AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಂಸದ ಮುನಿಸ್ವಾಮಿ; ಕೋಲಾರದ ಕ್ಲಾಕ್ ಟವರ್ ತ್ರಿವರ್ಣ ಧ್ವಜ ಹಾರಿಸಿದ ವಿಚಾರ ಪ್ರಸ್ತಾಪ

ಕೋಲಾರ ನಗರದ ಕ್ಲಾಕ್ ಟವರ್ನಲ್ಲಿ 74 ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿದ ವಿಚಾರವನ್ನು ಸಂಸದ ಮುನಿಸ್ವಾಮಿ, ಮೋದಿ ಬಳಿ ಪ್ರಸ್ತಾಪಿಸಿದ್ದಾರೆ. ಇದೇ ವೇಲೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಮೋದಿಯವರಿಗೆ‌ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಂಸದ ಮುನಿಸ್ವಾಮಿ; ಕೋಲಾರದ ಕ್ಲಾಕ್ ಟವರ್ ತ್ರಿವರ್ಣ ಧ್ವಜ ಹಾರಿಸಿದ ವಿಚಾರ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸಂಸದ ಮುನಿಸ್ವಾಮಿ
TV9 Web
| Updated By: ಆಯೇಷಾ ಬಾನು|

Updated on: Mar 31, 2022 | 6:44 PM

Share

ಕೋಲಾರ: ಸಂಸದ ಎಸ್. ಮುನಿಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಮೋದಿ ಭೇಟಿ ಮಾಡಿ ಸುದೀರ್ಘ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ಚಿನ್ನದ ಗಣಿ ಪುನರಾರಂಭ ಹಾಗೂ ಚಿನ್ನದ ಗಣಿ ಪ್ರದೇಶದಲ್ಲಿ ಹೊಸ ಕೈಗಾರಿಕಾ ವಲಯ ಸ್ಥಾಪನೆ ಕುರಿತು ಮಾತುಕತೆ ನಡೆಸಿದ್ದಾರೆ. ಇನ್ನು ಕೋಲಾರ ನಗರದ ಕ್ಲಾಕ್ ಟವರ್ನಲ್ಲಿ 74 ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿದ ವಿಚಾರವನ್ನು ಸಂಸದ ಮುನಿಸ್ವಾಮಿ, ಮೋದಿ ಬಳಿ ಪ್ರಸ್ತಾಪಿಸಿದ್ದಾರೆ. ಇದೇ ವೇಲೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಮೋದಿಯವರಿಗೆ‌ ಮನವಿ ಮಾಡಿದ್ದಾರೆ. ಕೊನೆಗೆ ಮೋದಿಯವರಿಗೆ ಅಂಬೇಡ್ಕರ್ ವಿಗ್ರಹ ನೀಡಿ ಅಭಿನಂದಿಸಿದ್ದಾರೆ.

ಕ್ಲಾಕ್ ಟವರ್ನಲ್ಲಿ 74 ವರ್ಷಗಳ ಬಳಿಕ ಭಾರತದ ಧ್ವಜ ಹಾರಿಸಲಾಗಿದೆ: ಸಂಸದ ಮುನಿಸ್ವಾಮಿ ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ. ಆದರೆ ಸಂಸದ ಮುನಿಸ್ವಾಮಿ ಮಾಡಿದ ಪ್ರತಿಭಟನೆಯಿಂದ ಎರಡೇ ದಿನದಲ್ಲಿ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವ ಇತಿಹಾಸ ಸೃಷ್ಟಿಯಾಗಿದೆ. ಸದ್ಯ ಭರದಿಂದ ಸಾಗಿರುವ ಕ್ಲಾಕ್ ಟವರ್ಗೆಬಣ್ಣ ಬಳಿಯುವ ಕೆಲಸ ಆರಂಭವಾಗಿದ್ದು, ಕ್ಲಾಕ್ ಟವರ್ ಏರಿಯಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಆತಂಕದ ಕೇಂದ್ರವಾಗಿ ಬೂದಿ ಮುಚ್ಚಿದ ಕೆಂಡದಂತಿತ್ತು. ಇದಕ್ಕೆ ಕಾರಣ ಕೋಲಾರ ಸಂಸದ ಮುನಿಸ್ವಾಮಿ ಏಕಾಏಕಿ ಕೋಲಾರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದೇ ಕಾರಣ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಪರಿಣಾಮ ಕೂಡಲೇ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು, ಮನವೊಲಿಸಿ ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್ ಟವರ್ ಏರಿಯಾದಲ್ಲಿ ನಾಕಾ ಬಂಧಿ ಹಾಕಿಕೊಂಡು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕ್ಲಾಕ್ ಟವರ್ಗೆ ಬಣ್ಣ ಬಳಿಯುವ ಕೆಲಸ ಮಾಡಿದರು.

ಟವರ್ ಮೇಲ್ಬಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್ ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅಂಜುಮನ್ ಮುಖಂಡ ನಾವೂ ಕೂಡಾ ಈ ದೇಶಕ್ಕಾಗಿ ಹೋರಾಟ ಮಾಡಿದವರು. ನಾವು ಇದೇ ದೇಶದವರು ನಮಗೂ ದೇಶದ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು. ಇನ್ನು ಈ ವೇಳೆ ಮಾತನಾಡಿದ ಎಸ್ಪಿ ದೇವರಾಜ್ ಇನ್ನು ಒಂದು ವಾರಗಳ ಕಾಲ ಕೋಲಾರ ನಗರದಲ್ಲಿ ನಿಷೇದಾಜ್ನೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕ್ಲಾಕ್ ಟವರ್‌ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ, ಇದು ದೇಶ ದ್ರೋಹ ಅಂದ್ರೆ ದಿನವೂ ದೇಶ ದ್ರೋಹದ ಕೆಲಸ ಮಾಡ್ತೀನಿ -ಸಂಸದ ಮುನಿಸ್ವಾಮಿ

ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್