ವಾಟ್ಸ್​ಆ್ಯಪ್ ಡಿಪಿಗೆ ಫೋಟೋ ಬೇಡ, ಲೋಕ ಸ್ಪಂದನ ಕ್ಯೂ ಆರ್ ಕೋಡ್ ಹಾಕಿ; ಆಗ್ನೇಯ ವಿಭಾಗ ಡಿಸಿಪಿ ಸೂಚನೆ ಹಿಂದಿದೆ ಮಹತ್ತರ ಉದ್ದೇಶ

| Updated By: ಆಯೇಷಾ ಬಾನು

Updated on: Feb 22, 2023 | 10:11 AM

ವಾಟ್ಸ್ ಆ್ಯಪ್ ಡಿಪಿಗೆ ತಮ್ಮ ಫೋಟೋ ಸೇರಿದಂತೆ ಬೇರೆ ಯಾವುದೆ ಪಿಕ್ಚರ್ ಹಾಕುವಂತಿಲ್ಲ ಎಂದು ಆಗ್ನೇಯ ವಿಭಾಗ ಪೊಲೀಸರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ ಮಾಡಲಾಗಿದೆ.

ವಾಟ್ಸ್​ಆ್ಯಪ್ ಡಿಪಿಗೆ ಫೋಟೋ ಬೇಡ, ಲೋಕ ಸ್ಪಂದನ ಕ್ಯೂ ಆರ್ ಕೋಡ್ ಹಾಕಿ; ಆಗ್ನೇಯ ವಿಭಾಗ ಡಿಸಿಪಿ ಸೂಚನೆ ಹಿಂದಿದೆ ಮಹತ್ತರ ಉದ್ದೇಶ
ಲೋಕ ಸ್ಪಂದನ ಕ್ಯೂ ಆರ್ ಕೋಡ್
Follow us on

ಬೆಂಗಳೂರು: ಆಗ್ನೇಯ ವಿಭಾಗದಲ್ಲಿ ಮತ್ತೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಡಿಸಿಪಿ ಸಿಕೆ ಬಾಬಾ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಆಗ್ನೇಯ ವಿಭಾಗ ಪೊಲೀಸರು ವಾಟ್ಸ್ ಆ್ಯಪ್ ಡಿಪಿಗೆ ತಮ್ಮ ಫೋಟೋವನ್ನು ಹಾಕುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಹಾಗೂ ಮೊಬೈಲ್ ಗೆ ಕಾಲ್ ಬಂದೂ ಅದನ್ನು ರಿಸೀವ್ ಮಾಡಿಲ್ಲ ಅಂದ್ರೆ ಸಂಕಷ್ಟ ಎದುರಿಸಬೇಕಾಗುತ್ತೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

ವಾಟ್ಸ್ ಆ್ಯಪ್ ಡಿಪಿಗೆ ತಮ್ಮ ಫೋಟೋ ಸೇರಿದಂತೆ ಬೇರೆ ಯಾವುದೆ ಪಿಕ್ಚರ್ ಹಾಕುವಂತಿಲ್ಲ ಎಂದು ಆಗ್ನೇಯ ವಿಭಾಗ ಪೊಲೀಸರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ವಾಟ್ಸಪ್ ಡಿಪಿಗೆ ತಮ್ಮ ಪೋಟೋ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ತಮ್ಮ ಎಲ್ಲಾ ಆಫೀಸರ್​ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಿ.ಕೆ.ಬಾಬಾ ಸೂಚನೆ ಹಿಂದಿದೆ ಮತ್ತೊಂದು ಪ್ಲಾನ್

ಇನ್ಮುಂದೆ ಎಲ್ಲ ಪೊಲೀಸರು ಲೋಕ ಸ್ಪಂದನ ಎಂಬ ಕ್ಯೂ ಆರ್ ಕೋಡ್ ಅನ್ನು ತಮ್ಮ ಡಿಪಿಗೆ ಹಾಕಬೇಕು. ಲೋಕ ಸ್ಪಂದನ ಕ್ಯೂ ಆರ್ ಕೋಡನ್ನ ಪ್ರತಿಯೊಬ್ಬರ ಮೊಬೈಲ್ ವಾಟ್ಸ್ ಆ್ಯಪ್ ಡಿಪಿಗೆ ಹಾಕಬೇಕು. ಕ್ಯೂ ಆರ್ ಕೋಡ್ ಬಿಟ್ಟು ಯಾವುದೇ ಫೋಟೋಗಳನ್ನು ಹಾಕೋ ಹಾಗಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: Namma Metro: ಕೆಆರ್ ಪುರಂ, ವೈಟ್ ಫೀಲ್ಡ್ ಮಧ್ಯೆ ಮೆಟ್ರೋ ಸಂಚಾರಕ್ಕೆ ದಿನಗಣನೆ; ಇಂದಿನಿಂದ ಕೊನೆಯ ಹಂತದ ಪ್ರಾಯೋಗಿಕ ಸಂಚಾರ

ಲೋಕ ಸ್ಪಂದನ ಕ್ಯೂ ಆರ್ ಕೋಡ್ ನಿಂದ ಏನು ಪ್ರಯೋಜನ?

ಪೊಲೀಸ್ ಆಫೀಸರ್​ಗಳು ಫೋನ್ ಕಾಲ್ ರಿಸೀವ್ ಮಾಡಿಲ್ಲ ಅಂದ್ರೆ ಸಾರ್ವಜನಿಕರು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಲೋಕ ಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮೆಸೇಜ್ ಮಾಡಬಹುದು. ನಿಮ್ಮ ಅಧಿಕಾರಿ ಫೋನ್ ರೀಸಿವ್ ಮಾಡುತ್ತಿಲ್ಲ ಅಂತಾ ಸ್ಕ್ಯಾನ್ ಮಾಡಿ ಮೇಸೆಜ್ ಮಾಡಿದ್ರೆ, ಸೀದಾ ಡಿಸಿಪಿ ಮೊಬೈಲ್​ಗೆ ಮೆಸೇಜ್ ಬರುತ್ತೆ. ಆಗ ಯಾವ ಅಧಿಕಾರಿ ಕಾಲ್ ರಿಸೀವ್ ಮಾಡಿಲ್ಲ ಅನ್ನೋ ಬಗ್ಗೆ ಡಿಸಿಪಿಗೆ ತಿಳಿಯುತ್ತೆ. ಇದರಿಂದ ಯಾವ ಅಧಿಕಾರಿ ಜನರಿಗೆ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನ ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ. ಲೋಕ ಸ್ಪಂದನ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೊಸ ಯೋಜನೆ ರೂಪಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:11 am, Wed, 22 February 23