ಹೊಸಪೇಟೆ ಬಾರ್ ಕೊಲೆ ಪ್ರಕರಣ ಬಯಲು: ಪತ್ನಿಯ ನಡತೆ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಮಾಡಿದ ಕೊಲೆ, ಇಬ್ಬರ ಬಂಧನ
ಕೊಲೆಯಾದ ಗಂಗಾಧರ ಮತ್ತು ಕೊಲೆ ಮಾಡಿದ ಯರಿಸ್ವಾಮಿ ಹಾಗೂ ಮಧುಸೂದನ... ಮೂವರೂ ಹತ್ತಿರದ ಸಂಬಂಧಿಗಳಾಗಿದ್ದಾರೆ. ಕೊಲೆಯಾದ ಗಂಗಾಧರ ಧರ್ಮಸಾಗರ ಗ್ರಾಮದವರಾದರೆ, ಮಧುಸೂಧನ್ ಮತ್ತು ಯರಿಸ್ವಾಮಿ ಪಕ್ಕದ ಪಾಪಿನಾಯಕನಹಳ್ಳಿ ನಿವಾಸಿಗಳಾಗಿದ್ದಾರೆ.
ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಬಳ್ಳಾರಿ ರಸ್ತೆಯ ಯಶ್ ಬಾರ್ ನಲ್ಲಿ ಮಂಗಳವಾರ ಸಂಜೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋವಾದ ಕ್ಯಾಸಿನೋದಲ್ಲಿ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಧರ್ಮಸಾಗರ ಗ್ರಾಮದ ಗಂಗಾಧರನನ್ನ ನಿನ್ನೆ ಚಾಕು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರೆ. ನೆಲ್ಲಕುದುರೆ ಯರಿಸ್ವಾಮಿ ಹಾಗೂ ಮಧುಸೂದನ್ ಎನ್ನುವವರೇ ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ: ಗಂಗಾಧರ ನಿನ್ನೆ ಬುಧವಾರ ಯರಿಸ್ವಾಮಿ ಜೊತೆ ಬಾರ್ ನಲ್ಲಿ ಕುಳಿತು ಡಿಂಕ್ಸ್ ಮಾಡುವ ವೇಳೆ ಮದುಸೂಧನ್ ಮತ್ತು ಯರಿಸ್ವಾಮಿ ಹೆಂಡತಿಯ ನಡುವೆ ಸಂಭಂದ ಕಟ್ಟಿ ಮಾತನಾಡಿದ್ದ. ನಿನ್ನ ಪತ್ನಿಯ ಜೊತೆ ಮಧುಸೂದನ್ ಸಂಬಂಧ ಇದೆ ಎನ್ನುವ ರೀತಿ ಆರೋಪ ಮಾಡಿದ್ದ. ತನ್ನ ಹೆಂಡತಿಯ ಬಗ್ಗೆ ಗಂಗಾಧರ ಹಗುರವಾಗಿ ಮಾತನಾಡಿದ್ದ ಎನ್ನುವ ಕಾರಣಕ್ಕೆ ಯರಿಸ್ವಾಮಿ ಗಂಗಾಧರನ ಎದೆಗೆ ಚೂರಿ ಇರಿದು ಕೊಲೆ ಮಾಡಿದ್ದ.
ಕೊಲೆಯಾದ ಗಂಗಾಧರ ಮತ್ತು ಕೊಲೆ ಮಾಡಿದ ಯರಿಸ್ವಾಮಿ ಹಾಗೂ ಮಧುಸೂದನ… ಮೂವರೂ ಹತ್ತಿರದ ಸಂಬಂಧಿಗಳಾಗಿದ್ದಾರೆ. ಕೊಲೆಯಾದ ಗಂಗಾಧರ ಧರ್ಮಸಾಗರ ಗ್ರಾಮದವರಾದರೆ, ಮಧುಸೂಧನ್ ಮತ್ತು ಯರಿಸ್ವಾಮಿ ಪಕ್ಕದ ಪಾಪಿನಾಯಕನಹಳ್ಳಿ ನಿವಾಸಿಗಳಾಗಿದ್ದಾರೆ.
13 ಗಂಟೆಯೊಳಗೆ ಆರೋಪಿಗಳ ಅರೆಸ್ಟ್: ಎ.ಎಸ್.ಐ. ಕೋದಂಡಪಾಣಿ ಮತ್ತು ಕಾನ್ಸಟೇಬಲ್ ಗಾಳೆಪ್ಪ ತಿಮ್ಮಪ್ಪ, ಸಿಪಿಐ ಶ್ರೀನಿವಾಸ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣ ಠಾಣೆಯ ಪೊಲೀಸರ ಕಾರ್ಯವೈರ್ಖರಿಗೆ ವಿಜಯನಗರ ಎಸ್ ಪಿ ಡಾ. ಕೆ ಅರುಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳ್ಳತನ ಮಾಡಿದ್ದ 10 ಲಕ್ಷ ರೂ ಮೌಲ್ಯದ ಹೈವಾ ಟಿಪ್ಪರ್ ಲಾರಿ ವಶ: ವಿಜಯನಗರ: ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಲಾರಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರಿಗನೂರು ಗ್ರಾಮದ ಬಳಿ ನಿಲ್ಲಿಸಿದ್ದ ಮಹೇಶ ಎನ್ನುವವರಿಗೆ ಸೇರಿದ್ದ ಲಾರಿಯನ್ನು ಕಳ್ಳತನ ಮಾಡಲಾಗಿತ್ತು. ಮರಿಯಮ್ಮನಹಳ್ಳಿ ಬಳಿಯ ಗರಗ ನಾಗಲಾಪುರ ರಸ್ತೆಯ ಬಳಿ ಲಾರಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಲಾರಿ ಕಳ್ಳತನ ಮಾಡಿದ್ದ ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿಯನ್ನು ಬಂಧಿಸಲಾಗಿದ್ದು 10 ಲಕ್ಷ ರೂಪಾಯಿ ಮೌಲ್ಯದ ಹೈವಾ ಟಿಪ್ಪರ್ ಲಾರಿ ವಶಕ್ಕೆ ಪಡೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರ್ಕಾರ; 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್
ಇದನ್ನೂ ಓದಿ: Wines home delivery: 500 ರೂಗೆ ವೈನ್ ಆರ್ಡರ್ ಮಾಡಿ, 50 ಸಾವಿರ ರೂಪಾಯಿ ಕಳೆದುಕೊಂಡ ಬೆಂಗಳೂರು ಯುವತಿ!
Published On - 6:48 pm, Wed, 30 March 22