ಬೆಂಗಳೂರು, ನ.19: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿ (India vs Australia, WC Final) ಇಂದು ಮಧ್ಯಾಹ್ನ ಆರಂಭವಾಗಲಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ಪಂದ್ಯ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ಭಾರತ (India) ಗೆದ್ದು ಬರಲಿ ಎಂದು ಎಲ್ಲೆಡೆ ಪೂಜೆ, ಹೋಮಗಳು ನಡೆಯುತ್ತಿವೆ. ಇನ್ನು ವಿಶೇಷವೆಂದರೆ ಜಾತಿ, ಧರ್ಮವನ್ನು ಮೀರಿ ಭಾರತ ತಂಡದ ಗೆಲುವಿಗಾಗಿ ಎಲ್ಲಾರು ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಹೌದು ಬೆಂಗಳೂರಿನ ಶಿವಾಜಿನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ವಿಡಿದು ಭಾವೈಕ್ಯತೆಯ ಹೂವಿನ ಅರ್ಚನೆ ಮಾಡಿದ್ದಾರೆ.
ವಲ್ಡ್ ಕಪ್ ಮ್ಯಾಚ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲ್ಲಿ ಎಂದು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು, ಮಹಿಳೆಯರು, ಕ್ರೀಡಾ ಅಭಿಮಾನಿಗಳು ಸೇರಿದಂತೆ ಎಲ್ಲಾ ಧರ್ಮದ ಅಭಿಮಾನಿಗಳು ವಿಘ್ನ ವಿನಾಯಕನಿಗೆ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಸ್ಲಿಂ ಮಹಿಳೆಯರು ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿದ್ದಾರೆ. ದೇವರ ಮುಂದೆ ಕ್ರಿಕೆಟ್ ಬ್ಯಾಟ್ ಬಾಲ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ವಿನಾಯಕನಿಗೆ ಸಿಹಿ ನೈವೇದ್ಯ ವಿಟ್ಟು, ಕುಂಬಳಕಾಯಿ, ತೆಂಗಿನಕಾಯಿ ಹೊಡೆದು ಆಟಗಾರರಿಗೆ ಶಕ್ತಿ ನೀಡಲಿ ಎಂದು ಕೋರಿದ್ದಾರೆ.
ಇನ್ನು ಇದರ ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೂಡ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ರು. ಭಾರತ ತಂಡದ ಆಟಗಾರರ ಭಾವಚಿತ್ರಕ್ಕೆ ಕುಂಬಳಕಾಯಿ, ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಭಕ್ತರಿಗೆ ಸಿಹಿ ಹಂಚಿ ಭಾರತ ತಂಡವು ಇಂದು ಮ್ಯಾಚ್ ಗೆಲ್ಲಬೇಕೆಂದು ಶುಭ ಹಾರೈಸಿದರು.
ಇದನ್ನೂ ಓದಿ: IND vs AUS Final: ಮಂಗಳೂರು ಕಲಾವಿದನ ಕೈಯಲ್ಲಿ ಮೂಡಿದ ಚಿನ್ನದ ವಿಶ್ವಕಪ್
ಮತ್ತೊಂದೆಡೆ ಚಿಕ್ಕಮಗಳೂರು ನಗರದ ಅರಸು ಕಲ್ಯಾಣ ಮಂಟಪದಲ್ಲಿ ನವ ಜೋಡಿ ಇಂಡೋ ಆಸೀಸ್ ಹೈ ವೋಲ್ಟೇಜ್ ವರ್ಲ್ಡ್ ಕಪ್ ಮ್ಯಾಚ್ಗೆ ಶುಭ ಹಾರೈಸಿದ್ದಾರೆ. ಸಂತೋಷ , ಅರ್ಪಿತಾ ಮದುವೆ ಮಂಟಪದಲ್ಲಿ ನಿಂತು ಟೀಮ್ ಇಂಡಿಯಾಗೆ ಶುಭಕೋರಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ