ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಮಹಾನಗರದಲ್ಲಿ ಹಾವುಗಳು ಸಂಖ್ಯೆ ವಿಪರೀತ ಹೆಚ್ಚಾಗಿದೆ. ಅದರಂತೆ ನಿನ್ನೆ(ಜು.20) ವಿಧಾನಸೌಧಕ್ಕೂ ಹಾವು ಎಂಟ್ರಿಕೊಟ್ಟಿತ್ತು. ಹೌದು ನೀವು ಮನೆಯಿಂದ ಹೊರಗೆ ಹೋಗುವುದಕ್ಕೂ ಮುಂಚೆ ಹೆಲ್ಮೆಟ್, ಕಾರುಗಳನ್ನ ಒಮ್ಮೆ ಚೆಕ್ ಮಾಡಿದ್ರೆ ಒಳಿತು. ಇಲ್ಲವಾದರೆ ನಿಮಗೂ ಹಾವಿನ ದರ್ಶನ ಆಗಬಹುದು. ಇತ್ತೀಚೆಗೆ ಮನೆಯ ಸಂಧಿ ಗೊಂದಿಗಳಲ್ಲಿ ಹಾವು ಕಾಣಿಸಿಕೊಳ್ಳುತ್ತಿವೆ. ಈ ಹಾವುಗಳನ್ನ ಹಿಡಿಯಲು ವನ್ಯ ಸಂರಕ್ಷಣಾ ತಂಡ ಈಗಾಗಲೇ ಬಂದಿದ್ದು, ಪ್ರತಿದಿನ 50 ಕ್ಕು ಹೆಚ್ಚು ಕರೆಗಳು ಬರುತ್ತಿವೆಯಂತೆ.
ಹೌದು ನಗರದ ಯಲಹಂಕ, ಆರ್ ಆರ್ ನಗರ, ಆರ್ ಟಿ ನಗರ, ಮಹದೇವಪುರ ಭಾಗದಲ್ಲಿ ಪ್ರತಿನಿತ್ಯ ಹಾವಿನ ದರ್ಶನವಾಗುತ್ತಿದೆ. ಇದರಿಂದ ಜನರು ರೋಸಿಹೋಗಿದ್ದಾರೆ. ಮಳೆಗಾಲದಲ್ಲಿ ಹಾವುಗಳ ಮರಿ ಮಾಡುತ್ತವೆ. ಈ ಕಾರಣದಿಂದಾಗಿ ಬೆಚ್ಚನೆಯ ಜಾಗವನ್ನ ಹುಡುಕುತ್ತಿರುತ್ತದೆ. ಇದರಿಂದಾಗಿ ಜನರಿರುವ ಕಡೆ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ ಎಂದು ಉರಗ ಪ್ರೇಮಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ:Snakelets birth: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!
ಇನ್ನು ಹೆಚ್ಚಾಗಿ ಮಹಾನಗರದಲ್ಲಿಯೇ ಹಾವುಗಳು ಕಂಡು ಬರುತ್ತಿದ್ದು, ಸಿಲಿಕಾನ್ ಸಿಟಿ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಮೊದಲೇ ರಾಜಾಧಾನಿಯಲ್ಲಿ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರು ಇಲ್ಲ. ಸಧ್ಯ ಬೆಂಗಳೂರು ವ್ಯಾಪ್ತಿಯಲ್ಲಿ 7 ಜನರಷ್ಟೇ ಹಾವುಗಳನ್ನ ಹಿಡಿಯುವ ವನ್ಯ ಸಂರಕ್ಷಕರಿದ್ದಾರೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ