Olaf Scholz: ಫೆಬ್ರವರಿ 26ರಂದು ಬೆಂಗಳೂರಿಗೆ ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಭೇಟಿ
ಸ್ಕೋಲ್ಜ್ ಅವರು ಚಾನ್ಸಲರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಭೇಟಿ ಹಿನ್ನೆಲೆ ಶನಿವಾರ ನವದೆಹಲಿಗೆ ಆಗಮಿಸುತ್ತಿದ್ದಾರೆ.
ಬೆಂಗಳೂರು: ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್(German Chancellor Olaf Scholz) ಅವರು ಮುಂದಿನ ಭಾನುವಾರ ಅಂದರೆ ಫೆಬ್ರವರಿ 26ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸ್ಕೋಲ್ಜ್ ಅವರು ಚಾನ್ಸಲರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಭೇಟಿ ಹಿನ್ನೆಲೆ ಶನಿವಾರ ನವದೆಹಲಿಗೆ ಆಗಮಿಸುತ್ತಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಭಾನುವಾರ ಬೆಂಗಳೂರಿಗೆ ಭೇಟಿ ನೀಡಿ ನಂತರ ಜರ್ಮನಿಗೆ ಹಿಂತಿರುಗಲಿದ್ದಾರೆ.
ಏಂಜೆಲಾ ಮರ್ಕೆಲ್ ಅವರ ಉತ್ತರಾಧಿಕಾರಿಯಾಗಿ ಡಿಸೆಂಬರ್ 8, 2021 ರಂದು ಜರ್ಮನಿಯ ಚಾನ್ಸೆಲರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಸ್ಕೋಲ್ಜ್ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2011ರಲ್ಲಿ ದ್ವೈವಾರ್ಷಿಕ ಅಂತರಸರ್ಕಾರಿ ಸಮಾಲೋಚನೆ (ಐಜಿಸಿ) ಕಾರ್ಯವಿಧಾನವನ್ನು ಪ್ರಾರಂಭಿಸಿದ ನಂತರ ಜರ್ಮನಿಯ ಚಾನ್ಸಲರ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಉಭಯ ದೇಶಗಳ ನಡುವಿನ ಸರ್ಕಾರದ ಚೌಕಟ್ಟಿನಲ್ಲಿ ನಡೆಯುವ ಕಾರ್ಯವಿಧಾನವಾಗಿದೆ. ಇದರ ಅಡಿಯಲ್ಲಿ ಎರಡೂ ದೇಶಗಳ ಸಚಿವರು ತಮ್ಮ ತಮ್ಮ ಕ್ಷೇತ್ರಗಳ ಕುರಿತು ಚರ್ಚೆಗಳನ್ನು ನಡೆಸುತ್ತಾರೆ.
ಇದನ್ನೂ ಓದಿ: Ukraine War: 80 ವರ್ಷಗಳ ನಂತರ ಮತ್ತೆ ಜರ್ಮನ್ ಟ್ಯಾಂಕ್ಗೆ ರಷ್ಯಾ ಸೇನೆ ಮುಖಾಮುಖಿ; ವ್ಲಾದಿಮಿರ್ ಪುಟಿನ್
ಫೆ.25ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಕೋಲ್ಜ್ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ’ ಬಳಿಕ ಭಾರತ ಮತ್ತು ಜರ್ಮನ್ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಇಎಫ್) ಮಾಹಿತಿ ನೀಡಿದೆ.
ದೆಹಲಿಯ MEA ಪ್ರಕಾರ, ಸ್ಕೋಲ್ಜ್ ಅವರ ಭೇಟಿಯು 6 ನೇ ಅಂತರ-ಸರ್ಕಾರಿ ಸಮಾಲೋಚನೆಯ ಪ್ರಮುಖ ಫಲಿತಾಂಶಗಳ ಬಗ್ಗೆ ಸ್ಟಾಕ್ ತೆಗೆದುಕೊಳ್ಳಲು ಮತ್ತು ಪ್ರಗತಿ ಸಾಧಿಸಲು, ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಬಲಪಡಿಸಲು, ನಿಕಟ ಆರ್ಥಿಕ ಸಂಬಂಧಗಳ ಕಡೆಗೆ ಕೆಲಸ ಮಾಡಲು, ಪ್ರತಿಭೆಗಳ ಚಲನಶೀಲತೆಗೆ ಅವಕಾಶವನ್ನು ಹೆಚ್ಚಿಸಲು ಮತ್ತು ವಿಜ್ಞಾನದಲ್ಲಿ ನಡೆಯುತ್ತಿರುವ ಸಹಯೋಗಕ್ಕೆ ಕಾರ್ಯತಂತ್ರದ ಮಾರ್ಗದರ್ಶನವನ್ನು ನೀಡಲು ಅನುವು ಮಾಡಿಕೊಡಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:58 am, Wed, 22 February 23