D Roopa Viral Audio: ನಮ್ಮ ಸಂಸಾರ ಚೆನ್ನಾಗಿಲ್ಲ, ರೋಹಿಣಿ ಕ್ಯಾನ್ಸರ್ ಇದ್ದಂಗೆ; ರೂಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲೇನಿದೆ?

ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ವೈರಲ್ ಆಡಿಯೋದಲ್ಲೇನಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

D Roopa Viral Audio: ನಮ್ಮ ಸಂಸಾರ ಚೆನ್ನಾಗಿಲ್ಲ, ರೋಹಿಣಿ ಕ್ಯಾನ್ಸರ್ ಇದ್ದಂಗೆ; ರೂಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲೇನಿದೆ?
ಗಂಗರಾಜು ಮತ್ತು ಡಿ ರೂಪಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್
Follow us
TV9 Web
| Updated By: ಆಯೇಷಾ ಬಾನು

Updated on:Feb 22, 2023 | 11:56 AM

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಫೈಟ್ ಆಯ್ತು, ಬಂಗಲೆ ಬಡಿದಾಟವಾಯ್ತು ಈಗ ಆಡಿಯೋ ಸಮರ ಶುರುವಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ವೈರಲ್ ಆಡಿಯೋದಲ್ಲೇನಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ವೈರಲ್ ಆಡಿಯೋದಲ್ಲೇನಿದೆ?

ಗಂಗರಾಜು: ಸಾ.ರಾ.ಮಹೇಶ್ ಹಾಗೂ ಸಿಂಧೂರಿ ಅವ್ರಿಗೂ ರಾಜಿ ಆಯ್ತು ಅಂದ್ರು. ಸರಿ ನೀವ್ ಮಾಡ್ಕೊಳ್ಳಿ ಅಂದೆ. ನನ್ನ ವಿಷ್ಯದಲ್ಲಿ ಯಾವುದೇ ರಾಜಿ ಇಲ್ಲ ಅಂದೆ.

ರೂಪಾ: ಅವ್ರು ನೀವ್ ತಿಳಿದಷ್ಟು ಸಾಚಾ ಇಲ್ಲ. ಅವ್ರು ತೆಲುಗು. ಅವ್ರಿಗೆ ಕನ್ನಡ ಮಾತಾಡಲು ಬರಲ್ಲ. ಆದ್ರೆ ಅವ್ರ ಗಂಡನ ಅಣ್ಣನನ್ನ ರಾಜಕೀಯಕ್ಕೆ ತರಲು ನೋಡ್ತಿದ್ದಾರೆ. ಮೊನ್ನೆ ಯಾವ್ದೋ ಜಿಎನ್​ಆರ್ ಫೌಂಡೇಷನ್ ಅಂತ ಮಾಡ್ಕೊಂಡು ನಿರ್ಮಲಾನಂದ ಸ್ವಾಮೀಜಿ, ಸೂಲಿಬೆಲೆ ಅವ್ರನ್ನ ಕರೆದು ಕಾರ್ಯಕ್ರಮ ಮಾಡಿದ್ದಾರೆ. ನಾನೇ ಸ್ವಾಮೀಜಿನ ಕರೆದಿದ್ದು. ನಾನೇ ಕಾರ್ಯಕ್ರಮ ಮಾಡಿದ್ದು ಅಂತ ಹೇಳಿಕೊಂಡಿದ್ದಾಳೆ.

ರೂಪಾ: ನಮ್ಮನೆ ಅವ್ರ ಬಳಿ ಆ ಕಾರ್ಯಕ್ರಮಕ್ಕೆ ಹೋಗ್ಲಾ ಅಂತ ಕೇಳ್ತಾಳೆ. ಇವ್ರು ಏನ್ ಕಾರ್ಯಕ್ರಮ ಅಂತ ಕೇಳ್ತಾರೆ. ಆಗ ಅವಳಂತಾಳೆ. ಈಗ ಫೌಂಡೇಶನ್​ನ ಉದ್ದೇಶ ಚಾರಿಟಿ. ಅಲ್ಟಿಮೇಟ್ ಏಮ್ ರಾಜಕೀಯಕ್ಕೆ ಬರೋದು. ಬಿಜೆಪಿ ಟಿಕೆಟ್ ತಗೊಳೋದು ಅಂತಾಳೆ. ಇಂಥಾ ಡೋಂಗಿಗಳನ್ನ, ಊಸರವಳ್ಳಿಗಳನ್ನ ನೀವೇಕೆ ಸಪೋರ್ಟ್ ಮಾಡ್ತೀರಿ.

ರೂಪಾ: ಸಾ.ರಾ.ಮಹೇಶ್ ಹಿಂದೆ ಹೋಗಿ ನನ್ನ ಮೇಲೆ ದೂರು ವಾಪಸ್ ಪಡೀರಿ ಅಂತಾ ಸಂಧಾನಕ್ಕೆ ಹೋಗಿದ್ದು ಸರಿನಾ ಸಾ.ರಾ.ಮಹೇಶ್ ಕೇಸ್ ತಗೋಳಿ ಅಂತಾ ನೀವು ಹೇಳಿ ಅಂತಾ ಹೆಚ್​ಡಿಕೆ, ಹೆಚ್​ಡಿಡಿ, ಚಲುವರಾಯಸ್ವಾಮಿ, ಸ್ಪೀಕರ್ ಕಾಗೇರಿ ಹತ್ತಿರ ಬೇಡಿದ್ದಾರೆ. ಐಎಎಸ್ ರಮಣರೆಡ್ಡಿ, ಮಣಿವಣ್ಣನ್ ಮೂಲಕವೂ ಮಹೇಶ್ ಮೇಲೆ ಒತ್ತಡ ಹೇರಿದ್ದಾರೆ. ಆದ್ರೆ ಮಹೇಶ್ ಕೇಸ್ ವಾಪಸ್ ಪಡೆಯೋಕೆ ಒಪ್ಪಿಲ್ಲ. ಆಮೇಲೆ ಬೆಳಗಾವಿ ಸೆಷನ್ಸ್ ಟೈಮ್ ನಲ್ಲಿ ಮಣಿವಣ್ಣನ್ ಮೂಲಕ ರಾಜೀ ಸಂಧಾನಕ್ಕೆ ಭೇಟಿಯಾಗಿದ್ದಾರೆ. ಆದ್ರೂ ವರ್ಕೌಟ್ ಆಗಿಲ್ಲ, ಕೇಸೇ ವಾಪಸ್ ತಗೋಳೋಕೆ ಸಾ.ರಾ.ಮಹೇಶ್ ಒಪ್ಪಿಲ್ಲ. ಮೈಸೂರು ಡಿಸಿ ಆಫಿಸ್ ನಲ್ಲಿದ್ದ ಸಾಮಾನುಗಳು ಎಲ್ಲಿ ಹೋದ್ವು? ಜಾಲಹಳ್ಳಿಯಲ್ಲಿ ಮನೆ ಕಟ್ತಿದ್ದಾರೆ, ಆ ಮನೆ ಖರ್ಚಿನ ಚಾಟ್ ನನ್ನ ಹತ್ತಿರ ಇದೆ. ಫಾರಿನ್ ಆಫಿಸರ್ ಜತೆ ಚಾಟ್ ನನ್ನ ಹತ್ತಿರ ಇದೆ. ಗಂಡನ ಅಣ್ಣನನ್ನು ಪಾಲಿಟಿಕ್ಸ್ ಗೆ ತರಲು ಪ್ಲ್ಯಾನ್ ಮಾಡಿದ್ದಾಳೆ.

ಇದನ್ನೂ ಓದಿ: Rohini Sindhuri Vs D Roopa: ರೋಹಿಣಿ ವಿರುದ್ಧ ದೂರು ನೀಡಲು ಹೇಳಿದ್ದ ರೂಪಾ; ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಮಾತನಾಡಿದ್ದ ಆಡಿಯೋ ವೈರಲ್

ಲ್ಯಾಂಡ್ ತಗೋಳೋಕೆ ನನ್ನ ಗಂಡನ ಹತ್ತಿರ ಹೆಲ್ಪ್ ತಗೋಂಡಿದ್ದಾಳೆ. ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣ್ ಕೊಟ್ಟಿ ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್ ನಲ್ಲಿ ಇರೋದ್ರಿಂದ ಹೆಲ್ಪ್ ತಗೋಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಅಂತಾ ಒಪಿನಿಯನ್ ಕೇಳಿದ್ದಾಳೆ. ಹಲವಾರಿ ಡಿಸ್ಪ್ಯೂಟ್ ಲ್ಯಾಂಡ್ ಬಗ್ಗೆ ಮಾಹಿತಿ ಕೇಳಿದ್ದಾಳೆ. ಡಿಸ್ಪ್ಯೂಟ್ ಲ್ಯಾಂಡ್ ಕೂಡಾ ತಗೋಂಡು ತನ್ನ ಪ್ರಭಾವ ಬಳಸಿ ಮೇಂಟೇನ್ ಮಾಡಬಹುದು ಅನ್ನೋದು ಆಕೆ ಇಂಟೆನ್ಶನ್. ಇದೆಲ್ಲ ಸರಿನಾ? ನಾನು ಅದಕ್ಕೆ ಕೇಳಿದ್ದೀನಿ ನಮ್ಮ ಮನೆಯವರನ್ನ ಅಲ್ಲಿಂದ ಟ್ರಾನ್ಸ್ ಫರ್ ಮಾಡಿ ಅಂತಾ.

ನಮ್ಮ ಮನೆಯವರಿಗೆ ನಮ್ಮ ಮನೆ ಕಡೆ ಗಮನ ಇಲ್ಲ. ನಮ್ಮ ಫ್ಯಾಮಿಲಿಗೆ ಏನೂ ಯೂಸ್ ಇಲ್ಲ. ಬರೀ ಇಂಥೋರ್ ಕೆಲಸ ಮಾಡ್ಕೋಡ್ತಾರೆ. ನಾವೇನ್ ಒಂದು ಪೈಸಾ ಮಾಡಿದ್ದೀವಾ? ಮನೆ ಕಡೆ ಅವರಿಗೆ ಗಮನ ಇದ್ಯಾ ನಮ್ಮನೆಯವರಿಗೆ? ಎಷ್ಟು ಹಿಡಿದಿದ್ದೀನಿ ನಾನು. ಆ ಲ್ಯಾಂಡ್ ದು ಈ ಲ್ಯಾಂಡ್ ದು ಅಂತಾ ಮಾಹಿತಿ ತಗೋಂಡಿದ್ದಾಳೆ ಆಕೆ. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿಕೆ ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ. ಎಂಟು ವರ್ಷದಿಂದ ನೋಡ್ತಿದ್ದೀನಿ ನಾನು. ಆಯಮ್ಮ ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ. ಅವರ ಹಿಂದೇನೆ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ಗೂ ಅವರಿಂದಾನೆ ರಿಪ್ಲೇ ಬರೆಸಿಕೊಳ್ತಾಳೆ ಅಂತಾ ವೈರಲ್ ಆಡಿಯೋದಲ್ಲಿ ರೂಪಾ ತಮ್ಮ ಅಸಹಾಯಕತೆ ವಿವರಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:40 am, Wed, 22 February 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್