AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಶೇ 20% ರಷ್ಟು ಮಕ್ಕಳಲ್ಲಿ ಹೆಚ್ಚಿದ ಬೊಜ್ಜು; ಆಸ್ತಮಾ, ಕ್ಯಾನ್ಸರ್ ಎಚ್ಚರಿಕೆ ಕೊಟ್ಟ ವೈದ್ಯರು

ಕೊರೊನಾ ಮಕ್ಕಳಿಗೆ ಹೊರಾಂಗಣ ಕ್ರೀಡೆ ಆಟದ ಚಟಿವಟಿಕೆ ಅಷ್ಟೇ ಕಡಿಮೆ ಮಾಡಿಲ್ಲ. ಮಕ್ಕಳ ತಿನ್ನುವ ಅಭ್ಯಾಸ ಕೂಡಾ ಹೆಚ್ಚಿಸಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫಾಸ್ಟ್ ಪುಡ್, ಬೇಕರಿ ತಿಂಡಿಯ ಸೇವನೆ ಹೆಚ್ಚಾಗಿದ್ದು ಶೇ 20% ಮಕ್ಕಳಲ್ಲಿ ಅತಿಯಾದ ಬೊಜ್ಜು ಕಾಣಿಸುತ್ತಿದೆ. ಮಕ್ಕಳ ಈ ಅತಿಯಾದ ಬೊಜ್ಜು ಅಸ್ತಮಾ ಜೊತೆಗೂ ಕ್ಯಾನ್ಸರ್ ಗೂ ಕಾರಣವಾಗ್ತೀದೆ.

ರಾಜ್ಯದ ಶೇ 20% ರಷ್ಟು ಮಕ್ಕಳಲ್ಲಿ ಹೆಚ್ಚಿದ ಬೊಜ್ಜು; ಆಸ್ತಮಾ, ಕ್ಯಾನ್ಸರ್ ಎಚ್ಚರಿಕೆ ಕೊಟ್ಟ ವೈದ್ಯರು
ಸಾಂದರ್ಭಿಕ ಚಿತ್ರ
Vinay Kashappanavar
| Updated By: ಆಯೇಷಾ ಬಾನು|

Updated on: Feb 04, 2024 | 7:06 AM

Share

ಬೆಂಗಳೂರು, ಫೆ.04: ಕೊರೊನಾ (Coronavirus) ಬಳಿಕ ಮಕ್ಕಳ ಮಾನಸಿಕ ಚಿಂತನೆ ಅಷ್ಟೇ ಅಲ್ಲ, ದೈಹಿಕ ಬೆಳವಣಿಗೆಯಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳ (Children) ಅತಿಯಾದ ಬೇಕರಿ, ಫಾಸ್ಟ್ ಫುಡ್ ಅಭ್ಯಾಸ ಹಾಗೂ ಹೊರಾಂಗಣ ಕ್ರೀಡೆಯನ್ನು ಮರೆತಿರುವ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು ಇದು ಅಸ್ತಮಾ (Asthma), ಕ್ಯಾನ್ಸರ್ ಗೂ (Cancer) ಕಾರಣವಾಗ್ತಿದೆ ಬಿ ಅಲರ್ಟ್ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಮಕ್ಕಳಲ್ಲಿ ಶೇ 20% ರಷ್ಟು ಬೊಜ್ಜಿನ ಸಮಸ್ಯೆ ಹೆಚ್ಚಿದೆ. ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ಪ್ರೇರಿತ ಆಸ್ತಮಾ, ಕ್ಯಾನ್ಸರ್ ಗೂ ಕಾರಣವಾಗುತ್ತಿದೆ.

ಕೊವಿಡ್ ಬಳಿಕ ಮಕ್ಕಳಲ್ಲಿ ಅತಿಯಾದ ಬೊಜ್ಜು ಹೆಚ್ಚಾಗುತ್ತಿದೆ. ಮಕ್ಕಳ ಈ ಬೊಜ್ಜು ಸಾಲು ಸಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಮಕ್ಕಳಲ್ಲಿ ಸೈಲೆಂಟ್ ಆಗಿ ಕ್ಯಾನ್ಸರ್ ಗೂ ಕಾರಣವಾಗ್ತಿದ್ದು ಮಕ್ಕಳ ಅನಾರೋಗ್ಯಕರ ಈ ಬೊಜ್ಜು ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಮಕ್ಕಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಜಂಕ್ ಪುಡ್ ಸೇವನೆ ಮತ್ತು ಅತಿಯಾದ ಮೊಬೈಲ್ ಬಳಕೆ, ಹೊರಾಗಂಣ ಆಟ ಕಡಿಮೆಯಿಂದ ಪುಟ್ಟ ಮಕ್ಕಳಲ್ಲಿ ಈ ಬೊಜ್ಜು ಹೆಚ್ಚಾಗಿ ಸ್ಥೂಲಕಾಯ ಪ್ರೇರಿತ ಆಸ್ತಮಾ ಹಾಗೂ ಕ್ಯಾನ್ಸರ್​ಗೆ ಕಾರಣವಾಗುತ್ತಿದೆ. ಬೊಜ್ಜು ಪ್ರೇರಿತ ಅಸ್ತಮಾ ಹಾಗೂ ಕ್ಯಾನ್ಸರ್ ಮಕ್ಕಳ ಆರೋಗ್ಯಕ್ಕೆ ಕುತ್ತು ತರ್ತಿದೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಬಿ ಅಲರ್ಟ್ ಎಂದು ವೈದ್ಯರು ಹೆಚ್ಚರಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ ಕ್ಯಾನ್‌ವಾಕ್ ಹಿನ್ನೆಲೆ: ನಾಳೆ ಬೆಳಗ್ಗೆ 4.30ರಿಂದಲೇ ನಮ್ಮ ಮೆಟ್ರೋ ಓಡಾಟ

ಕೊವಿಡ್ ನಂತರ ಬೊಜ್ಜು ಗಮನಾರ್ಹವಾಗಿ ಹೆಚ್ಚಾಗಿದೆ. ಕೊವಿಡ್ ಟೈಮ್ ನಲ್ಲಿನ ಜೀವನಶೈಲಿಯಿಂದ ಶೇ.40% ರಷ್ಟು ಅಸ್ತಮಾ ಪ್ರಕರಣಗಳು ಆನುವಂಶಿಕವಾಗಿದ್ದರೆ. ಇನ್ನುಳಿದಂತೆ ಸಿಟಿಯ ವಾಯುಮಾಲಿನ್ಯ ಹಾಗೂ ಆಹಾರ ಪದ್ಧತಿ ಮಕ್ಕಳ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತಿದೆ. ಇನ್ನು 16 ವರ್ಷಕ್ಕಿಂತ ಕಿರಿಯ ಮಕ್ಕಳಲ್ಲಿಯೇ ಈ ಬೊಜ್ಜು ಹೆಚ್ಚಾಗುತ್ತಿದ್ದು ಬಾಲ್ಯದ ಈ ಬೊಜ್ಜು ಮಕ್ಕಳ ಟೈಪ್-2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಪಿತ್ತಕೋಶದ ಕಾಯಿಲೆ, ಉಸಿರಾಟದ ತೊಂದರೆ ಸೇರಿದಂತೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಎದುರಿಸಬಹುದು ಎಂದು ಕಿದ್ವಾಯಿ ಆಸ್ಪತ್ರೆ ಮಕ್ಕಳ ವಿಭಾಗದ ಕಾರ್ಡಿಯಾಲಜಿಸ್ಟ್ ಡಾ ಅರುಣ್ ತಿಳಿಸಿದರು.

ಒಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೌಷ್ಟಿಕ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ಮಾಡುವುದು ಪೋಷಕರಿಗೆ ಸವಾಲಿನ ಕೆಲಸ. ಪೋಷಕರು ಎಷ್ಟೇ ಕಷ್ಟಪಟ್ಟರೂ ಇಂದಿನ ಮಕ್ಕಳು ಕರಿದ, ಸಂಸ್ಕರಿತ ಮತ್ತು ಸಕ್ಕರೆಭರಿತ ಆಹಾರಗಳನ್ನೇ ಇಷ್ಟಪಡುವಾಗ ಪೌಷ್ಠಿಕ ಆಹಾರ ನೀಡುವತ್ತ ಪೋಷಕರು ಹೆಚ್ಚು ಗಮನ ಹರಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ