Namma Metro: ಕೆಆರ್ ಪುರಂ, ವೈಟ್ ಫೀಲ್ಡ್ ಮಧ್ಯೆ ಮೆಟ್ರೋ ಸಂಚಾರಕ್ಕೆ ದಿನಗಣನೆ; ಇಂದಿನಿಂದ ಕೊನೆಯ ಹಂತದ ಪ್ರಾಯೋಗಿಕ ಸಂಚಾರ

ಎಲ್ಲವೂ ಅಂದಿಕೊಂಡಂತೆಯೇ ನಡೆದರೆ ಮಾರ್ಚ್​ 15ರ ಒಳಗಾಗಿ ಕೆಆರ್ ಪುರಂ ಹಾಗೂ ವೈಟ್ ಫೀಲ್ಡ್ ಮಾರ್ಗ ಮಧ್ಯೆ ಮೆಟ್ರೋ ಸಂಚಾರ ಆರಂಭವಾಗಲಿದೆ.

Namma Metro: ಕೆಆರ್ ಪುರಂ, ವೈಟ್ ಫೀಲ್ಡ್ ಮಧ್ಯೆ ಮೆಟ್ರೋ ಸಂಚಾರಕ್ಕೆ ದಿನಗಣನೆ; ಇಂದಿನಿಂದ ಕೊನೆಯ ಹಂತದ ಪ್ರಾಯೋಗಿಕ ಸಂಚಾರ
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us
ಗಣಪತಿ ಶರ್ಮ
|

Updated on: Feb 22, 2023 | 9:53 AM

ಬೆಂಗಳೂರು: ಕೆಆರ್ ಪುರಂ ಹಾಗೂ ವೈಟ್ ಫೀಲ್ಡ್ ಮಧ್ಯೆ ಮೆಟ್ರೋ (Metro Train) ಸಂಚಾರ ಬಹುತೇಕ ಮಾರ್ಚ್ 15ರ ಒಳಗಾಗಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಬಿಎಂಆರ್​ಸಿಎಲ್ (BMRCL) ಇಂದಿನಿಂದ (ಫೆ. 22) ಕೊನೆಯ ಹಂತದ ಪ್ರಾಯೋಗಿಕ ಸಂಚಾರ ನಡೆಸಲಿದೆ. ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಸೇಫ್ಟಿ ಕಮಿಷನ್ ಮೂರು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಿದೆ. ಈ ಅವಧಿಯಲ್ಲಿ ಸಿಗ್ನಲಿಂಗ್, ಟ್ರ್ಯಾಕ್, ರೈಲಿನ ಸಂಚಾರ, ನಿಲ್ದಾಣಗಳ ನಿರ್ವಹಣೆ ಸೇರಿದಂತೆ ಸುರಕ್ಷಿತೆ ಮತ್ತು ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಂತರ ಒಂದು ವಾರದ ಬಳಿಕ ವರದಿ ಸಲ್ಲಿಸಲಾಗುತ್ತದೆ.

ಪರೀಕ್ಷಾರ್ಥ ಸಂಚಾರದ ವೇಳೆ ಯಾವುದೇ ಲೋಪಗಳು ಕಂಡು ಬಾರದೇ ಇದ್ದಲ್ಲಿ ಬಿಎಂಆರ್​​ಸಿಎಲ್ ವಿಸ್ತೃತ ಮಾರ್ಗದಲ್ಲಿ ಮೆಟ್ರೋ ಸಂಚಾರ ಉದ್ಘಾಟನೆಗೆ ತಯಾರಿ ನಡೆಸಲಿದೆ. ನಂತರ ರಾಜ್ಯ ಸರ್ಕಾರಕ್ಕೆ ಉದ್ಘಾಟನೆ ದಿನಾಂಕ ಪ್ರಕಟಣೆಗಾಗಿ ಮನವಿ ಮಾಡಲಿದೆ. ಎಲ್ಲವೂ ಅಂದಿಕೊಂಡಂತೆಯೇ ನಡೆದರೆ ಮಾರ್ಚ್​ 15ರ ಒಳಗಾಗಿ ಕೆಆರ್ ಪುರಂ ಹಾಗೂ ವೈಟ್ ಫೀಲ್ಡ್ ಮಾರ್ಗ ಮಧ್ಯೆ ಮೆಟ್ರೋ ಸಂಚಾರ ಆರಂಭವಾಗಲಿದೆ.

ಇದನ್ನೂ ಓದಿ: Namma Metro: ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL

ಇತ್ತೀಚೆಗಷ್ಟೇ ನಾಯಂಡಹಳ್ಳಿ- ಕೆಂಗೇರಿಗೆ ಹೋಗುವ ನೇರಳೆ ಬಣ್ಣದ ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ಬಗ್ಗೆ ವರದಿಯಾಗಿತ್ತು. ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ರೈಲು ಚಾಲಕ ಮತ್ತು ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದರು. ರೈಲು ಪ್ರಯಾಣದ ವೇಳೆ ಕೇಳಿ ಬರುವ ಶಬ್ದದಲ್ಲಿ ವ್ಯತ್ಯಾಸ ಕೇಳಿಬಂದಿದ್ದರಿಂದ ಮೆಟ್ರೋ ಸ್ಪೀಡ್​ನಲ್ಲಿ ಬದಲಾವಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿತ್ತು. ಕೂಡಲೇ ವಿಷಯವನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ತಿಳಿಸಿದ್ದರು. ನಂತರ ದುರಸ್ತಿ ಮಾಡಲಾಗಿತ್ತು. ಇದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿತ್ತು. ಇದರಿಂದ ಇಡೀ ದಿನ ಮತ್ತೊಂದು ಟ್ರ್ಯಾಕ್​ನಲ್ಲಿ ಮೆಟ್ರೋ ಓಡಾಟ ನಡೆಸಿತ್ತು. ಹೀಗಾಗಿ ಕೆಆರ್ ಪುರಂ ಹಾಗೂ ವೈಟ್ ಫೀಲ್ಡ್ ಮಧ್ಯೆ ನಡೆಯಲಿರುವ ಪರೀಕ್ಷಾರ್ಥ ಸಂಚಾರ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್