Namma Metro: ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL
ನಾಯಂಡಹಳ್ಳಿ- ಕೆಂಗೇರಿಗೆ ಹೋಗುವ ನೇರಳೆ ಬಣ್ಣದ ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ರಾಜಧಾನಿ ಜನರ ವೇಗದ ಸಂಪರ್ಕ ಸಾಧನ ನಮ್ಮ ಮೆಟ್ರೋದಲ್ಲಿ (Namma Metro) ಭಾರಿ ಅನಾಹುತವೊಂದು ತಪ್ಪಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಅನಾಹುತ ಆಗುತ್ತಿತ್ತು. ನಾಯಂಡಹಳ್ಳಿಯಿಂದ ಕೆಂಗೇರಿಗೆ ಹೋಗುವ ನೇರಳೆ ಬಣ್ಣದ (Purple line) ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ರೈಲು ಚಾಲಕ ಮತ್ತು ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ರೈಲು ಪ್ರಯಾಣದ ವೇಳೆ ಕೇಳಿ ಬರುವ ಶಬ್ದದಲ್ಲಿ ವ್ಯತ್ಯಾಸ ಕೇಳಿಬಂದಿದ್ದರಿಂದ ಮೆಟ್ರೋ ಸ್ಪೀಡ್ನಲ್ಲಿ ಬದಲಾವಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೆ ವಿಷಯವನ್ನು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದರಿಂದ ಇಡೀ ದಿನ ಮತ್ತೊಂದು ಟ್ರ್ಯಾಕ್ನಲ್ಲಿ ಮೆಟ್ರೋ ಓಡಾಟ ನಡೆಸಿದೆ. ಬಳಿಕ ಮೆಟ್ರೋ ಟೀಮ್ ಕೂಡಲೇ ಎಚ್ಚೆತ್ತು ದುರಸ್ಥಿ ಮಾಡಿದ್ದಾರೆ. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ ಎಂದಿನಂತೆ ಮೆಟ್ರೋ ಓಡಾಟ ಶುರು ಮಾಡಿಕೊಂಡಿದೆ.
ಇದನ್ನೂ ಓದಿ: ವಿಚಾರಣೆ ವೇಳೆ ಅವೈಜ್ಞಾನಿಕ ಕಾಮಗಾರಿ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳದ ಅಧಿಕಾರಿಗಳು
ಮೆಟ್ರೋ ಹಳಿ ಬಿರುಕಿಗೆ ಸಾರ್ವಜನಿಕರ ಆಕ್ರೋಶ
ಮೆಟ್ರೋ ಹಳಿ ಬಿರುಕುಗೊಂಡಿರುವುದರ ಬಗ್ಗೆ ಜನರು ಆಕ್ರೋಶಗೊಂಡಿದ್ದು, ಟ್ರ್ಯಾಕ್ ಹಾಕಿದ 3 ವರ್ಷದೊಳಗೆ ಹಳಿಯಲ್ಲಿ ಬಿರುಕು ಕಂಡಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಕಾಮಗಾರಿಯಲ್ಲಿ ಲೋಪವಾಯ್ತೆ? ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬೀಳಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
ಇನ್ನು BMRCL ಸಿಬ್ಬಂದಿಗಳು ನಿಗೂಢವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ್ದು, ಇಲ್ಲಿಯವರೆಗೆ ಲೋಪವನ್ನು ಏಕೆ ಬಹಿರಂಗ ಪಡಿಸಿಲ್ಲ? ಲೋಪ ಆದರೂ ಇಲ್ಲಿಯವರಿಗೆ BMRCL ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳದೆ ಸೈಲೆಂಟ್ ಆಗಿರುವುದು ಏಕೆ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 7 February 23