ಬೆಂಗಳೂರು, ಸೆ.12: ದೆಹಲಿ ಬಳಿಕ ದಕ್ಷಿಣ ಭಾರತದಲ್ಲೆ ಮೊದಲ ಹವಾ ನಿಯಂತ್ರಿತ ನೆಲ ಮಾಳಿಗೆ ಕಾಂಪ್ಲೆಕ್ಸ್ ಕಟ್ಟಲಾಗಿದೆ (First Air-Conditioned Underground Market). ದೆಹಲಿಯಲ್ಲಿ ರಾಜೀವ್ ಚೌಕ್ ಮೆಟ್ರೋ ಬಳಿಯೇ ಪಾಲಿಕೆ ಬಜಾರ್ ನಿರ್ಮಿಸಲಾಗಿದೆ, ಬೆಂಗಳೂರಿನಲ್ಲಿಯೂ ವಿಜಯನಗರದ ನಮ್ಮ ಮೆಟ್ರೊ ಮತ್ತು ಬಿಎಂಟಿಸಿ ನಿಲ್ದಾಣಗಳ ಬಳಿಯೇ ಪಾಲಿಕೆ ಬಜಾರ್‌ನ್ನ 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಇನ್ನೂ ಹವಾನಿಯಂತ್ರಿತ ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್ ಸಕ್ಸಸ್ ಆದರೆ ನಗರದ ಇತರೆ ಸ್ಥಳಗಳಲ್ಲಿ ಇದೇ ಮಾದರಿಯಲ್ಲಿ ಬಜಾರ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆ.
ಕಳೆದ ಆಗಷ್ಟ 25ರಂದು ಸಿಎಂ ಸಿದ್ಧರಾಮಯ್ಯ ಪಾಲಿಕೆ ಬಜಾರ್ ಲೋಕಾರ್ಪಣೆಗೊಳಿಸಿದ್ದಾರೆ. ಒಟ್ಟು 81 ಕೊಠಡಿಗಳಿದ್ದು ಈ ಪೈಕಿ 79 ಕಾಂಪ್ಲೆಕ್ಸ್ ಗಳು ವ್ಯಾಪಾರಸ್ಥರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಪಾಲಿಕೆ ಬಜಾರ್‌ನಲ್ಲಿ ಕೆಲ ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲಾಗಿದ್ದು ಕೆಲ ಅಂಗಡಿಗಳಲ್ಲಿ ವ್ಯಾಪಾರ ಆರಂಭವಾಗಿದೆ ಹೊರಗಡೆ ಬೀದಿ ಬದಿ ವ್ಯಾಪಾರ ಮಾಡಲು ಅನಾನೂಕೂಲ ಆಗ್ತಿತ್ತು. ಇದೀಗ ನೆಲ ಮಾಳಿಗೆ ಬಜಾರ್ ಮಾಡಿ ಕೊಡಲಾಗಿದೆ. ಆದರೆ ಇನ್ನೂ ತಕ್ಕ ಮಟ್ಟಿಗೆ ಗ್ರಾಹಕರು ಬರುತ್ತಿಲ್ಲ. ಎಲ್ಲ ಕಾಂಪ್ಲೆಕ್ಸ್ ಗಳಲ್ಲಿ ವ್ಯಾಪಾರಸ್ಥರು ಬಂದರೆ ಆಗ ವ್ಯಾಪಾರ ಚೆನ್ನಾಗಿ ಆಗುತ್ತೆ ಅಂತಾರೆ ವ್ಯಾಪಾರಸ್ಥರು.
ಇದನ್ನೂ ಓದಿ: ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿದ್ದಾರೆ: ಕುಮಾರಸ್ವಾಮಿ ಕಿಡಿ
ಪ್ರತಿಯೊಂದು ಅಂಗಡಿಗಳಿಗೆ ಬೆಂಕಿ ಅನಾಹುತ ಆದರೆ ತಡೆಗಟ್ಟಲು ಅಗ್ನಿಶಾಮಕ ಉಪಕರಣ ಅಳವಡಿಸಲಾಗಿದೆ. ಇನ್ನೂ ಗ್ರಾಹಕರು ಕೂಡ ಬಜಾರ್ ಗೆ ಬರುತ್ತಿದ್ದಾರೆ ಮುಂಚೆ ಮಳೆ ಬಂದರೆ ತೊಂದರೆ ಆಗುತ್ತಿತ್ತು. ಟ್ರಾಫಿಕ್ ಸಮಸ್ಯೆ ಕೂಡ ಎದುರಿಸುತ್ತಿದ್ವಿ, ಇದೀಗ ಈ ಬಜಾರ್ ನಿರ್ಮಾಣದಿಂದ ಒಂದೆ ಕಡೆಗಳಲ್ಲಿ ಖರೀದಿ ಮಾಡಬಹುದು. ಇದೇ ರೀತಿಯಾಗಿ ನಗರದ ಹಲವೆಡೆ ಏರಿಯಾಗಳಲ್ಲಿ ಇದೆ ಮಾದರಿಯಲ್ಲಿ ಬಜಾರ್ ನಿರ್ಮಾಣವಾದರೆ ತುಂಬಾ ಅನುಕೂಲ ಆಗುತ್ತೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.
ಸಧ್ಯ 79 ಬಜಾರ್ ಕಾಂಪ್ಲೆಕ್ಸ್ ಪೈಕಿ ಬೆರಳೆಣಿಕೆಯಷ್ಟು ಮಾತ್ರ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಕೊಡಲಾಗಿದೆ. ಆದಷ್ಟು ಬೇಗನೆ ಇನ್ನೂಳಿದ ಮಳಿಗೆಗಳಲ್ಲಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಟ್ರೆ ವ್ಯಾಪಾರ ಆಗಲಿದ್ದು, ಬೆಳೆಯುತ್ತಿರೋ ಬೆಂಗಳೂರಿನ ಹಲವೆಡೆ ಇಂತಹ ನೆಲ ಮಳಿಗೆಗಳ ಅವಶ್ಯಕತೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:32 am, Thu, 12 September 24