ಅಕ್ರಮ ಗಣಿಗಾರಿಕೆ ತನಿಖೆಯ ಎಸ್ಐಟಿ ಅವಧಿ ಒಂದು ವರ್ಷಕ್ಕೆ ವಿಸ್ತರಣೆ

| Updated By: preethi shettigar

Updated on: Mar 30, 2022 | 9:26 PM

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಸನ್ನಡತೆ ಆಧಾರದಲ್ಲಿ 114 ಖೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.  ರಾಯಚೂರು ವಿಮಾನ ನಿಲ್ದಾಣ​​ ಅಭಿವೃದ್ಧಿಗೆ 185.57 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ಅಕ್ರಮ ಗಣಿಗಾರಿಕೆ ತನಿಖೆಯ ಎಸ್ಐಟಿ ಅವಧಿ ಒಂದು ವರ್ಷಕ್ಕೆ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಅಕ್ರಮ ಗಣಿಗಾರಿಕೆ ತನಿಖೆಯ ಎಸ್​ಐಟಿ (SIT) ಅವಧಿ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಸನ್ನಡತೆ ಆಧಾರದಲ್ಲಿ 114 ಕೈದಿಗಳ (prisoners) ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.  ರಾಯಚೂರು ವಿಮಾನ ನಿಲ್ದಾಣ (Airport) ಅಭಿವೃದ್ಧಿಗೆ 185.57 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಇನ್ನಿತರ ನಿರ್ಧಾರಗಳು

  • ರೈಟ್ಸ್ ಇಂಡಿಯಾ ಲಿ.‌ ಕಂಪನಿಗೆ ಗುತ್ತಿಗೆ ನೀಡಲು ಒಪ್ಪಿಗೆ
  • ಉಡುಪಿಯ ಹಾಜಿ ಅಬ್ದುಲ್ಲಾ ಆಸ್ಪತ್ರೆ ಸರ್ಕಾರದ ಸುಪರ್ದಿಗೆ ಸಂಪುಟ ಒಪ್ಪಿಗೆ
  • ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಬ್ರಿಡ್ಜ್​ ನಿರ್ಮಾಣ
  • 68.88 ಕೋಟಿ ರೂಪಾಯಿ ವೆಚ್ಚದಲ್ಲಿ 4 ಸೇತುವೆಗಳ ನಿರ್ಮಾಣಕ್ಕೆ ಒಪ್ಪಿಗೆ
  • ರಾಮನಗರ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
  • 93.33 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಸಭೆ ಸಮ್ಮತಿ ನೀಡಿದೆ.

2021ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರ್ಕಾರ; 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್

ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಕಟವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್​ಪಿ, ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗೆ ಪದಕ ನೀಡಲಾಗುತ್ತಿದೆ. ಸಿಐಡಿ ಡಿವೈಎಸ್​ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್​ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್​ಪೆಕ್ಟರ್​ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ:
Aryan Khan: ಕ್ರೂಸ್ ಶಿಪ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂಬ ವರದಿ ಅಲ್ಲಗಳೆದ ಎಸ್​ಐಟಿ

ದೆಹಲಿಯ ಮೂರು ಕಾರ್ಪೊರೇಷನ್‌ಗಳನ್ನು ವಿಲೀನಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Published On - 9:17 pm, Wed, 30 March 22