AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಕ್ಕೇರಿದ ಈರುಳ್ಳಿ ದರ: ಒಂದೇ ವಾರದಲ್ಲಿ ಡಬ್ಬಲ್ ರೇಟ್, ಮುಂದಿನ ವಾರ 100 ರೂ. ಗಡಿ ದಾಟುವ ಸಾಧ್ಯತೆ

ಕೆಲ ದಿನಗಳಿಂದ ಈರುಳ್ಳಿ ದರ ಏರಿಕೆಯಾಗಿ ಜನರಿಗೆ ಕಣ್ಣೀರು ತರಿಸುತ್ತಿದೆ. ಕೆಲವು ವ್ಯಾಪಾರಿಗಳು ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಾರ 50 ರೂ.ಗೆ ಸಿಗುತ್ತಿದ್ದ ಈರುಳ್ಳಿ ಭಾನುವಾರ ಕೆಜಿಗೆ 70 ರೂ. ಆಗಿದೆ. ಅದೇ ಚಿಲ್ಲರೆ ಅಂಗಡಿಗಳಲ್ಲಿ ರೂ 70 ಮತ್ತು ರೂ 39 ಕೆಜಿ ಈರುಳ್ಳಿ ಮಾರಲಾಗುತ್ತಿದೆ.

ಗಗನಕ್ಕೇರಿದ ಈರುಳ್ಳಿ ದರ: ಒಂದೇ ವಾರದಲ್ಲಿ ಡಬ್ಬಲ್ ರೇಟ್, ಮುಂದಿನ ವಾರ 100 ರೂ. ಗಡಿ ದಾಟುವ ಸಾಧ್ಯತೆ
ಈರುಳ್ಳಿ
ಆಯೇಷಾ ಬಾನು
|

Updated on: Oct 30, 2023 | 8:12 AM

Share

ಹುಬ್ಬಳ್ಳಿ/ಬೆಂಗಳೂರು, ಅ.30: ಕಳೆದೊಂದು ವಾರದಿಂದ ರಾಜ್ಯಾದ್ಯಂತ ಈರುಳ್ಳಿ (Onion) ಬೆಲೆ ದುಪ್ಪಟ್ಟಾಗಿದೆ. ಕೆಲ ತಿಂಗಳ ಹಿಂದೆ ಟೊಮೇಟೊ (Tomato) ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅದೇ ರೀತಿ ಈಗ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತಿದೆ. ಕೆಲವು ವ್ಯಾಪಾರಿಗಳು ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಈರುಳ್ಳಿ ಬೆಲೆ ಹೆಚ್ಚಳಕ್ಕೆ ಉತ್ತರ ಕರ್ನಾಟಕ ಪ್ರದೇಶದಲ್ಲಿನ ತೀವ್ರ ಬರ-ತರಹದ ಪರಿಸ್ಥಿತಿಗಳು ಕಾರಣವೆಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಕಳೆದ ವಾರ 50 ರೂ.ಗೆ ಸಿಗುತ್ತಿದ್ದ ಈರುಳ್ಳಿ ಭಾನುವಾರ ಕೆಜಿಗೆ 70 ರೂ. ಆಗಿದೆ. ಅದೇ ಚಿಲ್ಲರೆ ಅಂಗಡಿಗಳಲ್ಲಿ ರೂ 70 ಮತ್ತು ರೂ 39 ಕೆಜಿ ಈರುಳ್ಳಿ ಮಾರಲಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ 58 ರೂಗೆ ಕೆಜಿ ಈರುಳ್ಳಿ ಸಿಗುತ್ತಿತ್ತು. ಈಗ 77 ರೂ. ಆಗಿದೆ. ಈರುಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಇನ್ನೂ ಕೆಲವು ದಿನಗಳ ಕಾಲ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹಾಪ್‌ಕಾಮ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಖಾಸಗಿ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: Onion Shocker: ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಕ್ರಮ; ಕನಿಷ್ಠ ರಫ್ತು ದರ ನಿಗದಿ

ಮಲ್ಲೇಶ್ವರಂನ ವೆಂಕಟೇಶ್ವರ ತಾಜಾ ತರಕಾರಿ ಮತ್ತು ಸಗಟು ಮಾರುಕಟ್ಟೆಯ ಮಾಲೀಕ ವೆಂಟ್ರಿ ಈ ಬಗ್ಗೆ ಮಾತನಾಡಿದ್ದು, “ನಮ್ಮಲ್ಲಿ ಟೊಮೆಟೊಗೆ ಇದ್ದಂತಹ ಪರಿಸ್ಥಿತಿ ಈರುಳ್ಳಿಯಲ್ಲೂ ಇದೆ. ಈ ವಾರದ ನಂತರ, ಈರುಳ್ಳಿ ಬೆಲೆ ರೂ 100 ದಾಟಬಹುದು, ”ಎಂದು ಅವರು ಹೇಳಿದರು. ಇನ್ನು ಎರಡು ತಿಂಗಳು ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲ. ಹಾಗೂ ಈರುಳ್ಳಿಯ ದಾಸ್ತಾನು ಕಡಿಮೆ ಇದೆ ಎಂದು ಯಶವಂತಪುರದ ಶಿವಾಜಿ ಟ್ರೇಡರ್ಸ್ ಮಾಲೀಕ ಮಂಜುನಾಥ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ, ಸ್ಥಳೀಯ ರೈತರ ಪೂರೈಕೆಯ ಕೊರತೆಯ ನಡುವೆ, ಮಾರುಕಟ್ಟೆಗೆ ಮಹಾರಾಷ್ಟ್ರ ಮತ್ತು ನೆರೆಯ ವಿಜಯಪುರ ಜಿಲ್ಲೆಯಿಂದ ಈರುಳ್ಳಿಯನ್ನು ತರಲಾಗುತ್ತಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 2,500-3,000 ರೂ.ನಿಂದ 6,000-6,600 ರೂ. ಇದೆ. ಅದೇ ರೀತಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೇವಲ ಒಂದು ವಾರದಲ್ಲಿ ಕೆಜಿಗೆ 30-35 ರೂ.ನಿಂದ 75-80 ರೂ.ಗೆ ಏರಿಕೆ ಆಗಿದೆ. ಈರುಳ್ಳಿ ಮತ್ತು ಆಲೂಗೆಡ್ಡೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ಮಾತನಾಡಿ, ನಾಲ್ಕು ದಿನಗಳಲ್ಲಿ ಈರುಳ್ಳಿ ಬೆಲೆ 40 ರೂ.ನಿಂದ 60 ರೂ.ಗೆ ಏರಿದೆ. “ಸರ್ಕಾರವು ಶನಿವಾರ ಡಿಸೆಂಬರ್ 31 ರವರೆಗೆ ಈರುಳ್ಳಿಗೆ ಕನಿಷ್ಠ ರಫ್ತು ದರವನ್ನು ವಿಧಿಸಿದೆ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?