ಕಿಯೋನಿಕ್ಸ್ ಎಂಡಿ 32 ಕೋಟಿ ರೂ. ಲಂಚ ಆರೋಪ: ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದ ಸಚಿವ ಪ್ರಿಯಾಂಕ್​ ಖರ್ಗೆ

ಕಿಯೋನಿಕ್ಸ್​​ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಹಗರಣ ನಡದಿದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದೆನೆ. ನನಗೂ ಮೇಲ್ನೋಟಕ್ಕೆ 200-250 ಕೋಟಿ ರೂ. ಹಗರಣ ನಡೆದಿದೆ ಅಂತ ಕಂಡು ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಿಯೋನಿಕ್ಸ್ ಎಂಡಿ 32 ಕೋಟಿ ರೂ. ಲಂಚ ಆರೋಪ: ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದ ಸಚಿವ ಪ್ರಿಯಾಂಕ್​ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2023 | 5:35 PM

ಕಲಬುರಗಿ, ನವೆಂಬರ್​​ 07: ಕಿಯೋನಿಕ್ಸ್​​ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಹಗರಣ ನಡದಿದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದೆನೆ. ನನಗೂ ಮೇಲ್ನೋಟಕ್ಕೆ 200-250 ಕೋಟಿ ರೂ. ಹಗರಣ ನಡೆದಿದೆ ಅಂತ ಕಂಡು ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ಚಿತ್ತಾಪುರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಕಿಯೋನಿಕ್ಸ್ ಎಂಡಿ ಸಂಗಪ್ಪ ಲಂಚ 32 ಕೋಟಿ ರೂ. ಲಂಚ ಕೇಳಿರುವ ಬಗ್ಗೆ ಹಚ್ಚಿನ ಮಾಹಿತಿ ನನಗಿಲ್ಲ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.

ಆಡಿಟರ್ ಜನರಲ್ ರಿಪೋರ್ಟ್ ಅಲ್ಲೂ ಸಹ ಇದೆ.‌ ಮೂರನೇ ವ್ಯಕ್ತಿಯಿಂದ ತನಿಖೆ ಪರಿಶೀಲನೆ ಮಾಡದೆ ಹಣ ಬಿಡುಗಡೆ ಮಾಡಬಾರದು ಅಂತ ಕಾನೂನು ಇದೆ. ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ. ಕಾಮಗಾರಿ ಆದರೆ ಪರಿಶೀಲನೆ ಮಾಡಿ ದುಡ್ಡು ಕೊಡಲಾಗುತ್ತೆ‌. ಹಗರಣದ ಬಗ್ಗೆ ಏನಾದರೂ ಸಾಕ್ಷಿ ಇದ್ದರೆ ಕೊಡಿ ಎಂದರು.

ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಿಯೋನಿಕ್ಸ್ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಬಿಜೆಪಿ ಆಗ್ರಹ ವಿಚಾರ‌‌ವಾಗಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿಯರೇ ಆಡಳಿತ ನಡೆಸಿದ್ದಾರೆ. ಟೈಮ್ ಕೊಡಿ ಹಿಂದೆ ಮೂರು ವರ್ಷದಲ್ಲಿ ಬಿಜೆಪಿಯರು ಏನ್ ಮಾಡಿದ್ದಾರೆ ಅಂತ ನಾನೇ ಬಿಚ್ಚಿಡುತ್ತೇನೆ. ಅವರ ಕಾಲದಲ್ಲಿ‌ ಹಗರಣ ಆಗಿದ್ದು ನಾವು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸ ಮಾಡಿಸಿಲ್ಲ. ಬಿಜೆಪಿಯವರು ಸ್ವಲ್ಪ ಮೈಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತಾಡಲಿ ಎಂದು ಕಿಡಿಕಾರಿದ್ದಾರೆ.

ಇವರ ಸರ್ಕಾರನೇ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 5 ವರ್ಷದ ಎರಡು ಆಡಳಿತದಲ್ಲಿ ಬಿಜೆಪಿ ಐವರು ಸಿಎಂಗಳನ್ನು ನೀಡಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಇವರು ಸ್ಥಿರತೆ ಬಗ್ಗೆ ಮಾತಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆರ್​ಡಿ ಪಾಟೀಲ್ ಬಂಧನವಾದರೆ ಪ್ರಿಯಾಂಕ್ ಖರ್ಗೆ ಹೆಸರು ಹೊರಬರುವ ಆತಂಕ ಎಟಿಎಂ ಸರ್ಕಾರಕ್ಕೆ: ಬಿಜೆಪಿ ವಾಗ್ದಾಳಿ

ಇವರ ಸರ್ಕಾರನೇ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಸರ್ಕಾರ ಉಳಿಸಿಕೊಳ್ಳಲು ಮೋದಿ, ಅಮಿತ್ ಷಾ ಗಲ್ಲಿ ಗಲ್ಲಿ ತಿರುಗಾಡಿದರು. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ಆರೋಪ‌ ಮಾಡ್ತಾರೆ. 40% ಕಮಿಷನ್ ಸರ್ಕಾರ ಅಂತಾ ಬಿರುದು ಸಿಕ್ಕಿದ್ದು ಯಾರ ಸರ್ಕಾರಕ್ಕೆ? ನಮಗೆ 135 ಸೀಟ್ ಕೊಟ್ಟು ಬಿಜೆಪಿಗೆ ಜನ ಕಪಾಳಮೋಕ್ಷ ಮಾಡಿದ್ದಾರೆ. ಮೋದಿ ಮೊದಲು ಕರ್ನಾಟಕದ ರಾಜಕೀಯ ಇತಿಹಾಸ ತಿಳಿದುಕೊಳ್ಳಲಿ ಎಂದು ವಾಗ್ದಾಳಿ ಮಾಡಿದ್ದಾರೆ.

ಆರ್.ಡಿ ಪಾಟೀಲ್​ಗೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ: ಬಿಜೆಪಿ ಆರೋಪ

ಕೆಇಎ ಪರೀಕ್ಷೆ ಕಿಂಗ್​ಪಿನ್​ ಆರ್.ಡಿ ಪಾಟೀಲ್​ಗೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲವಿದೆ ಅನ್ನುವ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾವು ಬಂದು ಆರು ತಿಂಗಳ ಆಗಿದೆ. ಹಿಂದೆ ಅವರೇ ಅಧಿಕಾರದಲ್ಲಿದ್ದರು. ನನಗೆ ಅವರ ಜೊತೆ ಸಂಬಂಧ ಇದೆ ಅಂತ ಇದ್ದರೆ ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು. ಅವರು ಅಧಿಕಾರದಲ್ಲಿದ್ದಾಗ ಯಾಕೆ ಒದ್ದು ಒಳಗೆ ಹಾಕಿಲ್ಲ. ಪಿಎಸ್ಐ ಅಕ್ರಮದ ಅಂತಿಮ ಪಟ್ಟಿ ಬಿಡುಗಡೆ ಆದರೂ ಆರು ಬಾರಿ ಹಗರಣ ನಡೆದೆ ಇಲ್ಲ ಅಂತ ಹೇಳಿದ್ದರು. ಆದರೆ ಕೊನೆಗೆ ಅವರೇ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಅಂತ ಒಪ್ಪಿಕೊಂಡು. ಸಮ್ಮನೇ ನಮ್ಮ ಮೇಲೆ ಗೂಬೆ ಕೂರಿಸೋದಲ್ಲ ದಾಖಲೆ ಇದ್ದರೆ ಕೊಡಿ. ಅವರಿಗೆ ವಿರೋಧ ಪಕ್ಷ ನಾಯಕ ಇಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು