೆಳೆಯನ್ನೆ ನಂಬಿ ಎಷ್ಟೋ ಕುಟುಂಬದ ಯುವಕರು ಪಟ್ಟಣದಿಂದ ವಲಸೆ ಬಂದು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅವರು ಬೀದಿಗೆ ಬೀಳುವ ಪರಿಸ್ಥತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಬೆಂಗಳೂರು, ದುಬೈ, ಮಲೇಷ್ಯಾ ಮೊದಲಾದೆಡೆ ಎಷ್ಟಿದೆ ದರ?

ಭಾರತದಲ್ಲಿ ಚಿನ್ನದ ಬೆಲೆಯಲ್ಲಿ (Gold Prices in India) ಇಳಿಕೆಯ ಟ್ರೆಂಡ್ ಮುಂದುವರಿಯುತ್ತಿದೆ. 10 ಗ್ರಾಮ್​ಗೆ ಇನ್ನಷ್ಟು 100 ರುಪಾಯಿ ಅಗ್ಗವಾಗಿದೆ ಚಿನ್ನಬೆಳ್ಳಿ ಬೆಲೆಯೂ ಒಂದು ಕಿಲೋಗೆ 100ರುಪಾಯಿಯಷ್ಟು ಕಡಿಮೆ ಆಗಿದೆಭಾರತದಲ್ಲಿ ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 50,900 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 55,530 ರೂ ಇದೆಬೆಂಗಳೂರಿನಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ

ಇದನ್ನೂ ಓದಿ: ಅತಿವೃಷ್ಟಿ, ಥರಗುಟ್ಟುವ ಚಳಿ ಪರಿಣಾಮ ರಾಮನಗರ ರೇಷ್ಮೆಗೂಡಿನಲ್ಲಿ ಬಂಪರ್ ಧಾರಣೆ, ಇ-ಪಾವತಿಯಿಂದ ರೈತರು ಇನ್ನಷ್ಟು ನಿರಾಳ

ನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ನಿನ್ನೆ 10 ಗ್ರಾಮ್​ಗೆ 650 ರೂನಷ್ಟು ಕಡಿಮೆ ಆಗಿತ್ತುಈಗ 51,050 ರೂ ಇದ್ದ ಚಿನ್ನದ ಬೆಲೆ ಈಗ 50,950 ರುಪಾಯಿ ಆಗಿದೆಬಹುತೇಕ ಇತರ ದಕ್ಷಿಣ ರಾಜ್ಯಗಳಲ್ಲೂ ಇದೇ ಬೆಲೆ ಇದೆಇನ್ನುನಿನ್ನೆ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 10 ರುಪಾಯಿಯಷ್ಟು ಕಡಿಮೆ ಆಗಿದೆಬೆಳ್ಳಿ ಬೆಲೆ 10 ಗ್ರಾಮ್​ಗೆ 654.50 ರೂಪಾಯಿ ಇದೆಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 674 ರೂ ಆಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:41 pm, Sat, 11 March 23

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ