ಕಿಯೋನಿಕ್ಸ್​ನಲ್ಲಿ ಹಣಕಾಸು ವ್ಯವಹಾರಗಳಲ್ಲಿ ವ್ಯತ್ಯಾಸ: ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ

ಕರ್ನಾಟಕ ರಾಜ್ಯ ವಿದ್ಮುನ್ಮಾನ ಅಭಿವೃದ್ಧಿ ನಿಗಮದಲ್ಲಿ (ಕಿಯೋನಿಕ್ಸ್​) 2018-19ರಿಂದ 2022-23ರವರೆಗಿನ ಹಣಕಾಸು ವ್ಯವಹಾರಗಳ ವ್ಯತ್ಯಾಸ ಹಿನ್ನೆಲೆ ನಿವೃತ್ತ IAS ಅಧಿಕಾರಿ ಎಸ್.ಡಿ.ಮೀನಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಆಕ್ಷೇಪದ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಕಿಯೋನಿಕ್ಸ್​ನಲ್ಲಿ ಹಣಕಾಸು ವ್ಯವಹಾರಗಳಲ್ಲಿ ವ್ಯತ್ಯಾಸ: ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ
vidhana soudha
Follow us
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ

Updated on:Feb 03, 2024 | 10:59 PM

ಬೆಂಗಳೂರು, ಫೆಬ್ರವರಿ 3: ಕರ್ನಾಟಕ ರಾಜ್ಯ ವಿದ್ಮುನ್ಮಾನ ಅಭಿವೃದ್ಧಿ ನಿಗಮದಲ್ಲಿ (Keonics​) 2018-19ರಿಂದ 2022-23ರವರೆಗಿನ ಹಣಕಾಸು ವ್ಯವಹಾರಗಳ ವ್ಯತ್ಯಾಸ ಹಿನ್ನೆಲೆ ನಿವೃತ್ತ IAS ಅಧಿಕಾರಿ ಎಸ್.ಡಿ.ಮೀನಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಕಿಯೋನಿಕ್ಸ್ ಹಣಕಾಸು ನಿರ್ವಹಣೆಯಲ್ಲಿ ಲೋಪದೋಷ ಬಗ್ಗೆ ಪ್ರಧಾನ ಮಹಾ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆಕ್ಷೇಪದ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

8 ತಿಂಗಳಿನಿಂದ ಆಗುತ್ತಿದೆ ಕಿಯೋನಿಕ್ಸ್ ಗುತ್ತಿಗೆದಾರರಿಗೆ ಸಮಸ್ಯೆ

ಕಳೆದ ಎಂಟು ತಿಂಗಳಿನಿಂದ ನಮಗೆ ಸಮಸ್ಯೆ ಇದ್ದು, ಇವತ್ತು ಮಿನಿಸ್ಟರ್ ಒಂದು ಮಾತು ಹೇಳಿದ್ರು, ‘ನಾವು ಯಾವುದೇ ಕಾರಣಕ್ಕೂ ರಾಜಕಾರಣಿಗಳು ಅಲ್ಲ, ಅವರಿಗೆ ತಕ್ಕನಾಗೇ ವಿರೋಧ ಪಕ್ಷದ ಮುಖಂಡರು ಮಾತನಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಳಂಬ; ಸಚಿವ ಪ್ರಿಯಾಂಕ್ ಖರ್ಗೆ ಆಸ್ತಿ ವಿಚಾರ ಕೆದಕಿದ ಕಿಯೋನಿಕ್ಸ್ ಸಂಘದ ಅಧ್ಯಕ್ಷ ವಸಂತ್ ಬಂಗೇರ

ಇದರಲ್ಲಿ ನಾವು ರಾಜಕೀಯ ಬೇರಿಸಿಲ್ಲ, ನಾವು ಯಾವುದೇ ಸರ್ಕಾರ ಬಂದರೂ ಸರ್ಕಾರದ ಅಂಗಾಂಗಳು ನಮ್ಮನ್ನ ಆಡಿಸ್ತಾ ಇಲ್ಲ. ನಮ್ಮ ನೋವು ಹೇಳಿಕೊಳ್ಳುತ್ತಾ ಇದ್ದೀವಿ. ನಾವು ನಿಮ್ಮ ಹತ್ರ ಬಂದಾಗ ಬಿಲ್ ಕ್ಲಿಯರ್ ಮಾಡಿ ಎಂದು ಹೇಳಿದ್ದೀರಿ ಎಂದರು.

ನಾವು ಕಿಯೋನಿಕ್ಸ್ ಸಂಸ್ಥೆಯಲ್ಲಿ ಅನ್ನ ತಿಂದಿದ್ದೇವೆ. ನೀವು ಬಂದಾಗ ಅವರದ್ದು ಹುಡುಕುವುದು, ಅವರು ಬಂದಾಗ ನಿಮ್ಮದು ಹುಡುಕುವುದು. ಉತ್ತರ ಕರ್ನಾಟಕದ ‌ತಾಂಡ ಅಭಿವೃದ್ಧಿ ನಿಗಮದಿಂದ ಶುದ್ಧ ನೀರು ಕುಡಿಯುವ ಮಿಷನ್​ನ್ನು 2019 ರಲ್ಲಿ ಹಾಕಿ, 5 ಕೋಟಿ 50 ಲಕ್ಷ ಹಣವನ್ನ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಕಿಯೋನಿಕ್ಸ್ ಎಂಡಿ 32 ಕೋಟಿ ರೂ. ಲಂಚ ಆರೋಪ: ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದ ಸಚಿವ ಪ್ರಿಯಾಂಕ್​ ಖರ್ಗೆ

ಇದರಲ್ಲಿ ಬರೋಬ್ಬರಿ ಒಂದು ಲಕ್ಷ ಹಣ ವ್ಯತ್ಯಾಸ ಇದೆ. ನಮ್ಮನ್ನ ಕಳ್ಳರಂತೆ ಬಿಂಬಿಸಲಾಗುತ್ತಿದೆ. ಪ್ರತಿ ವರ್ಷ ಅಡಿಟ್ ಆಗುತ್ತೆ. ಯಾವುದೇ ಇಲಾಖೆಯಲ್ಲಿ ಹೋದರೂ, ನ್ಯೂನತೆಗಳನ್ನ ಬರೆದು ಬರುತ್ತಾರೆ. ಯಾರೋ ನಾಲ್ಕು ಜನ ಕಳ್ಳರು ಮಾಡಿರಬಹುದು, ಅವರನ್ನ ಬ್ಲಾಕ್ ಲಿಸ್ಟ್​ಗೆ ಹಾಕಿ, ಅವರ ಮೇಲೆ ನೀವು ಕ್ರಮ‌ಕೈಗೊಳ್ಳಿ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:43 pm, Sat, 3 February 24