ಅದ್ವೈತ ವೇದಾಂತದ ಮೇರುಕೃತಿ ಯೋಗವಾಸಿಷ್ಠದ ಸಮಗ್ರ 7 ಸಂಪುಟ ಈಗ ಲಭ್ಯ: ಮನುಷ್ಯನ ಮನಸ್ಸಿಗಿದು ಕನ್ನಡಿ

ಶ್ರೀರಾಮಚಂದ್ರ ಹಾಗೂ ವಶಿಷ್ಠರಿಬ್ಬರ ನಡುವೆ ನಡೆಯುವ ಸಂವಾದ ರೂಪದಲ್ಲಿರುವ ಈ ಕೃತಿಯು ವೈರಾಗ್ಯ, ಮುಮುಕ್ಷು, ಉತ್ಪತ್ತಿ, ಸ್ಥಿತಿ, ಉಪಶಮ ಹಾಗೂ ನಿರ್ವಾಣವೆಂಬ ಆರು ಪ್ರಕರಣಗಳನ್ನೊಳಗೊಂಡಿದೆ.

ಅದ್ವೈತ ವೇದಾಂತದ ಮೇರುಕೃತಿ ಯೋಗವಾಸಿಷ್ಠದ ಸಮಗ್ರ 7 ಸಂಪುಟ ಈಗ ಲಭ್ಯ: ಮನುಷ್ಯನ ಮನಸ್ಸಿಗಿದು ಕನ್ನಡಿ
ಯೋಗವಾಸಿಷ್ಠ ಕೃತಿಯ ಮುಖಪುಟ ಹಾಗೂ ಸಾಹಿತಿ ದೇವುಡು ನರಸಿಂಹಶಾಸ್ತ್ರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 27, 2022 | 11:43 AM

ಯೋಗವಾಸಿಷ್ಠವು ಅದ್ವೈತ ವೇದಾಂತವನ್ನು ಕುರಿತಾದ ಗ್ರಂಥ. ಇದು ಶಾಸ್ತ್ರ ಗ್ರಂಥವಾದರೂ ಪೌರಾಣಿಕ ಶೈಲಿಯಲ್ಲಿದ್ದು ಅನೇಕ ಆಖ್ಯಾಯಿಕೆಗಳನ್ನು ಒಳಗೊಂಡಿದೆ. ಸೃಷ್ಟಿಯ ಮೊದಲಲ್ಲಿ ಲೋಕದಲ್ಲಿ ಶಾಂತಿಯನ್ನು ನೆಲೆಗೊಳಿಸಲೆಂದು ಭಗವಂತನಾದ ಚತುರ್ಮುಖನು ಉಪದೇಶಿಸಿದ ಜ್ಞಾನ ವಿದ್ಯೆಯನ್ನು ಶ್ರೀರಾಮನ ಚಿತ್ತಶಾಂತಿಗೆಂದು ಅದ್ವೈತ ಗುರುಪರಂಪರೆಯ ಆದ್ಯರಾದ ಶ್ರೀವಸಿಷ್ಠರು ಹೇಳಿದರೆಂದೂ, ಬ್ರಹ್ಮನ ಆಜ್ಞೆಯಂತೆ ಅದನ್ನು ವಾಲ್ಮೀಕಿ ಮಹರ್ಷಿಗಳು ಗ್ರಂಥವಾಗಿ ರಚಿಸಿದರೆಂದೂ ಹೇಳಲಾಗಿದೆ. ಆರ್ಷ ರಾಮಾಯಣ, ಜ್ಞಾನ ವಾಶಿಷ್ಠ, ಮಹಾ ರಾಮಾಯಣ, ವಾಶಿಷ್ಠ ರಾಮಾಯಣ ಎಂಬೆಲ್ಲ ಹೆಸರುಗಳಿಂದ ಗುರುತಿಸಲಾಗಿರುವ ಈ ಗ್ರಂಥದಲ್ಲಿ 23,704 ಶ್ಲೋಕಗಳಿದ್ದು ಇವು ಶ್ರೇಷ್ಠವಾದ ಕಾವ್ಯಗುಣಗಳಿಂದ ಕೂಡಿದೆ.

ಶ್ರೀರಾಮಚಂದ್ರ ಹಾಗೂ ವಶಿಷ್ಠರಿಬ್ಬರ ನಡುವೆ ನಡೆಯುವ ಸಂವಾದ ರೂಪದಲ್ಲಿರುವ ಈ ಕೃತಿಯು ವೈರಾಗ್ಯ, ಮುಮುಕ್ಷು, ಉತ್ಪತ್ತಿ, ಸ್ಥಿತಿ, ಉಪಶಮ ಹಾಗೂ ನಿರ್ವಾಣವೆಂಬ ಆರು ಪ್ರಕರಣಗಳನ್ನೊಳಗೊಂಡಿದೆ. ಜೀವ ಹಾಗೂ ಬ್ರಹ್ಮಾಂಡದ ಉತ್ಪತ್ತಿ, ಜೀವನ-ಮರಣ, ಮಾನವನು ಅನುಭವಿಸುವ ಕಷ್ಟಕೋಟಲೆಗಳು, ಚಿತ್ತ, ಮುಕ್ತಿಕಾಂಕ್ಷೆ ಮತ್ತು ಅಂತಿಮವಾಗಿ ವಿಶ್ವವು ಬ್ರಹ್ಮನಲ್ಲಿ ಐಕ್ಯಗೊಳ್ಳುವಿಕೆ ಮೊದಲಾದ ತಾತ್ವಿಕ ವಿಚಾರಗಳನ್ನು ಕುರಿತು ಆಳವಾದ ಚಿಂತನೆ ಹಾಗೂ ವಿಶ್ಲೇಷಣೆಗಳನ್ನು ಒಳಗೊಂಡಿದೆ.

ಸಂಸ್ಕೃತದಲ್ಲಿರುವ ಈ ಬೃಹತ್ ಗ್ರಂಥರಾಶಿಯನ್ನು ಮೇಧಾವಿಗಳೂ, ಉದ್ಧಮ ಪಂಡಿತರೂ ಹಾಗೂ ಜ್ಞಾನಿಗಳೂ ಆದ ದೇವುಡು ನರಸಿಂಹ ಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದ್ದರು. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಕೃಪಾಶ್ರಯದಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತ್ತು. ಇದೀಗ ಹೇಮಂತ ಸಾಹಿತ್ಯ ಪ್ರಕಾಶನವು ಈ ಕೃತಿಯ ಪುನರ್ ಮುದ್ರಣ ಮಾಡಿದೆ.

8 ಸಂಪುಟಗಳ ಒಟ್ಟು ಬೆಲೆ ₹ 4500. ರಿಯಾಯ್ತಿ ಇದೀಗ ರಿಯಾಯ್ತಿ ದರದಲ್ಲಿ ₹ 3825ಕ್ಕೆ ಲಭ್ಯವಿದೆ. ಮಾಹಿತಿಗೆ 99459 39436 ಸಂಪರ್ಕಿಸಿ.

ಏಕಿಷ್ಟು ಪ್ರಾಮುಖ್ಯತೆ?

ಮನುಷ್ಯನೊಬ್ಬನ ಮನಸ್ಸಿನಲ್ಲಿ ಏಳಬಹುದಾದ ಎಲ್ಲ ಪ್ರಶ್ನೆಗಳೂ ಈ ಕೃತಿಯಲ್ಲಿ ಉತ್ತರವಿದೆ ಎನ್ನುವುದು ಯೋಗವಾಸಿಷ್ಠದ ಹೆಚ್ಚುಗಾರಿಕೆ. ಶ್ರೀರಾಮಚಂದ್ರನು ಖಿನ್ನನಾಗಿದ್ದಾಗ ಅವನ ಗುರು ವಸಿಷ್ಠ ಮಾಡಿದ ಉಪದೇಶ ಇದು. ಇದಕ್ಕೆ ಏಕಿಷ್ಟು ಪ್ರಾಮುಖ್ಯತೆ ಎಂದು ಅರಿಯಲು ಸ್ವರ್ಣವಲ್ಲಿ ಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ವ್ಯಾಖ್ಯಾನದ ಈ ಸಾಲುಗಳನ್ನು ಒಮ್ಮೆ ಗಮನಿಸಿ.

‘ಎಲ್ಲದಕ್ಕೂ ಅಧಿಷ್ಠಾನವಾಗಿರುವ ಪರಬ್ರಹ್ಮದಿಂದಲೇ ಜೀವಗಳ ಆವಿರ್ಭಾವವಾಗುತ್ತದೆ. ಪರಬ್ರಹ್ಮದ ಜೊತೆಗೆ ತಾದಾತ್ಮ್ಯ ಬಂಧವನ್ನು ಇರಿಸಿಕೊಂಡಿರುವ ಮಾಯೆ ಇರುತ್ತದೆ. ಅಂಥ ಪರಬ್ರಹ್ಮದಲ್ಲಿ ಆಕಾಶ, ತೇಜಸ್ಸು ಇತ್ಯಾದಿ ಉತ್ಪತ್ತಿಯಾಗುವ ಮೊದಲೇ ಜೀವದ ಆವಿರ್ಭಾವ ಆಗುತ್ತದೆ. ಚೇತಯಿತೃತ್ವವೇ ಜೀವದ ಲಕ್ಷಣ. ಅತ್ಯಂತ ಸಮೀಪದಲ್ಲಿರುವ ಜಡ ವಸ್ತುಗಳನ್ನು ತನ್ನ ಚೈತನ್ಯದ ಛಾಯೆಯ ಮೂಲಕ ಚೇತನಗಳಂತೆ ಗೋಚಿಸುವ ಹಾಗೆ ಮಾಡುವ ಸಾಮರ್ಥ್ಯವೇ ಚೇತಯಿತೃತ್ವ. ಜೀವಾತ್ಮನಿಗೆ ಅತ್ಯಂತ ಸಮೀಪದಲ್ಲಿ ಅಂತಃಕರಣ ಇರುತ್ತದೆ. ಅಂತಃಕರಣದ ಭಾಗಗಳಾಗಿ ಚಿತ್ತ, ಅಹಂಕಾರ ಮತ್ತು ಬುದ್ಧಿಮನಸ್ಸುಗಳು ಸೃಷ್ಟಿಯಾಗುತ್ತವೆ’ ಎಂದು ಯೋಗವಾಸಿಷ್ಠ ಉಪನ್ಯಾಸದಲ್ಲಿ ಸ್ವಾಮೀಜಿ ಹೇಳಿದ್ದಾರೆ.

ಮನುಷ್ಯನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಭಾವಿಸುವ ಮನಸ್ಸಿನ ಒಳತೋಟಿಯನ್ನು ಆಳವಾಗಿ ವಿಮರ್ಶಿಸುವ ಅಪರೂಪದ ಗ್ರಂಥ ಎಂದೇ ಯೋಗವಾಸಿಷ್ಠಕ್ಕೆ ವಿಶಿಷ್ಟ ಗೌರವ ಪ್ರಾಪ್ತವಾಗಿದೆ. ಅಧ್ಯಾತ್ಮ ಸಾಧನೆಯ ಆಶಯ ಹೊಂದಿರುವವರಿಗೆ ಇದು ಕೈಪಿಡಿಯೂ ಹೌದು.

ಇದನ್ನೂ ಓದಿ: ರಾಜಲಕ್ಷ್ಮೀ ಕೋಡಿಬೆಟ್ಟು ಅನುವಾದಿಸಿದ ದೇವಕಿ ಜೈನ್ ‘ಹಿತ್ತಾಳೆ ಬಣ್ಣದ ಪುಸ್ತಕ’

ಇದನ್ನೂ ಓದಿ: ಅಚ್ಚಿಗೂ ಮೊದಲು; ‘ಕೆಂಪು’ ಅರ್ಪಣ ಎಚ್ಎಸ್​ ಕಥಾ ಸಂಕಲನ ಸದ್ಯದಲ್ಲೇ ನಿಮ್ಮ ಓದಿಗೆ

Published On - 11:43 am, Sun, 27 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್