ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ 50 ರೂಪಾಯಿ ಸಂಗ್ರಹ ವಿಚಾರ: ಸಮರ್ಥಿಸಿಕೊಂಡ ಶಿಕ್ಷಣ ಇಲಾಖೆ
2023ರ ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಸರ್ಕಾರ ಆದೇಶಿಸಿದ ಪ್ರಕಾರವಾಗಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳಿಂದ 50 ರೂಪಾಯಿ ಸಂಗ್ರಹ ಮಾಡಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಪರೀಕ್ಷೆ ನಡೆಸಲು ಖರ್ಚು ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಯಿಂದ 50 ರೂ. ಸಂಗ್ರಹ ಮಾಡಲಾಗುತ್ತೆ ಎಂದು ಸ್ಪಷ್ಟಿಕರಣ ನೀಡಿದೆ.
ಬೆಂಗಳೂರು, ಫೆಬ್ರವರಿ 3: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ (SSLC Preparatory Exam 2024 Date Sheet) ವಿದ್ಯಾರ್ಥಿಗಳಿಂದ 50 ರೂಪಾಯಿ ಸಂಗ್ರಹ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ವಿದ್ಯಾರ್ಥಿಗಳಿಂದ ಹಣ ಸಂಗ್ರಹದ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. 2023ರ ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಸರ್ಕಾರ ಆದೇಶಿಸಿದೆ ಎಂದು ಪರೋಕ್ಷವಾಗಿ ಬಿಜೆಪಿ ಅವಧಿಯಲ್ಲಿ ಆದೇಶವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ.
ಕಳೆದ 4 ವರ್ಷಗಳಿಂದಲೂ ಈ ಶುಲ್ಕ ಇದೆ. ಪರೀಕ್ಷೆ ನಡೆಸಲು ಖರ್ಚು ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಯಿಂದ 50 ರೂ. ಸಂಗ್ರಹ ಮಾಡಲಾಗುತ್ತೆ ಎಂದು ಸ್ಪಷ್ಟಿಕರಣ ನೀಡಿದೆ.
ಬಿಜೆಪಿ ಅವರೇ ಮಾಡಿರುವ ಕಾನೂನು ಇದು ನಾವಲ್ಲ: ಸಚಿವ ಮಧು ಬಂಗಾರಪ್ಪ
ಈ ವಿಚಾರವಾಗಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, 50 ರೂಪಾಯಿ ತೆಗೆದುಕೊಳ್ಳುವ ನಿಯಮ ಮಾಡಿದ್ದು ಬಿಜೆಪಿಯವರೇ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ್ದು. ಹೆಚ್.ಡಿ.ಕುಮಾರಸ್ವಾಮಿ ಮೊದಲು ಬಿಜೆಪಿಯವರನ್ನು ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: SSLC Preparatory Exam: ಎಸ್ಎಸ್ಎಲ್ಸಿ ಮಕ್ಕಳ ಕಿಸೆಗೂ ಕೈ ಹಾಕಿದೆ ಗತಿಗೆಟ್ಟ ಸರ್ಕಾರ: ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
2 ಸಾವಿರ ರೂ. ಜೆಡಿಎಸ್, ಬಿಜೆಪಿಯವರೇ ಪಡೆಯುತ್ತಿದ್ದಾರೆ ಅಲ್ವಾ. ಬಿಜೆಪಿ, ಜೆಡಿಎಸ್ನವರಿಗೆ ಜಾಸ್ತಿ ಗ್ಯಾರಂಟಿ ಹೋಗ್ತಿರೋದು. ಅದರ ಬಗ್ಗೆ ಚರ್ಚೆ ಮಾಡಲು ಹೆಚ್.ಡಿ.ಕುಮಾರಸ್ವಾಮಿಗೆ ಕೇಳುತ್ತೇನೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದಕ್ಕೆ ದೇವೇಗೌಡ ಖಂಡನೆ; ಸಿಟಿ ರವಿ ಹೇಳಿದ್ದಿಷ್ಟು
ಬಿಜೆಪಿಯವರು ಮಾಡಿದ ಕಾನೂನು 50 ರೂ ತಗೊಳ್ಳುವುದು. ಈ ಕಾನೂನು ತಂದಿದ್ದು ನಾವಲ್ಲ. ತೆರಿಗೆ ಯಾಕೇ ಮೋದಿಯವರು ಕಲೆಕ್ಟ್ ಮಾಡುತ್ತಾರೆ. ಅವರ ಖಜಾನೆ ಖಾಲಿ ಆಗಿದೆಯಂತಾ? ಅದರ ಬಗ್ಗೆ ಕುಮಾರಸ್ವಾಮಿ ಅವರು ಕೇಳಲಿ. ಅವರು ಸಹ ಮುಖ್ಯಮಂತ್ರಿ ಆದವರು 50 ರೂ ಬಗ್ಗೆ ಲೆಕ್ಕಾ ಮಾಡುತ್ತಿದ್ದಾರೆ. ಬಿಜೆಪಿ ಅವರೇ ಮಾಡಿರುವ ಕಾನೂನು ಇದು. ನಾವೇನು ಹೊಸದಾಗಿ ಮಾಡಿಲ್ಲ ಎಂದಿದ್ದಾರೆ.
ಅರ್ಹತೆ ಇದ್ದವರಿಗೆ ಕೊಡಲಿ
ಬಿಜೆಪಿ ಹಿರಿಯ ನಾಯಕ ಅಡ್ವಾಣಿಗೆ ‘ಭಾರತ ರತ್ನ’ ಘೋಷಣೆ ಬಗ್ಗೆ ಮಾತನಾಡಿದ ಅವರು, ರಾಜಕಾರಣಕ್ಕಾಗಿ ಅಡ್ವಾಣಿಗೆ ಭಾರತ ರತ್ನ ಕೊಟ್ಟಿದ್ದರೆ ತಪ್ಪಾಗುತ್ತೆ. ಅರ್ಹತೆ ಇದ್ದವರಿಗೆ ಕೊಡಲಿ, ನಾನು ಜಾಸ್ತಿ ಮಾತನಾಡಲ್ಲ. ಸಿದ್ಧಗಂಗಾ ಮಠದ ಡಾ.ಶಿವಕುಮಾರಶ್ರೀಗೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Sat, 3 February 24