Rohini Sindhuri Vs D Roopa: ರೋಹಿಣಿ ವಿರುದ್ಧ ದೂರು ನೀಡಲು ಹೇಳಿದ್ದ ರೂಪಾ; ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಮಾತನಾಡಿದ್ದ ಆಡಿಯೋ ವೈರಲ್
ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ದೂರು ನೀಡುತ್ತೇನೆ ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ (D Roopa Moudgil) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವೆ ನಡೆಯುತ್ತಿದ್ದ ವೈಯಕ್ತಿಕ ಜಗಳಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಇಬ್ಬರಿಗೂ ಬೇರೆಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗೂ ಇಬ್ಬರಿಗೂ ಸಾಮಾಜಿಕ ಜಾಲತಾಣಗಳಲ್ಲಾಗಲಿ, ಬಹಿರಂಗವಾಗಲಿ ಪೋಸ್ಟ್, ಹೇಳಿಕೆಗಳನ್ನು ನೀಡದಂತೆ ವಾರ್ನಿಂಗ್ ಕೊಡಲಾಗಿದೆ. ಆದ್ರೆ ಈಗ ಇದರೆಲ್ಲದರ ನಡುವೆ ರೋಹಿಣಿ ಬಗ್ಗೆ ಡಿ.ರೂಪಾ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ಆಡಿಯೋ ಹೊರ ಬಿದ್ದಿದ್ದು ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ.
ವೈರಲ್ ಆಡಿಯೋದಲ್ಲೂ ರೋಹಿಣಿ ವಿರುದ್ಧ ಆರೋಪ
ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ರೂಪಾ ಮಾತನಾಡಿ ಗಂಗರಾಜುಗೆ ರೋಹಿಣಿ ವಿರುದ್ಧ ದೂರು ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಆಡಿಯೋ ಹೀಗಿದೆ.. ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣ್ ಕೊಟ್ಟಿ ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್ ನಲ್ಲಿ ಇರೋದ್ರಿಂದ ಹೆಲ್ಪ್ ತಗೋಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಅಂತಾ ಒಪಿನಿಯನ್ ಕೇಳಿದ್ದಾಳೆ. ‘ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ’ ‘ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಮಾಹಿತಿ ಸಂಗ್ರಹಿಸಿದ್ದಾರೆ’ ‘ನಮ್ಮವರಿಂದ ರೋಹಿಣಿ ಸಿಂಧೂರಿ ಮಾಹಿತಿ ಪಡೆಯುತ್ತಿದ್ದಾರೆ’. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿಕೆ ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಡಿ.ರೂಪಾ ಗಂಗರಾಜು ಜತೆ ಸಂಭಾಷಣೆ ವೇಳೆ ಆರೋಪ ಮಾಡಿದ್ದಾರೆ. ಸದ್ಯ ಈ ಆಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: ರೂಪಾ ಆರೋಪಿಸಿರುವ ರೋಹಿಣಿ ಸಿಂಧೂರಿಯ ಕೋಟ್ಯಾಂತರ ರೂ. ಭವ್ಯ ಬಂಗಲೆ ಹೇಗಿದೆ ಗೊತ್ತಾ?ಇಲ್ಲಿವೆ ಫೋಟೋಸ್
ರೂಪಾ ನನಗೆ ಕರೆ ಮಾಡಿ ರೋಹಿಣಿ ವಿರುದ್ಧ ದೂರು ನೀಡಲು ಹೇಳಿದ್ರು
ಇನ್ನು ಆಡಿಯೋ ವೈರಲ್ ಬಗ್ಗೆ ಗಂಗರಾಜು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ತಿಂಗಳು 30ರಂದು ರೂಪಾ ನನಗೆ ಫೋನ್ ಮಾಡಿದ್ರು. ಐಪಿಎಸ್ ಡಿ.ರೂಪಾ ನನ್ನ ಜತೆ 25 ನಿಮಿಷ ಮಾತಾಡಿದ್ದಾರೆ. ಡಿ.ರೂಪಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ದೂರು ನೀಡುತ್ತೇನೆ ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಹೇಳಿಕೆ ನೀಡಿದ್ದಾರೆ.
ಅಧಿಕಾರದ ವ್ಯಾಪ್ತಿ ಬಿಟ್ಟು ನನ್ನ ಜತೆ ರೂಪಾ ಮಾತಾಡಿದ್ದಾರೆ. ರೋಹಿಣಿ ಅಕ್ರಮದ ಬಗ್ಗೆ ಮಾಧ್ಯಮಗಳ ಬಳಿ ಹೇಳಿ ಎಂದ್ರು. ನನಗೆ ಫೋಟೋಗಳನ್ನು ಕಳಿಸಿ ಮಾಧ್ಯಮಗಳ ಮುಂದೆ ಇಡಿ ಎಂದ್ರು. ರೂಪಾ ಹೇಳಿಕೆಯನ್ನು ನಾನು ನಿರಾಕರಿಸಿದೆ. ಬೇರೆಯರ ಬಗ್ಗೆ ತೇಜೋವಧೆ ಮಾಡುವುದಿಲ್ಲ ಎಂದು ಹೇಳಿದೆ. ರೋಹಿಣಿ ಬಗ್ಗೆ ದೂರು ನೀಡುವಂತೆ ನನಗೆ ರೂಪಾ ಹೇಳಿದ್ರು. ರೋಹಿಣಿ ಅಕ್ರಮದ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇದೆ. ಅನ್ಯಾಯ ಮಾಡಿದವರ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ ಎಂದು ರೂಪಾ ಹೇಳಿದರು. ಆದ್ರೆ ರೂಪಾ ಹಾಗಂದ ಮಾತ್ರಕ್ಕೆ ನಾನು ದೂರು ನೀಡಲಾಗುತ್ತಾ? ಎಂದು ಟಿವಿ9ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:34 am, Wed, 22 February 23