ಪೊಲೀಸ್ ಇಲಾಖೆಗೆ ಸರ್ಜರಿ, 33 ಡಿವೈಎಸ್ಪಿ ಬೆನ್ನಲ್ಲೇ 218 ಪಿಎಸ್‌ಐಗಳ ವರ್ಗಾವಣೆ

Police Transfer: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಬೆಳಗ್ಗೆ ಡಿವೈಎಸ್​ಪಿ ಸೇರಿದಂತೆ ಪಿಎಸ್​ಐ ವರ್ಗಾವಣೆ ಮಾಡಿ ಆದೇಶ ಹೊರಡಿಸಿಲಾಗಿದ್ದು, ಇದೀಗ ಬೆಂಗಳೂರು ವ್ಯಾಪ್ತಿ ಸಬ್​ ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇಲಾಖೆಗೆ ಸರ್ಜರಿ, 33 ಡಿವೈಎಸ್ಪಿ ಬೆನ್ನಲ್ಲೇ  218 ಪಿಎಸ್‌ಐಗಳ ವರ್ಗಾವಣೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jan 30, 2024 | 6:14 PM

ಬೆಂಗಳೂರು, (ಜನವರಿ 30): ಪೊಲೀಸ್ ಇಲಾಖೆಗೆ  ಸರ್ಕಾರ ಸರ್ಜರಿ ಮಾಡಿದ್ದು, ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮೇಜರ್​ ಸರ್ಜರಿ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ (Police Transfer) ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ನಗರ ಪೊಲೀಸ್‌ ಆಯುಕ್ತರ ಪರವಾಗಿ ಐಪಿಎಸ್‌ ಅಧಿಕಾರಿ ರಮನ್‌ ಗುಪ್ತಾ ಅವರು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಗಳು ವರ್ಗಾವಣೆಗೊಂಡ ಪಿಎಸ್‌ಐಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಶಿವಪ್ಪ ಎಂ.ನಾಯ್ಕರ್‌-ರಾಮಮೂರ್ತಿನಗರ ಠಾಣೆ, ಶಿವಪ್ಪ -ವೈಟ್‌ಫೀಲ್ಡ್‌ ಠಾಣೆ, ರಮಾದೇವಿ ಬಿ.ಎಸ್‌.ಮಹದೇವಪುರ ಠಾಣೆ, ಮೂರ್ತಿ- ಮಲ್ಲೇಶ್ವರಂ ಠಾಣೆ, ಪ್ರಭುಗೌಡ ಎಸ್‌. ಪಾಟೀಲ್‌-ಆಡುಗೋಡಿ ಸಂಚಾರ ಠಾಣೆ, ವಿನೂತ್‌ ಎಚ್‌.ಎಂ.-ಬಸವನಗುಡಿ ಠಾಣೆ, ಶ್ರೀನಿವಾಸ್‌ ಪ್ರಸಾದ್- ಹುಳಿಮಾವು ಠಾಣೆಗೆ ಸೇರಿ 218 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

33 ಡಿವೈಎಸ್ಪಿ, 132 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು: ಈಗಾಗಲೇ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಒಬ್ಬ ಡಿವೈಎಸ್‌ಪಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಹೊಸದಾಗಿ ಸೃಜನೆಯಾದ ಹುದ್ದೆಗಳಿಗೂ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವಂತೆ ತಿಳಿಸಲಾಗಿದೆ.

ಯು.ಡಿ. ಕೃಷ್ಣಕುಮಾರ್ (ಡಿವೈಎಸ್​ಪಿ, ಬಿಡಿಎ), ಟಿ.ಎಂ.ಶಿವಕುಮಾರ್ (ಎಸಿಪಿ, ಮಡಿವಾಳ ಉಪವಿಭಾಗ), ಎಚ್.ಬಿ.ರಮೇಶ್ ಕುಮಾರ್‌ (ಎಸಿಪಿ, ವಿವಿ ಪುರಂ ಉಪವಿಭಾಗ), ಎಂ.ಎನ್.ನಾಗರಾಜ್ (ಎಸಿಪಿ, ಸಿಸಿಬಿ ಬೆಂಗಳೂರು) ಅನುಷಾರಾಣಿ (ಎಸಿಪಿ, ಡಿಸಿಆರ್​ಇ, ಮೈಸೂರು) ಸೇರಿದಂತೆ ಒಟ್ಟು 33 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:04 pm, Tue, 30 January 24