ಕ್ಲಾಕ್ ಟವರ್‌ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ, ಇದು ದೇಶ ದ್ರೋಹ ಅಂದ್ರೆ ದಿನವೂ ದೇಶ ದ್ರೋಹದ ಕೆಲಸ ಮಾಡ್ತೀನಿ -ಸಂಸದ ಮುನಿಸ್ವಾಮಿ

ಬೆಂಗಳೂರಿನಿಂದ ಕೋಲಾರಕ್ಕೆ ಅಮೃತ ಮಹೋತ್ಸವದ ಅಂಗವಾಗಿ 75 ಕಿ.ಮೀ ಫ್ರೀಡಂ ಟು ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅತ್ಯಾಚಾರ ಅನುಭವಿಸಬೇಕು ಎಂದು ಅವರು ಸದನದಲ್ಲಿ ಹೇಳಿದ್ರು.

ಕ್ಲಾಕ್ ಟವರ್‌ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ, ಇದು ದೇಶ ದ್ರೋಹ ಅಂದ್ರೆ ದಿನವೂ ದೇಶ ದ್ರೋಹದ ಕೆಲಸ ಮಾಡ್ತೀನಿ -ಸಂಸದ ಮುನಿಸ್ವಾಮಿ
ಸಂಸದ ಎಸ್. ಮುನಿಸ್ವಾಮಿ
TV9kannada Web Team

| Edited By: Ayesha Banu

Mar 27, 2022 | 5:46 PM

ಕೋಲಾರ: ಜಿಲ್ಲೆಯ ಕ್ಲಾಕ್ ಟವರ್‌ನಲ್ಲಿ( Clock Tower) ಭಾರತದ ಧ್ವಜ ಹಾರಿಸಿದ್ದೇನೆ, ಅದು ದೇಶದ್ರೋಹ ಅಂತ ಅವರು ತಿಳಿದುಕೊಂಡ್ರೆ ನಾನು ದಿನಾ ದೇಶದ್ರೋಹ ಕೆಲಸ ಮಾಡ್ತೇನೆ ಎಂದು ಸಂಸದ ಮುನಿಸ್ವಾಮಿ(Muniswamy) ತಿರುಗೇಟು ನೀಡಿದ್ದಾರೆ. ಸಂಸದ ಮುನಿಸ್ವಾಮಿ ಒಬ್ಬ ಸಾಂಧರ್ಭಿಕ ಶಿಶು ಎಂದು ವಿಧಾನಸಭೆ ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಿಂದ ಕೋಲಾರಕ್ಕೆ ಅಮೃತ ಮಹೋತ್ಸವದ ಅಂಗವಾಗಿ 75 ಕಿ.ಮೀ ಫ್ರೀಡಂ ಟು ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅತ್ಯಾಚಾರ ಅನುಭವಿಸಬೇಕು ಎಂದು ಅವರು ಸದನದಲ್ಲಿ ಹೇಳಿದ್ರು, ಆಗಲೇ ಅವರ ಮನಸ್ಥಿತಿ ಏನೂ ಅಂತ ನಾನು ತಿಳಿದುಕೊಂಡೆ, ಯಾರು ಸಾಂಧರ್ಭಿಕ ಶಿಶು ಎಂದು ನನಗೂ ತಿಳಿದಿದೆ ಎಂದು ಹೇಳಿದ್ರು. ಇನ್ನೂ ಅವರಷ್ಟು ದೊಡ್ಡವರು ನಾನಲ್ಲ, ಅವರು ಸಂವಿಧಾನದ ಪ್ರತಿ ಪೇಜ್‌ನ ಓದಿರುವವರು. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ರು. ಕ್ಲಾಕ್ ಟವರ್‌ನಲ್ಲಿ ಶಾಂತಿ ಕೆಡಿಸುವ ಕೆಲಸ ಮಾಡಿದ್ದಾರೆ, ಮುನಿಸ್ವಾಮಿ ಸಾಂಧರ್ಭಿಕ ಶಿಶು ಎಂದು ಅಧಿವೇಶನದಲ್ಲಿ ಹೇಳಿದ್ದ ರಮೇಶ್ ಕುಮಾರ್‌ಗೆ ಸಂಸದ ಮುನಿಸ್ವಾಮಿ ಟಾಂಗ್ ನೀಡಿದ್ರು.

ಕ್ಲಾಕ್ ಟವರ್ನಲ್ಲಿ 74 ವರ್ಷಗಳ ಬಳಿಕ ಭಾರತದ ಧ್ವಜ ಹಾರಿಸಲಾಗಿದೆ: ಸಂಸದ ಮುನಿಸ್ವಾಮಿ ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ. ಆದರೆ ಸಂಸದ ಮುನಿಸ್ವಾಮಿ ಮಾಡಿದ ಪ್ರತಿಭಟನೆಯಿಂದ ಎರಡೇ ದಿನದಲ್ಲಿ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವ ಇತಿಹಾಸ ಸೃಷ್ಟಿಯಾಗಿದೆ. ಸದ್ಯ ಭರದಿಂದ ಸಾಗಿರುವ ಕ್ಲಾಕ್ ಟವರ್ಗೆಬಣ್ಣ ಬಳಿಯುವ ಕೆಲಸ ಆರಂಭವಾಗಿದ್ದು, ಕ್ಲಾಕ್ ಟವರ್ ಏರಿಯಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಆತಂಕದ ಕೇಂದ್ರವಾಗಿ ಬೂದಿ ಮುಚ್ಚಿದ ಕೆಂಡದಂತಿತ್ತು. ಇದಕ್ಕೆ ಕಾರಣ ಕೋಲಾರ ಸಂಸದ ಮುನಿಸ್ವಾಮಿ ಏಕಾಏಕಿ ಕೋಲಾರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದೇ ಕಾರಣ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಪರಿಣಾಮ ಕೂಡಲೇ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು, ಮನವೊಲಿಸಿ ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್ ಟವರ್ ಏರಿಯಾದಲ್ಲಿ ನಾಕಾ ಬಂಧಿ ಹಾಕಿಕೊಂಡು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕ್ಲಾಕ್ ಟವರ್ಗೆ ಬಣ್ಣ ಬಳಿಯುವ ಕೆಲಸ ಮಾಡಿದರು.

ಟವರ್ ಮೇಲ್ಬಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್ ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅಂಜುಮನ್ ಮುಖಂಡ ನಾವೂ ಕೂಡಾ ಈ ದೇಶಕ್ಕಾಗಿ ಹೋರಾಟ ಮಾಡಿದವರು. ನಾವು ಇದೇ ದೇಶದವರು ನಮಗೂ ದೇಶದ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು. ಇನ್ನು ಈ ವೇಳೆ ಮಾತನಾಡಿದ ಎಸ್ಪಿ ದೇವರಾಜ್ ಇನ್ನು ಒಂದು ವಾರಗಳ ಕಾಲ ಕೋಲಾರ ನಗರದಲ್ಲಿ ನಿಷೇದಾಜ್ನೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹಿಜಾಬ್ ಹೆಸರಲ್ಲಿ ನಡೆಯುತ್ತಿರುವ ಬೆಳವಣಿಗೆ ವಿರೋಧಿಸಿ ಶಾಂತಿ ನೆಲೆಗಾಗಿ ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆಯರಿಂದ ಮೌನ ಧರಣಿ

ಕ್ಲಾಕ್ ಟವರ್​ನಲ್ಲಿ 74 ವರ್ಷಗಳ ಬಳಿಕ ಭಾರತದ ಧ್ವಜ ಹಾರಿಸಲಾಗಿದೆ: ಸಂಸದ ಮುನಿಸ್ವಾಮಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada