ಬೆಂಗಳೂರಿನಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕೆಲ ಖಾಸಗಿ ಶಾಲೆಗಳು ಕಾರ್ಯಾರಂಭ: ಮಕ್ಕಳ ಹಕ್ಕುಗಳ ಆಯೋಗದಿಂದ ದಾಳಿ

ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘಿಸಿ ರಾಜಾಜಿನಗರದಲ್ಲಿ ಪ್ರತಿಷ್ಠಿತ ಶಾಲೆಗಳು ಕಾರ್ಯಾರಂಭ ಮಾಡಿವೆ. ಅದೇ ರೀತಿ ನಗರದ ಇತರ ಹಲವು ಪ್ರದೇಶಗಳಲ್ಲಿಯೂ ಖಾಸಗಿ ಶಾಲೆಗಳು ಬೇಸಗೆ ರಜೆ ಸಮಯದಲ್ಲೇ ತರಗತಿಗಳನ್ನು ಶುರು ಮಾಡಿವೆ. ಕೆಲ ದಿನಗಳ ಹಿಂದಷ್ಟೇ ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ವರದಿಯಾಗಿತ್ತು.

ಬೆಂಗಳೂರಿನಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕೆಲ ಖಾಸಗಿ ಶಾಲೆಗಳು ಕಾರ್ಯಾರಂಭ: ಮಕ್ಕಳ ಹಕ್ಕುಗಳ ಆಯೋಗದಿಂದ ದಾಳಿ
ಬೆಂಗಳೂರಿನಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕಾರ್ಯಾರಂಭ ಮಾಡಿದ ಕೆಲ ಖಾಸಗಿ ಶಾಲೆಗಳು
Updated By: Ganapathi Sharma

Updated on: May 22, 2024 | 10:05 AM

ಬೆಂಗಳೂರು, ಮೇ 22: ಶಿಕ್ಷಣ ಇಲಾಖೆಯ (Education Department) ಕಟ್ಟುನಿಟ್ಟಿನ ಆದೇಶವಿದ್ದರೂ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು (Bengaluru Private Schools) ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕಾರ್ಯಾರಂಭ ಮಾಡಿವೆ. ಮಕ್ಕಳಿಗೆ ಬೇಸಿಗೆ ರಜೆಯನ್ನೂ (Summer Holidays) ಪೂರ್ತಿಯಾಗಿ ನೀಡದೆ ಕೆಲವು ಶಾಲೆಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಮೇ 29ರಿಂದ ಪುನರಾರಂಭಗೊಳ್ಳುತ್ತಿವೆ. ಆದರೆ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಆರಂಭಗೊಂಡಿದ್ದು, ತರಗತಿಗಳನ್ನೂ ಆರಂಭಿಸಿವೆ.

ಬೇಸಗೆ ರಜೆಯ ಈ ಅವಧಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೂ ಇಷ್ಟವಿಲ್ಲ. ಆದರೆ, ಇದಕ್ಕೂ ಖಾಸಗಿ ಶಾಲೆಗಳು ಕಿಮ್ಮತ್ತು ನೀಡುತ್ತಿಲ್ಲ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕೆಲವು ಮಂದಿ ಪೋಷಕರು ಈಗಾಗಲೇ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ.

ರಾಜಾಜಿನಗರದಲ್ಲಿ ಪ್ರತಿಷ್ಠಿತ ಶಾಲೆಗಳು ಆದೇಶ ಉಲ್ಲಂಘಿಸಿ ಕಾರ್ಯಾರಂಭ ಮಾಡಿವೆ. ಎಸ್​​​ಜೆಆರ್ ಶಾಲೆ, ವೆಂಕಟ್ ಇಂಟರ್ ನ್ಯಾಷನಲ್ ಶಾಲೆ, ವಿದ್ಯಾವರ್ತಕ ಶಾಲೆ, ಕಾರ್ಮೆಲ್ ಸ್ಕೂಲ್ ಶಾಲೆ ಕಾರ್ಯಾರಂಭ ಮಾಡಿರುವುದು ತಿಳಿದುಬಂದಿದೆ.

ಮಕ್ಕಳ ಹಕ್ಕುಗಳ ಆಯೋದಿಂದ ಖಾಸಗಿ ಶಾಲೆಗಳ ಮೇಲೆ ದಾಳಿ

ಶಿಕ್ಷಣ ಇಲಾಖೆ ಆದೇಶ ಉಲ್ಲಂಘಿಸಿ ಖಾಸಗಿ ಶಾಲೆಗಳು ಕಾರ್ಯಾರಂಭ ಮಾಡಿದ ಆರೋಪದ ಕುರಿತ ತಪಾಸಣೆಗಾಗಿ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ತರಗತಿ ಆರಂಭ ಮಾಡಿರುವ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಕ್ಕಳ ಅಭಿಪ್ರಾಯ ಪಡೆಯಲಾಯಿತು.

ಇದನ್ನೂ ಓದಿ: ಇನ್ಸ್​ಪೆಕ್ಟರ್​, ಎಸಿಪಿಗೆ ಪೊಲೀಸ್​ ಪೇದೆಯಿಂದ ಕೊಲೆ ಬೆದರಿಕೆ!

ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ವರದಿಯಾಗಿತ್ತು. ಪ್ರತಿ ವರ್ಷದಂತೆ ಈ ವರ್ಷ ಕೂಡ ಅನೇಕ ಖಾಸಗಿ ಶಾಲೆಗಳು ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವುದು ಪೋಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಇದೀಗ ಬೇಸಗೆ ರಜೆಯಲ್ಲಿ, ಅವಧಿಗೂ ಮುನ್ನ ಕಾರ್ಯಾರಂಭ ಮಾಡಿರುವ ವಿಚಾರ ಬಯಲಾಗಿದೆ. ಒಟ್ಟಿನಲ್ಲಿ ಖಾಸಗಿ ಶಾಲೆಗಳು ಸರ್ಕಾರದ ಯಾವುದೇ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂಬುದು ಈ ವಿದ್ಯಮಾನಗಳಿಂದ ದೃಢಪಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ