Bengaluru: ಹೈಕೋರ್ಟ್​ ನಿಷೇಧದ ನಡುವೆಯೂ ಮೈಸೂರು ರಸ್ತೆಯಲ್ಲಿ ರಾರಾಜಿಸಿದ ಸೈಲೆಂಟ್​ ಸುನೀಲ ಬ್ಯಾನರ್​​

ಮಹಾಶಿವರಾತ್ರಿ ಹಬ್ಬದ ದಿನದಂದು, ಮೈಸೂರು ರಸ್ತೆಯಲ್ಲಿ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಎಂದು ಶುಭಕೋರುವ ರೌಡಿಶೀಟರ್​ ಸೈಲೆಂಟ್​ ಸುನೀಲನ ಅವರ ಬ್ಯಾನರ್​ಗಳು ರಾರಾಜಿಸಿದ್ದವು. ಈ ಬ್ಯಾನರ್​ಗಳಲ್ಲಿ ಕೇಸರಿ ಶಾಲು ಹಾಕಿಕೊಂಡ ಸೈಲೆಂಟ್​ ಸುನೀಲ್, ಸ್ವಾತಂತ್ರ್ಯ ವೀರ್​ ಸಾವರ್ಕರ್​ ಸೇರಿದಂತೆ ವಿವಿಧ ನಾಯಕರ ಭಾವಚಿತ್ರವಿತ್ತು.

Bengaluru: ಹೈಕೋರ್ಟ್​ ನಿಷೇಧದ ನಡುವೆಯೂ ಮೈಸೂರು ರಸ್ತೆಯಲ್ಲಿ ರಾರಾಜಿಸಿದ ಸೈಲೆಂಟ್​ ಸುನೀಲ ಬ್ಯಾನರ್​​
ಸೈಲೆಂಟ್ ಸುನೀಲ್
Follow us
ವಿವೇಕ ಬಿರಾದಾರ
|

Updated on: Feb 22, 2023 | 11:20 AM

ಬೆಂಗಳೂರು: ಮಹಾಶಿವರಾತ್ರಿ (Mahashivaratri) ಹಬ್ಬದ ದಿನದಂದು ರೌಡಿಶೀಟರ್​ ಸೈಲೆಂಟ್​ ಸುನೀಲ್​ (Silent Sunil)ಟೆಂಪಲ್​ ರನ್​ ಆರಂಭಿದ್ದರು. ಈ ವೇಳೆ ಮೈಸೂರು ರಸ್ತೆಯಲ್ಲಿ (Mysore Road) ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಎಂದು ಶುಭಕೋರುವ ಬ್ಯಾನರ್​ಗಳು (Banner) ರಾರಾಜಿಸಿದ್ದವು. ಆದರೆ ಕರ್ನಾಟಕ ಹೈಕೋರ್ಟ್ (Karnataka Highcourt)​ ನಗರದಲ್ಲಿ ಪೋಸ್ಟರ್​​ ಮತ್ತು ಬ್ಯಾನರ್​ಗಳನ್ನು ಹಾಕಲು ನಿಷೇಧ ಹೇರಿದ್ದು, ಸೈಲೆಂಟ್​ ಸುನೀಲ್​ ಬ್ಯಾನರ್​ ಹಾಕಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆ ಬ್ಯಾನರ್​ಗಳಲ್ಲಿ ಕೇಸರಿ ಶಾಲು ಹಾಕಿಕೊಂಡ ಸೈಲೆಂಟ್​ ಸುನೀಲ್, ಸ್ವಾತಂತ್ರ್ಯ ವೀರ್​ ಸಾವರ್ಕರ್​ (Veer Savarkar) ಸೇರಿದಂತೆ ವಿವಿಧ ನಾಯಕರ ಭಾವಚಿತ್ರವಿತ್ತು. ಈ ಮೂಲಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ (Chamrajpet Assembly Constituency) ಟಿಕೆಟ್​ ಆಕಾಂಕ್ಷಿ ಎಂದು ರಾಜ್ಯ ಬಿಜೆಪಿ ಘಟಕದ ಮೇಲೆ ಪ್ರಭಾವ ಬೀರುವಂತಿತ್ತು.

ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​​ ಮಾತನಾಡಿ, ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ನಗರದಾದ್ಯಂತ ಹಾಕಲಾಗಿರುವ ಬ್ಯಾನರ್​ಗಳನ್ನು ತೆಗೆಯುತ್ತಿದ್ದಾರೆ. ಮತ್ತು ಬ್ಯಾನರ್​ ಅಥವಾ ಫ್ಲೆಕ್ಸ್​ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.

ಈ ಬಗ್ಗೆ ನಿವೃತ್ತ ಪೊಲೀಸ್​ ಅಧಿಕ್ಷಕ ಎಸ್​ಕೆ ಉಮೇಶ್​ ಮಾತನಾಡಿ ಬಿಬಿಎಂಪಿ ನಾಯಕರ ತಾಳಕ್ಕೆ ಕುಣಿಯುತ್ತಿದೆ. ಕೆಲ ವರ್ಷಗಳ ಹಿಂದೆ ಬ್ಯಾನರ್​ ಹಾಕುವ ವಿಚಾರವಾಗಿ ಹೈಕೋರ್ಟ್​​ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ನಗರದಲ್ಲಿ ಒಂದೇ ಒಂದು ಬ್ಯಾನರ್​​ ಇರಲಿಲ್ಲ. ಆದರೆ ಈಗ ಒಬ್ಬ ರೌಡಿಶೀಟರ್​ ಬ್ಯಾನರ್ ಹಾಕಿದ್ದಾರೆ ಎಂದರೇ, ಇದು ಖೇದರದ ಸಂಗತಿ. ಮತ್ತು ನ್ಯಾಯಲಯದ ಆದೇಶ ಮೀರಿ ಬ್ಯಾನರ್​ ಹಾಕಿದ್ದಕ್ಕೆ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು ಎಂದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾದರೆ ತಿಳಿಸುತ್ತೇನೆ

ಮಹದೇಶ್ವರ ದೇಗುಲಕ್ಕೆ ತನ್ನ ಸಹಚರರೊಂದಿಗೆ ಸೈಲೆಂಟ್​ ಸುನೀಲ್ ಭೇಟಿ ನೀಡಿದ್ದು, ಕೇಸರಿ ಶಾಲು ಧರಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇನ್ನು, ಮಹದೇಶ್ವರ ದೇಗುಲದ ಬಳಿ ಸೇರಿದಂತೆ ಚಾಮರಾಜಪೇಟೆ ಕ್ಷೇತ್ರದ ವಿವಿಧ ಕಡೆಗಳಲ್ಲಿ ಸೈಲೆಂಟ್ ಸುನೀಲ್ ಬ್ಯಾನರ್​ಗಳು ಹಾಗೂ ಕಟೌಟ್​ಗಳು ರರಾಜಿಸುತ್ತಿವೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್, ಎಲ್ಲರಿಗೂ ಶಿವರಾತ್ರಿಯ ಶುಭಾಷಯಗಳು. ವಿಶೇಷ ಏನೂ ಇಲ್ಲ, ನಾನು ರಾಜಕೀಯ ಪ್ರವೇಶ ಹಾಗೂ ಚುನಾವಣೆ (Karnataka Assembly Election 2023) ಸ್ಪರ್ಧೆ ಸುದ್ದಿಯಷ್ಟೇ. ರಾಜಕೀಯ ಸೇರ್ಪಡೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ತಿಳಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಟೆಂಪಲ್ ರನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಹಿತೈಷಿಗಳು, ಸ್ನೇಹಿತರು ನನ್ನ ಹೆಸರಲ್ಲಿ ಸೇವೆ ಮಾಡುತ್ತಿದ್ದಾರೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ