ಸಾಮಾನ್ಯ ಕೋಚ್​ನ ಜನರಿಂದ ತುಂಬಿ ತುಳುಕಿದ ಸ್ಲೀಪರ್ ​ಕೋಚ್​​: ನೆಲದ ಮೇಲೆ ಮಲಗಿದ ಪ್ರಯಾಣಿಕರು, ಫೋಟೋ ವೈರಲ್​

ಸಾಮಾನ್ಯ ಕೋಚ್​ನ ಜನರು ಎಸ್​​ಎಲ್​ ಕೋಚ್​ನಲ್ಲಿ ಪ್ರಯಾಣ ಮಾಡುತ್ತಿದ್ದು, ಅದರಲ್ಲಿಯೂ ಕೆಳ ಭಾಗದಲ್ಲಿ ಮಲಗಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸಾಮಾನ್ಯ ಕೋಚ್​ನ ಜನರಿಂದ ತುಂಬಿ ತುಳುಕಿದ ಸ್ಲೀಪರ್ ​ಕೋಚ್​​: ನೆಲದ ಮೇಲೆ ಮಲಗಿದ ಪ್ರಯಾಣಿಕರು, ಫೋಟೋ ವೈರಲ್​
ನೆಲದ ಮೇಲೆ ಮಲಗಿರುವ ಪ್ರಯಾಣಿಕರು

Updated on: May 18, 2023 | 7:02 PM

ಬೆಂಗಳೂರು: ಭಾರತೀಯರಾದ ನಾವುಗಳು ಪ್ರಯಾಣಿಸಲು ಹೆಚ್ಚಾಗಿ ರೈಲನ್ನು (train) ಬಳಕೆ ಮಾಡುತ್ತೇವೆ. ಸಾಮಾನ್ಯ ಕೋಚ್​ ತುಂಬಿದಾಗ ಜನರು ಸೀಟ್​ಗಾಗಿ ಎಸ್​​ಎಲ್​ ಕೋಚ್​ಗೆ ಹೋಗುತ್ತಾರೆ. ಸದ್ಯ ಇಂಥಹದೇ ಒಂದು ಘಟನೆ ನಡೆದಿದ್ದು, ಸಾಮಾನ್ಯ ಕೋಚ್​ನ ಜನರು ಎಸ್​​ಎಲ್​ ಕೋಚ್​ನಲ್ಲಿ ಪ್ರಯಾಣ ಮಾಡುತ್ತಿದ್ದು, ಅದರಲ್ಲಿಯೂ ಕೆಳ ಭಾಗದಲ್ಲಿ ಮಲಗಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಮೇ 16 ರಂದು ಟ್ವೀಟರ್​ ಬಳಕೆದಾರರೊಬ್ಬರು ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (Bidar-Yeshwanthpur Express) ಜನರಿಂದ ತುಂಬಿ ಹೋಗಿರುವ ಸ್ಲೀಪರ್ ಕೋಚ್​​ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿನ್ನೆಯ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ SL ಕೋಚ್‌ಗಳಲ್ಲಿ ಸಾಮಾನ್ಯ ಟಿಕೆಟ್​ ಪ್ರಯಾಣಿಕರು ಸೇರಿಕೊಂಡಿದ್ದಾರೆ. ಇದು 7.40 AM ಬದಲಿಗೆ 10.30 ಕ್ಕೆ ಯಶವಂತಪುರಕ್ಕೆ ತಲುಪಿದೆ. 1000 ಪ್ರಯಾಣಿಕರಿಂದಾಗಿ 3 ಗಂಟೆ ವಿಳಂಬವಾಗಿದೆ. ದಿನದಿಂದ ದಿನಕ್ಕೆ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಟ್ವೀಟರ್​ ಬಳಕೆದಾರ ರಮೇಶ್​ ಎನ್ನುವವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಯಕವೇ ಕೈಲಾಸ! ಬೆಂಗಳೂರು ಟ್ರಾಫಿಕ್​ನಲ್ಲಿ ಸ್ಕೂಟಿಯಲ್ಲೇ ಕುಳಿತು ಕೆಲಸ ಮಾಡಿದ ಮಹಿಳೆ: ಫೋಟೋ ವೈರಲ್

ದಯವಿಟ್ಟು ಬೆಂಗಳೂರಿನಿಂದ ಕಲಬುರಗಿ ಮೂಲಕ ಬೀದರ್‌ಗೆ ಹೊಸ ರೈಲನ್ನು ಪರಿಚಯಿಸಿ. ಎಸ್‌ಎಲ್ ಮತ್ತು ಜಿಎಸ್​ ಕೋಚ್​ಗಳನ್ನು ಸಹ ಹೆಚ್ಚಿಸಿ. ಏಕೆಂದರೆ ಹೆಚ್ಚಿನ ಕಾರ್ಮಿಕ ವರ್ಗದವರು ಉತ್ತರ ಕರ್ನಾಟಕದಿಂದ ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ; ಇಂದಿರಾ ಕ್ಯಾಂಟೀನ್​ಗೆ ಸಿಗಲಿದೆ ಮರುಜೀವ

ಮರುದಿನ ಅಂದರೆ ಮೇ 17 ರಂದು ಅವರು ಮತ್ತೆ ಟ್ವೀಟ್ ಮಾಡಿದ್ದು, ಒಂದು ದಿನ ಕಳೆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಇದು ಕೂಡ 2 ಗಂಟೆ 46 ನಿಮಿಷ ತಡವಾಗಿ ಬಂದಿದೆ ಎಂದು ಹೇಳಿದ್ದಾರೆ.

ರಮೇಶ್​ ಅವರು ಫೋಸ್ಟ್​ ವೈರಲ್​ ಆಗುತ್ತಿದ್ದಂತೆ ರೈಲ್ವೇಸೇವಾ ಪ್ರತಿಕ್ರಿಯೆ ನೀಡಿದ್ದು, ಸೂಕ್ತ  ಕ್ರಮಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗೆ ತಿಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ನೆಟಿಗರೊಬ್ಬರು ಹೇಳಿದ್ದಾರೆ. ಜನರಲ್ ಬೋಗಿಗಳು, ಪ್ಯಾಸೆಂಜರ್ ರೈಲುಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಹೆಚ್ಚಿಸುವ ಬದಲು, ವಂದೇ ಭಾರತ್ ಎಸಿ ರೈಲುಗಳನ್ನು ಓಡಿಸಲು ಬಯಸುತ್ತವೆ ಎಂದು ಮತ್ತೊಂಬ್ಬ ನೆಟ್ಟಿಗರು ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಭಾರತೀಯ ರೈಲುಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಅವು ವರ್ಷವಿಡೀ ಜನದಟ್ಟಣೆಯಿಂದ ಕೂಡಿರುತ್ತವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:59 pm, Thu, 18 May 23