ತುಮಕೂರು: ಆರೋಪಿ ಪತ್ತೆಹಚ್ಚಲು ಬಾಡಿಗೆ ಕಾರ್ ಕೇಳಿದ ಪೊಲೀಸರು; ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!

ಕಾರಿನಲ್ಲಿ ಹೋಗಿ ಆರೋಪಿ ಕರೆತರುತ್ತೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಬಾಡಿಗೆಗೆ ಕಾರು ತರಲಾಗದೆ ಎಸ್​ಪಿ ಭೇಟಿಯಾಗಿ ಮನವಿ ಮಾಡಲಾಗಿತ್ತು. ವಿಚಾರ ತಿಳಿದು ತಮ್ಮ ಕಾರನ್ನೇ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ತುಮಕೂರು ಎಸ್​ಪಿ ದಂಡಿನಶಿವರ ಠಾಣೆಗೆ ಕಾರು ಕಳುಹಿಸಿದ್ದಾರೆ.

ತುಮಕೂರು: ಆರೋಪಿ ಪತ್ತೆಹಚ್ಚಲು ಬಾಡಿಗೆ ಕಾರ್ ಕೇಳಿದ ಪೊಲೀಸರು; ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!
ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!
Follow us
TV9 Web
| Updated By: ganapathi bhat

Updated on: Jan 13, 2022 | 10:15 PM

ಬೆಂಗಳೂರು: ನಕಲಿ ಅಂಕಪಟ್ಟಿ ಮಾರುತ್ತಿದ್ದ ಆರೋಪಿಯನ್ನು ಸಿಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆಯ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿ 54 ನಕಲಿ ಅಂಕಪಟ್ಟಿ, 1 ಲ್ಯಾಪ್​ಟಾಪ್, 3 ಮೊಬೈಲ್​ ಜಪ್ತಿ ಮಾಡಿದೆ. ನೋಯ್ಡಾದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಕಚೇರಿ ನಡೆಸಲಾಗುತ್ತಿತ್ತು. ಎಂ.ಜಿ. ರಸ್ತೆಯಲ್ಲಿ ಕಚೇರಿ ತೆರೆದು ಗ್ಯಾಂಗ್​ ದಂಧೆ ನಡೆಸುತ್ತಿತ್ತು. ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್​ ಪದವಿಯ ಅಂಕಪಟ್ಟಿ ಮಾರುತ್ತಿತ್ತು. ಇದೀಗ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಕಬ್ಬನ್​ ಪಾರ್ಕ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಲ್ಯ ವಿವಾಹ ಪ್ರಕರಣಗಳಲ್ಲಿ FIR ದಾಖಲಿಸಲು ವಿಳಂಬ; ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೆ ಡಿಸಿ ಸೂಚನೆ

ಬಾಗಲಕೋಟೆ: ಬಾಲ್ಯ ವಿವಾಹ ಪ್ರಕರಣಗಳಲ್ಲಿ FIR ದಾಖಲಿಸಲು ವಿಳಂಬ ಹಿನ್ನೆಲೆ ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೆ ಡಿಸಿ ಸೂಚನೆ ನೀಡಿದ್ದಾರೆ. ಮಹಿಳಾ ಅಭಿವೃದ್ಧಿ ಇಲಾಖೆ ಡಿಡಿ ಬಣಕಾರಗೆ ಸೂಚನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾ.ಕೆ. ರಾಜೇಂದ್ರ ಈ ಬಗ್ಗೆ ಸೂಚನೆ ಹೊರಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ 41 ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ 32 ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಉಳಿದ 9 ಪ್ರಕರಣಗಳಲ್ಲಿ FIR ದಾಖಲಿಸಲು ಸೂಚಿಸಲಾಗಿತ್ತು.

FIR ದಾಖಲಿಸಲು ಸೂಚಿಸಿದರೂ ದಾಖಲಿಸದ ಹಿನ್ನೆಲೆ, ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೊಳಿಸಲು ಸೂಚನೆ ಕೊಡಲಾಗಿದೆ. ಶಿಲ್ಪಾ ಹಿರೇಮಠ, ಸಾವಿತ್ರಿ, ಅನುರಾಧಾ ಹಾದಿಮನಿ, ಅನ್ನಪೂರ್ಣ ಕುಬಕಡ್ಡಿ, ವೆಂಕಪ್ಪ ಗಿರಿತಿಮ್ಮಣ್ಣಗೆ ನೋಟಿಸ್ ಜಾರಿಗೊಳಿಸಲು ಸೂಚನೆ ನೀಡಲಾಗಿದೆ. ಈ ಐವರಿಗೂ ಶೋಕಾಸ್ ನೋಟಿಸ್ ಜಾರಿಗೆ ಸೂಚನೆ ಕೊಡುವ ಬಗ್ಗೆ ಡಿಸಿ ಆದೇಶ ನೀಡಿದ್ದಾರೆ.

ಬಾಡಿಗೆ ಕಾರು ಮಾಡಿಕೊಂಡು ಬಂದರೆ ಹಿಡಿದು ತರುತ್ತೇವೆ ಎಂದ ಪೊಲೀಸರು; ಠಾಣೆಗೆ ತಮ್ಮ ಕಾರು ಕಳಿಸಿದ ಎಸ್​ಪಿ

ತುಮಕೂರು: ಪ್ರಕರಣ ಒಂದರ ವಿಚಾರದಲ್ಲಿ ಠಾಣೆಗೆ ಎಸ್​ಪಿ ತಮ್ಮ ಕಾರು ಕಳಿಸಿದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೋಡಿಹಳ್ಳಿಯಲ್ಲಿ ನಾಗೇಂದ್ರಪ್ಪ ಮೇಲೆ ಇಬ್ಬರು ಹಲ್ಲೆ ಮಾಡಿದ್ದರು. ನಾಗೇಂದ್ರಪ್ಪ ಮೇಲೆ ಶಿವಪ್ರಕಾಶ್, ಚಂದನ್​ ಹಲ್ಲೆ ಮಾಡಿದ್ದರು. ದಂಡಿನಶಿವರ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿತ್ತು. ಬಳಿಕ, ಕೊಲೆ ಯತ್ನ ಪ್ರಕರಣದಲ್ಲಿ ಶಿವಪ್ರಕಾಶ್ ಜಾಮೀನು ಪಡೆದಿದ್ದರು. ಆರೋಪಿ ಚಂದನ್ ​ಜಾಮೀನು ಪಡೆಯದೆ ಓಡಾಡಿಕೊಂಡಿದ್ದ. ಈ ವೇಳೆ, ನಾಗೇಂದ್ರಪ್ಪ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಪೊಲೀಸರು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಎಸ್​ಪಿಗೆ ದೂರು ನೀಡಲಾಗಿತ್ತು. ಬಾಡಿಗೆ ಕಾರು ಮಾಡಿಕೊಂಡು ಬಂದರೆ ಹಿಡಿದು ತರುತ್ತೇವೆ. ಕಾರಿನಲ್ಲಿ ಹೋಗಿ ಆರೋಪಿ ಕರೆತರುತ್ತೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಬಾಡಿಗೆಗೆ ಕಾರು ತರಲಾಗದೆ ದೂರುದಾರರು ಎಸ್​ಪಿ ಭೇಟಿಯಾಗಿ ಮನವಿ ಮಾಡಲಾಗಿತ್ತು. ವಿಚಾರ ತಿಳಿದು ತಮ್ಮ ಕಾರನ್ನೇ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ತುಮಕೂರು ಎಸ್​ಪಿ ದಂಡಿನಶಿವರ ಠಾಣೆಗೆ ಕಾರು ಕಳುಹಿಸಿದ್ದಾರೆ.

ನೊಂದವರನ್ನು ಕಾರಿನಲ್ಲಿ ಕೂರಿಸಿ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ಇದೇ ಕಾರಿನಲ್ಲಿ ತೆರಳಿ ಆರೋಪಿ ಬಂಧಿಸುವಂತೆ SP ಸೂಚನೆ ನೀಡಿದ್ದಾರೆ. ಚಾಲಕನಿಗೆ ಮಾಹಿತಿ ನೀಡಿ ದಂಡಿನಶಿವರ ಠಾಣೆ ಕಳಿಸಿದ್ದಾರೆ. ಆರೋಪಿಗಳು ಪೊಲೀಸರೊಬ್ಬರ ಸಂಬಂಧಿಯಾಗಿದ್ದ ಹಿನ್ನೆಲೆ, ಆರೋಪಿಗಳನ್ನು ಬಂಧಿಸದೆ ಪೊಲೀಸರು ಕಾಲಹರಣ ಮಾಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Crime News: ಅಂತಾರಾಜ್ಯ ಕಳ್ಳ ಬಂಧನ; 16 ಲಕ್ಷ ಮೌಲ್ಯದ 21 ಬೈಕ್‌ಗಳು ವಶಕ್ಕೆ, ಸಾಲಬಾಧೆಯಿಂದ ದಂಪತಿ ನೇಣಿಗೆ ಶರಣು

ಇದನ್ನೂ ಓದಿ: Crime News: ಮಗುವನ್ನು ಕೊಂದು ದಂಪತಿ ಆತ್ಮಹತ್ಯೆ, ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು