ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುವುದಾಗಿ ನೆಲಮಂಗಲ ಶಾಸಕ ಶ್ರೀನಿವಾಸ್​ಗೆ ವಂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 03, 2024 | 3:48 PM

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಮ್​​ಎಸ್​​ ಧೋನಿ (MS Dhoni) ಅವರ ಮ್ಯಾನೇಜರ್ ಸ್ಚಾಮಿನಾಥನ್ ಅವರಿಗೆ ತಿರುಪತಿಯಲ್ಲಿ (Tirupati) ವಿಶೇಷ ದರ್ಶನ ಮಾಡಿಸುತ್ತೇನೆ ಎಂದು ಹೇಳಿ ಬರೊಬ್ಬರಿ 6.5 ಲಕ್ಷ ರೂ. ಪಡೆದು ವಂಚಿಸದ ಪ್ರಕರಣ ಮಾಸುವ ಮುನ್ನವೇ ನೆಲಮಂಗಲ ಶಾಸಕ ಶ್ರೀನಿವಾಸ್​ಗೆ 8 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.

ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುವುದಾಗಿ ನೆಲಮಂಗಲ ಶಾಸಕ ಶ್ರೀನಿವಾಸ್​ಗೆ ವಂಚನೆ
ಆರೋಪಿ ಮಾರುತಿ, ಶಾಸಕ ಎನ್​ ಶ್ರೀನಿವಾಸ್​
Follow us on

ಬೆಂಗಳೂರು, ಫೆ.03: ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​ ಧೋನಿ ಮ್ಯಾನೇಜರ್‌ಗೆ 6.5 ಲಕ್ಷ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಮತ್ತೊಬ್ಬ ಎಂಎಲ್​ಎಗೂ ಟಿಟಿಡಿ(TTD) ಹೆಸರಲ್ಲಿ ವಂಚನೆ ಮಾಡಿದ ಘಟನೆ ನಡೆದಿದೆ. ನೆಲಮಂಗಲ(Nelamangala) ಶಾಸಕ ಶ್ರೀನಿವಾಸ್​ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆಪ್ತ ಸಹಾಯಕ ಆಗಿದ್ದ ಮಾರುತಿ ಎಂಬಾತನಿಂದ 8 ಲಕ್ಷ ರೂಪಾಯಿ ವಂಚಿಸಲಾಗಿದೆ.

ಆನ್ಲೈನ್ ಮುಖಾಂತರವಾಗಿ ಹಣ ಪಡೆದು ವಂಚನೆ

ಕರ್ನಾಟಕ ರಾಜ್ಯದಿಂದ ಟಿಟಿಡಿಯಲ್ಲಿ ಸದಸ್ಯರು ಆಗಿರುವ ಎಸ್.ಆರ್.ವಿಶ್ವನಾಥ್, ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ
ಹೋಗುವವರಿಗೆ ಪಾಸ್ ಕೊಡುವ ನಿಟ್ಟಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಾರುತಿ ಎಂಬಾತ, ನೆಲಮಂಗಲ ಶಾಸಕ ಶ್ರೀನಿವಾಸ್ ಹಾಗೂ ಆಪ್ತ ಮುಖಂಡರಿಗೆ ವಿಶೇಷ ದರ್ಶನ ಮಾಡಿಸುತ್ತೇನೆ. ಜೊತೆಗೆ ರೂಮ್ ವ್ಯವಸ್ಥೆ ಇರುತ್ತದೆ ಎಂದು ನಂಬಿಸಿ ಆನ್ಲೈನ್ ಮುಖಾಂತರವಾಗಿ ಹಣ ಪಡೆದಿದ್ದಾನೆ. ಇತ್ತ ಪಾಸ್ ಇಲ್ಲ, ದರ್ಶನವೂ ಇಲ್ಲದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಜನವರಿ 14ರಂದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ:ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಧೋನಿ ಮ್ಯಾನೇಜರ್‌ಗೆ ವಂಚನೆ

ಕೆಲಸದಿಂದ ತಗೆದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್

ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆತನನ್ನು ಕೆಲಸದಿಂದ ತಗೆದಿದ್ದಾರೆ. ಇತನ ಮೇಲೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವಾರು ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ IPC 1860 ರೀತ್ಯಾ 406, 417, 419, 420 ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಹಿನ್ನಲೆ ಆರೋಪಿ ಮಾರುತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ