ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ

ಇಲ್ಲಿ ಸಾಧಾರಣ ರೇಷ್ಮೆ ಸೀರೆಗಳು, ಪ್ಯೂರ್ ರೇಷ್ಮೆ ಸೀರೆ, ಆರ್ಟ್ಸೆಂಟ್ ಸ್ಯಾರೀಸ್, ತ್ರಿಡಿ ಸ್ಯಾರೀಸ್, ಸೇರಿದಂತೆ ಹಲವು ಬಗೆಯ ಸೀರೆಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಕೇವಲ ಸೀರೆಗಳನ್ನು ತಯಾರು ಮಾಡುವುದಷ್ಟೇ ಅಲ್ಲದೆ ಸೀರೆ ಖರೀದಿ ಮಾಡಲು ಬರುವ ಜನರಿಗೆ ರೇಷ್ಮೆ ಸೀರೆಗಳನ್ನು ಹೇಗೆ ತಯಾರು ಮಾಡಲಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ನೀಡುತ್ತಾರೆ.

ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ
ಕೋಲಾರದಲ್ಲಿ ರೇಷ್ಮೆ ಸೀರೆ ಉದ್ಯಮದಲ್ಲಿ ಗ್ರಾಮೀಣ ದಂಪತಿ ವಿಭಿನ್ನ ಪ್ರಯತ್ನ, ಹುಟ್ಟೂರಲ್ಲಿ ಉದ್ಯಮ ಮಾಡಿ ಸಾಧನೆ
Follow us
TV9 Web
| Updated By: ಆಯೇಷಾ ಬಾನು

Updated on: Mar 30, 2022 | 7:10 PM

ಕೋಲಾರ: ಆ ಜಿಲ್ಲೆ ರೇಷ್ಮೆ ಬೆಳೆಯೋದಕ್ಕೆ ಪ್ರಸಿದ್ದಿ ಪಡೆದರೂ ಆ ಊರಿನ ಹೆಸರಲ್ಲಿ ರೇಷ್ಮೆ ಸೀರೆಗಳನ್ನು ತಯಾರು ಮಾಡಿಲ್ಲ. ಸಾಮಾನ್ಯವಾಗಿ ರೇಷ್ಮೆ ಸೀರೆ ಅಂದ್ರೆ ಮೈಸೂರು ಸಿಲ್ಕ್, ಕಾಂಚಿಪುರಂ, ಬನಾರಸ್, ಕಂಚಿ ಸಿಲ್ಕ್ ಹೀಗೆ ಬೇರೆ ಬೇರೆ ಊರಿನ ಹೆಸರನ್ನೇ ಹೇಳಬೇಕಿದೆ, ಆದರೆ ಅದೊಂದು ದಂಪತಿಗಳು ಆ ಬರದ ನಾಡಲ್ಲಿ ರೇಷ್ಮೆ ಸೀರೆಯ ಹೆಸರನ್ನು ಹುಟ್ಟುಹಾಕಲು ತೆರೆಮರೆಯ ಪ್ರಯತ್ನ ಮಾಡತೊಡ್ಡಗಿದ್ದಾರೆ.

ಕುಗ್ರಾಮದಲ್ಲಿ ನಿರ್ಮಾಣವಾಗಿದೆ ಬೃಹತ್ ರೇಷ್ಮೆ ಉದ್ಯಮ ಕೋಲಾರದ ಅಂಕತಟ್ಟಿ ಗ್ರಾಮದ ಉದಯರವಿ ಹಾಗೂ ಸೌಮ್ಯ ದಂಪತಿ ರೇಷ್ಮೆ ಸೀರೆಯ ಡಿಸೈನ್ ಮಾಡುವ ಯಂತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ತಾವು ತಯಾರು ಮಾಡುವ ಯಂತ್ರಗಳನ್ನು ಇಡೀ ದೇಶಾದ್ಯಂತ ಸರಬರಾಜು ಮಾಡುತ್ತಾರೆ. ಆದರೆ ಅವರಿಗೆ ತಮ್ಮ ಹುಟ್ಟೂರಲ್ಲಿ ಏನಾದರೂ ಮಾಡಬೇಕೆಂದು ನಿರ್ಧಾರ ಮಾಡಿದ ದಂಪತಿ ಕೋಲಾರದಲ್ಲೇ ರೇಷ್ಮೆ ಸೀರೆಯನ್ನು ತಯಾರು ಮಾಡಲು ನಿರ್ಧರಿಸಿದ್ದಾರೆ. ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಹತ್ತು ಎಕರೆ ಪ್ರದೇಶದಲ್ಲಿ ಸುಂದರ ವಾತಾವರಣವನ್ನು ನಿರ್ಮಾಣ ಮಾಡಿ, ಒಂದು ವಿಶಾಲವಾದ ಮಗ್ಗವನ್ನು ನಿರ್ಮಾಣ ಮಾಡಿದ್ದು ಅಲ್ಲಿ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಉದಯರವಿ ನಿಸರ್ಗಧಾಮ ನಿರ್ಮಾಣ ಮಾಡಿ, ಅದರಲ್ಲಿ ಉದಯರವಿ ವಸ್ತ್ರಾಲಯ ಮಾಡಿದ್ದಾರೆ. silk saree manufacturing 1

ಇದು ಸೀರೆ ಖರೀದಿ ಕೇಂದ್ರವಲ್ಲ, ರೇಷ್ಮೆ ಸೀರೆಯ ಪಾಠಶಾಲೆ ಇಲ್ಲಿ ಸಾಧಾರಣ ರೇಷ್ಮೆ ಸೀರೆಗಳು, ಪ್ಯೂರ್ ರೇಷ್ಮೆ ಸೀರೆ, ಆರ್ಟ್ಸೆಂಟ್ ಸ್ಯಾರೀಸ್, ತ್ರಿಡಿ ಸ್ಯಾರೀಸ್, ಸೇರಿದಂತೆ ಹಲವು ಬಗೆಯ ಸೀರೆಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಕೇವಲ ಸೀರೆಗಳನ್ನು ತಯಾರು ಮಾಡುವುದಷ್ಟೇ ಅಲ್ಲದೆ ಸೀರೆ ಖರೀದಿ ಮಾಡಲು ಬರುವ ಜನರಿಗೆ ರೇಷ್ಮೆ ಸೀರೆಗಳನ್ನು ಹೇಗೆ ತಯಾರು ಮಾಡಲಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಜನರು ಸೀರೆ ತಯಾರು ಮಾಡುವುದನ್ನು ವೀಕ್ಷಣೆ ಮಾಡಲು ಅವಕಾಶ ನೀಡಿ, ಸೀರೆ ಬಗ್ಗೆ ತಮಗಿರುವ ಎಲ್ಲಾ ಅನುಮಾನಗಳನ್ನು ನಿವಾರಿಸಿಕೊಂಡು ನಂತರ ಸೀರೆ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಉದಯರವಿ ತಿಳಿದಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ, ಕಡಿಮೆ ದರದ ಬಟ್ಟೆಗಳನ್ನು ಕೊಡುವುದು ಉದ್ದೇಶ ಬರದ ನಾಡು ಕೋಲಾರ ರೇಷ್ಮೆ ಹಾಗೂ ಹಾಲಿಗೆ ಹೆಸರುವಾಸಿ, ಆದರೆ ಕೋಲಾರದಲ್ಲಿ ರೇಷ್ಮೆಯನ್ನು ಬೆಳೆಯುವ ರೈತರಿದ್ದರೂ ಇಲ್ಲಿ ಕೋಲಾರದ ಹೆಸರಲ್ಲಿ ರೇಷ್ಮೆ ಸೀರೆಗಳಿಲ್ಲ ಹಾಗಾಗಿ ನಮ್ಮಲ್ಲಿ ರೇಷ್ಮೆ ಸೀರೆ ಇಲ್ಲೇ ಉತ್ಪಾದನೆ ಮಾಡಿ ಇಲ್ಲಿನ ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ ರೇಷ್ಮೆ ಸೀರೆಗಳು ಸಿಗುವಂತೆ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಉದಯರವಿ ಸೌಮ್ಯ ದಂಪತಿಯ ಪ್ರಯತ್ನ ಶುರುವಾಗಿದೆ. ಸದ್ಯಕ್ಕೆ ಕೆಲವೊಂದು ರೇಷ್ಮೆ ಸೀರೆಗಳನ್ನು ಮಾತ್ರ ಇಲ್ಲಿ ತಯಾರು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪೈಪೋಟಿ ನೀಡುವಂತ ರೇಷ್ಮೆ ಸೀರೆ ತಯಾರು ಮಾಡುವ ಉದ್ದೇಶ ದಂಪತಿಗಳದ್ದು. ಸದ್ಯಕ್ಕೆ ತಮ್ಮದೇ ಉದಯರವಿ ನಿಸರ್ಗದಾಮವನ್ನು ಒಂದು ರೇಷ್ಮೆ ಸೀರೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮಾಹಿತಿ ಕೇಂದ್ರವನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಗೆ ಬಂದ ಜನರಿಗೆ ಮನಸ್ಸಿಗೆ ಮುದ ನೀಡುವ ಉದ್ಯಾನವನವನ್ನು ನಿರ್ಮಾಣ ಮಾಡಿ ಸುಂದರ ವಾತಾವರಣ ನಿರ್ಮಿಸಿ, ಸ್ಥಳೀಯವಾಗಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಯಾರೂ ಇಲ್ಲದ ಇಂಥ ನಿರ್ಜನ ಪ್ರದೇಶದಲ್ಲಿ ಇವರು ಏನು ಮಾಡ್ತಾರೆ ಎಂದು ಲೇವಡಿ ಮಾಡಿದ ಜನರಿಗೆ ಸದ್ಯ ಉದಯರವಿ ದಂಪತಿಗಳ ಕಾರ್ಯವನ್ನು ಕಂಡು ಅಚ್ಚರಿ ಮೂಡಿ ಪ್ರಶಂಸೆ ವ್ಯಕ್ತಪಡಿಸುವಂತಾಗಿದ್ದಾರೆ.

ಒಟ್ಟಾರೆ ಏನಾದರೂ ಸಾಧನೆ ಮಾಡಬೇಕು ಎಂದು ಹಳ್ಳಿಯಿಂದ ಜನರು ನಗರಕ್ಕೆ ಹೋಗೋದನ್ನ ನಾವು ನೋಡಿದ್ದೇವೆ ಆದರೆ ಈ ದಂಪತಿ ಮಾತ್ರ ನಗರದಿಂದ ಹಳ್ಳಿಗೆ ಬಂದು ಸಾಧನೆ ಮಾಡಲು ಹೊರಟಿದ್ದಾರೆ. ಜೊತೆಗೆ ನಮ್ಮೂರಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬರೆಯಬೇಕೆಂಬ ಆಶಯದೊಂದಿಗೆ ಹೊರಟಿದ್ದಾರೆ ನಿಜಕ್ಕೂ ಈ ದಂಪತಿಯ ಕಾರ್ಯ ಶ್ಲಾಘನೀಯ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

silk saree manufacturing 2

ರೇಷ್ಮೆ ಸೀರೆ

ಇದನ್ನೂ ಓದಿ: ಹೊಸಪೇಟೆ ಬಾರ್ ಕೊಲೆ ಪ್ರಕರಣ ಬಯಲು: ಪತ್ನಿಯ ನಡತೆ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಮಾಡಿದ ಕೊಲೆ, ಇಬ್ಬರ ಬಂಧನ

ನಾವು ತರೋದೇ ಹಲಾಲ್ ಕಟ್ ಮಾಂಸ ಅನ್ನುತ್ತಾರೆ ಗೌಡಾಸ್ ಹೋಟೆಲ್ ಮಾಲೀಕ ನಂಜಪ್ಪ!!