AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಧೋನಿ ಮ್ಯಾನೇಜರ್‌ಗೆ ವಂಚನೆ

ಕಳೆದ ವರ್ಷ ಅಕ್ಟೋಬರ್​​ 26 ರಂದು ಅಪರಿಚಿತ ವ್ಯಕ್ತಿಯೊಬ್ಬ ಎಮ್​ಎಸ್​ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ ನಾನು ಎನ್​​. ಎಸ್​​ ನಕುಲ್​​ ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎಂದು ಪರಿಚಯಿಸಿಕೊಂಡಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ..

ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಧೋನಿ ಮ್ಯಾನೇಜರ್‌ಗೆ ವಂಚನೆ
ಎಮ್​ಎಸ್​ ಧೋನಿ, ಎಫ್​ಐಆರ್​​
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on:Feb 03, 2024 | 8:47 AM

ಬೆಂಗಳೂರು, ಫೆಬ್ರವರಿ 03: ಭಾರತ ಪುರುಷರ ಕ್ರಿಕೆಟ್​ ತಂಡದ ಮಾಜಿ ನಾಯಕ ಎಮ್​​ಎಸ್​​ ಧೋನಿ (MS Dhoni) ಅವರ ಮ್ಯಾನೇಜರ್ ಅವರಿಗೆ ವಂಚಿಸಲಾಗಿದ್ದು, ಹೆಚ್​ಎಸ್​ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿರುಪತಿಯಲ್ಲಿ (Tirupati) ವಿಶೇಷ ದರ್ಶನ ಮಾಡಿಸುತ್ತೇನೆ ಅಂತ ಹೇಳಿ ಎಮ್​ಎಸ್​ಧೋನಿ ಅವರ ಮ್ಯಾನೇಜರ್ ಸ್ಚಾಮಿನಾಥನ್ ಅವರಿಂದ  6.5 ಲಕ್ಷ ರೂ. ಪಡೆದು ವಂಚಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್​​ 26 ರಂದು ಅಪರಿಚಿತ ವ್ಯಕ್ತಿಯೊಬ್ಬ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ ನಾನು ಎನ್​​. ಎಸ್​​ ನಕುಲ್​​ ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನ್ಯಾಯಾಧೀಶರಾದ ಕೆಸಿ ಭಾನು ಅವರ ಮಗ ಸಂದೀಪ್​​ ಅವರು ಎಮ್​ಎಸ್​ ಧೋನಿ ಅವರನ್ನು ಭೇಟಿಯಾಗಬೇಕೆಂದು ನಕುಲ್​​ ಸ್ವಾಮಿನಾಥ್​ನ ಅವರಿಗೆ ಹೇಳಿದ್ದಾನೆ.

ನಂತರ ಅಕ್ಟೋಬರ್​ 29 ರಂದು ಸಂದೀಪ್​ ಹಾಗೂ ಆತನ ಸ್ನೇಹಿತ ಸಲ್ಮಾನ್ ಬೆಂಗಾಲ್​​ ಹೋಟೆಲ್​​ನಲ್ಲಿ ಸ್ವಾಮಿನಾಥನ್​ ಮತ್ತು ಎಮ್​ಎಸ್​ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇವೆ ಯಾವಾಗ ಬೇಕಾದರೂ ಕರೆ ಮಾಡಿ ಎಂದು ಹೇಳಿದ್ದಾರೆ. ಬಳಿಕ ನವೆಂಬರ್​ 11 ರಂದು ಸಂದೀಪ್​ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ “ವಿಶೇಷ ದರ್ಶನ 12 ಜನರಿಗೆ ನೀಡಲಾಗುವುದು ಎಂದು ತಿಳಿಸಿದ್ದಾನೆ.

ಇದನ್ನೂ ಓದಿ:  Salman Khan: ಸಲ್ಮಾನ್ ಖಾನ್ ಹೆಸರಲ್ಲಿ ವಂಚನೆ; ಎಚ್ಚರಿಕೆ ಕೊಟ್ಟ ಭಾಯಿಜಾನ್

ಆಗ ಸ್ವಾಮಿನಾಥನ್​​ ತಾನು ದುಬೈನಲ್ಲಿದ್ದೇನೆ ಬೇರೆ ಯಾರಿಗಾದರು ನೀಡಿ ಎಂದು ಹೇಳಿದ್ದಾರೆ. ಆಗ ಸಂದೀಪ್​ ನೀವೆ ಯಾರಿಗಾದರೂ ಪ್ರೊಟೋಕಾಲ್​ ಲೆಟರ್​ ನೀಡಿ ಎಂದು ಸ್ವಾಮಿನಾಥನ್​ ಅವರಿಗೆ ಅವರಿಗೆ ಹೇಳಿದ್ದಾನೆ. ಆಗ ಸ್ವಾಮಿನಾಥನ್​​ ಕೂಡ್ಲುಗೇಟ್​​ನಲ್ಲಿ ಶಾಲೆ ನಡೆಸುತ್ತಿರುವ ತಮ್ಮ ಸ್ನೇಹಿತ ವಿನೀತ್​ ಚಂದ್ರಶೇಖರ್​ ಅವರಿಗೆ ನೀಡಿ ಎಂದು ಹೇಳಿ ಹೇಳಿದ್ದಾರೆ. ನಂತರ ಡಿಸೆಂಬರ್​ 20 ರಂದು ನಾಗೇಶ್ವರ ರಾವ್​ ಎಂಬುವರು ವಿನೀತ್​​ ಚಂದ್ರಶೇಖರ್​ ಅವರಿಗೆ ಕರೆ ಮಾಡಿ ತಾನು ಸಚಿವೆ ನಿರ್ಮಲ ಸೀತಾರಾಮನ್​ ಅವರ ಪಿಎ ಎಂದು ಹೇಳಿದ್ದಾನೆ.

ಬಳಿಕ ಡೊನೇಷನ್​ ಮಾಡಲು ಇಚ್ಛೆಯಿದ್ದಲ್ಲಿ ಸಾಯಿ ಕ್ರಿಯೇಷನ್ ಟ್ರಸ್ಟ್​​ಗೆ ಹಣ ಹಾಕುವಂತೆ ವಿನೀತ್​ ಅವರಿಗೆ ನಾಗೇಶ್ವರ ರಾವ್​ ಹೇಳಿದ್ದಾನೆ. ಅದರಂತೆ ವಿನೀತ್​​ ಅವರು ಡಿಸೆಂಬರ್​​ 22 ರಂದು 3,33,333 ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾರೆ. ನಂತರ ತಿರುಪತಿ ವಿಶೇಷ ದರ್ಶನ, ರೂಮ್​ ಹಾಗೂ ಇತ್ಯಾದಿ ಖರ್ಚುಗಳೆಂದು ಹೇಳಿ 3 ಲಕ್ಷ ರೂ. ಅನ್ನು ಗೂಗಲ್​ ಪೇ ಮಾಡಿಸಿಕೊಂಡಿದ್ದಾನೆ. ಕೆಲವು ದಿನಗಳ ಬಳಿಕ ಹಣ ಕೇಳಿದರೆ ಕೊಡುತ್ತೇನೆಂದು ಹೇಳುತ್ತಾ ಇದುವರೆಗೂ ಹಣ ನೀಡದೆ ಒಟ್ಟು 6,33,333 ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸ್ವಾಮಿನಾಥನ್​ ಅವರು ದೂರು ದಾಖಲಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:20 am, Sat, 3 February 24

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್