ಬೆಂಗಳೂರು, ಅಕ್ಟೋಬರ್ 30: ವಿಮಾನಗಳಲ್ಲಿನ ಕೆಲ ಕಾರ್ಯಚರಣೆಗಳಿಂದ ಕೊನೆಯ ಕ್ಷಣದಲ್ಲಿ ಸ್ಪೈಸ್ ಜೆಟ್ (SpiceJet) ತನ್ನ ಎರಡೂ ವಿಮಾನಗಳನ್ನು ಭಾನುವಾರ ರದ್ದುಪಡಿಸಿದರ ಪರಿಣಾಮ ಬೆಂಗಳೂರು ಮತ್ತು ಪಾಟ್ನಾಗೆ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ಸಂಜೆ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವಂತಹ ಘಟನೆ ನಡೆದಿದೆ. ಬಳಿಕ ಪ್ರಯಾಣಕ್ಕೆ ಅನುಕೂಲವಾಗುವಂತೆ ಸೋಮವಾರ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗಿದೆ.
ವಿಮಾನಗಳಲ್ಲಿನ ಕೆಲ ಕಾರ್ಯಚರಣೆ ಕಾರಣಗಳಿಂದಾಗಿ ಸ್ಪೈಸ್ ಜೆಟ್ ಎಸ್‌ಜಿ 531/532 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರ ಬೆಳಿಗ್ಗೆ ಹೆಚ್ಚುವರಿ ವಾಣಿಜ್ಯ ವಿಮಾನವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಪಾಟ್ನಾಗೆ ಎಸ್‌ಜಿ 531 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 5.20 ಕ್ಕೆ ಹೊರಡಬೇಕಿತ್ತು. ಆದರೆ ಕೆಲ ಕಾರಣಗಳಿಂದ ಕೊನೆ ಕ್ಷಣದಲ್ಲಿ ಅಂದರೆ ರಾತ್ರಿ 8 ಗಂಟೆಗೆ ರದ್ದುಗೊಳಿಸಿರುವುದಾಗಿ ಪ್ರಯಾಣಿಕರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: ಬೀದರ್-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ
ಸ್ಪೈಸ್ ಜೆಟ್ ವಿಮಾನ ರದ್ಧಾಗಿದ್ದರಿಂದ ನೂರಾರು ಪ್ರಯಾಣಿಕರು ಸಿಲುಕಿಕೊಂಡಿದ್ದರು, ಬೆಂಗಳೂರಿಗೆ ಭೇಟಿ ನೀಡಿದ್ದ ಜರ್ಮನಿಯ ಐಟಿ ಉದ್ಯೋಗಿ ಶಿವಂ ವರ್ಮಾ ಕೂಡ ಒಬ್ಬರಾಗಿದ್ದು, ನಾನು ಪಾಟ್ನಾದಲ್ಲಿರುವ ನನ್ನ ಹೆತ್ತವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ನಿಜವಾದ ಸಮಸ್ಯೆಯೆಂದರೆ ವಿಮಾನಯಾನ ಸಂಸ್ಥೆಯ ಅಸಹಾಯಕ ಸಿಬ್ಬಂದಿಗಳು, ಅವರು ಯಾವುದೇ ನಿಖರವಾದ ಮಾಹಿತಿಯನ್ನು ನೀಡುತ್ತಿಲ್ಲ.
ವಿಮಾನವು ಸ್ವಲ್ಪ ಸಮಯ ವಿಳಂಬವಾಗಲಿದೆ ಎಂದು ನಮಗೆ ಆರಂಭದಲ್ಲಿ ತಿಳಿಸಿದ್ದರು. ರಾತ್ರಿ 10 ಗಂಟೆಗೆ ವಿಮಾನ ಹಾರಾಟ ನಡೆಸಬಹುದೆಂದು ಮಾಹಿತಿ ನೀಡಲಾಗಿತ್ತು. ಅಂತಿಮವಾಗಿ, ರಾತ್ರಿ 8 ಗಂಟೆಗೆ, ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ದರ: ಒಂದೇ ವಾರದಲ್ಲಿ ಡಬ್ಬಲ್ ರೇಟ್, ಮುಂದಿನ ವಾರ 100 ರೂ. ಗಡಿ ದಾಟುವ ಸಾಧ್ಯತೆ
ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಲು ಅಥವಾ ಪೂರ್ಣ ಮರುಪಾವತಿಗೆ ಸ್ಪೈಸ್ ಜೆಟ್ ಸಂಸ್ಥೆ ಹೇಳಿದೆ. ಆದರೆ ಯಾರೂ ಇದಕ್ಕೆ ಆಸಕ್ತಿ ತೋರಿಸಿಲ್ಲ. ಪ್ರಯಾಣಿಕರಿಗೆ ಲಘು ಉಪಹಾರ ನೀಡಲಾಯಿತು. ಬಳಿಕ ವಿಮಾನ ನಿಲ್ದಾಣದಿಂದ 40 ನಿಮಿಷಗಳ ದೂರದಲ್ಲಿರುವ ಹೋಟೆಲ್‌ಗಳಿಗೆ ಕಳುಹಿಸಿಕೊಡಲಾಗಿದೆ.
ನಾನು ನನ್ನ ಲಗೇಜ್ಗಳನ್ನು ತೆಗೆದುಕೊಂಡು ನಾಲ್ಕು ಬೇರೆ ಬೇರೆ ಹೋಟೆಲ್‌ಗಳಿಗೆ ಹೋದೆ. ಈಗ ಸೋಮವಾರ ಬೆಳಗ್ಗೆ 8.30ಕ್ಕೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ರಿಷಿ ಮತ್ತು ಆದ್ಯ ದಂಪತಿಗಳು ಬಿಹಾರದ ಭಾಗಲ್ಪುರದಿಂದ ರಜೆ ಮುಗಿಸಿ ಪಾಟ್ನಾದಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಕಂಗಾಲಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.