Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Adugodi police: ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
Beedi: ಆಡುಗೋಡಿಯಲ್ಲಿ ಬೀಡಿ ಕೊಡಲಿಲ್ಲಾಂತ ಗೆಳೆಯನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 30, 2022 | 8:06 PM

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಸಾವಿಗೆ ಕಾರಣವಾಗಿದ್ದ (murder) ಒಬ್ಬ ವ್ಯಕ್ತಿಗೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಆಡುಗೋಡಿಯ ಬಳಿ (Adugodi police) ಲಕ್ಷ್ಮಣ ರಾವ್ ನಗರದ ನಿವಾಸಿ ಅಬ್ದುಲ್ ವಾಸಿಂ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಮೇಲಿನ ಆರೋಪ ಋಜುವಾದ ಹಿನ್ನೆಲೆಯಲ್ಲಿ ನಗರದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್​ ಶಿರಹಟ್ಟಿ ಅಪರಾಧಿಗೆ ಜೀವಾವಧಿ ಶಿಕ್ಷೆ (life imprisonment) ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ: ಬೆಂಗಳೂರು ಆಡುಗೋಡಿಯ ನಿವಾಸಿಗಳಾದ ಪರಮೇಶ್ (39) ಹಾಗೂ ಆರೋಪಿ ಅಬ್ದುಲ್ ವಾಸೀಂ ಮಧ್ಯೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. 2020ರ ಜುಲೈ 20ರಂದು ಮಧ್ಯಾಹ್ನ ಪರಮೇಶ್ ಬಳಿ ಅಬ್ದುಲ್ ವಾಸಿಂ ಬೀಡಿ ಕೇಳಿದ್ದ. ಅದಕ್ಕೆ ತನ್ನ ಬಳಿ ಬೀಡಿ ಇಲ್ಲ ಎಂದು ಹೇಳಿದ್ದ. ಅದಕ್ಕೆ ವಾಸಿಂ ಜಗಳ ಮಾಡಿ ಹೋಗಿದ್ದ. ಅದಾದ ಮೇಲೆ ಅರ್ಧ ಗಂಟೆಗೆಲ್ಲಾ ವಾಪಸಾಗಿ ಪರಮೇಶ್ ಮನೆಗೆ ನುಗ್ಗಿ, ಹಲ್ಲೆಗೆ ಮುಂದಾಗಿದ್ದ. ಆತನನ್ನು ರಸ್ತೆಗೆ ಎಳೆದು ಸ್ಕ್ರೂ ಡ್ರೈವರ್​​ನಿಂದ ಕಿವಿ ಮತ್ತು ಕುತ್ತಿಗೆ ಭಾಗದಲ್ಲಿ ಇರಿದಿದ್ದ ವಾಸಿಂ. ಘಟನೆಯಲ್ಲಿ ಪರಮೇಶ್ ಮೃತಪಟ್ಟಿದ್ದರು.

ಘಟನೆ ಸಂಬಂಧ ಆಡಗೋಡಿ ಪೊಲೀಸರು ಆರೋಪಿ ಅಬ್ದುಲ್ ವಾಸಿಂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಮುಂದೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ವಾದ ಮಂಡಿಸಿದ್ದರು.

ಗೋಡೌನ್ ಮೆಟಿರಿಯಲ್ ತುಂಬಿದ್ದ ವಾಹನ ಹೈಜಾಕ್ ಮಾಡಿದ ಮಾಜಿ ಶಾಸಕನ ಪತ್ನಿ, ಮುಂದೇನಾಯ್ತ? ಬೆಂಗಳೂರು: ಮಾಜಿ ಶಾಸಕನ ಪತ್ನಿ, ವೇರ್ ಹೌಸ್ ಮೆಟಿರಿಯಲ್ಸ್ ತುಂಬಿದ್ದ ವಾಹನ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಯಲಹಂಕಕ್ಕೆ ಬರಬೇಕಿದ್ದ ವೇರ್ ಹೌಸ್ ಮೆಟಿರಿಯಲ್ಸ್, ಮೆಷಿನ್ಗಳನ್ನು ಕೃಷ್ಣಗಿರಿಯಲ್ಲಿ ಹೈಜಾಕ್ ಮಾಡಲಾಗಿದೆ.

ಕೃಷ್ಣಗಿರಿ ಮಾಜಿ ಶಾಸಕ ಸುಗೋಟಿಯನ್ ಪತ್ನಿ ಪಾರ್ವತಿ ಮೇಲೆ ದಾಂದಲೆ ಆರೋಪ ಕೇಳಿ ಬಂದಿದೆ. ಎಸ್ ಕೆ ಕಸ್ಟ್ರಕ್ಷನ್ ಮಾಲೀಕ ಎಸ್. ಕಾರ್ತೀಕ್ 30 ಲಕ್ಷ ಮೌಲ್ಯದ ಮೆಟಿರಿಯಲ್ಸ್ ಬುಕ್ ಮಾಡಿದ್ದರು. ವೇರ್ ಹೌಸ್ನ ಅಭಿ ಇಂಡಸ್ಟ್ರೀಸ್ ಮಾಲೀಕ ಅಭಿಷೇಕ್ ಹಣ ನೀಡಬೇಕೆಂದು ದಾಂದಲೆ ಮಾಡಿದ್ದಾರೆ. ಸದ್ಯ ಈ ಸಂಬಂಧ ಕೃಷ್ಣಗಿರಿಗೆ ಎಸ್.ಪಿಗೆ ದೂರು ನೀಡಲು ಯಲಹಂಕ ಎಸ್.ಕೆ.ಕಸ್ಟ್ರಕ್ಷನ್ ಕಾರ್ತೀಕ್ ಮುಂದಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ

ಇದನ್ನೂ ಓದಿ: 800 ರೂ ಆದ ಮಟನ್ ಬೆಲೆ; ಬನ್ನೇರುಘಟ್ಟ ಪಂಚಾಯಿತಿ‌ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಬೆಲೆ ಮಾರಿದ್ರೆ ಕಠಿಣ‌ ಕ್ರಮ ಎಂದು ನೋಟಿಸ್

Published On - 8:02 pm, Wed, 30 March 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ