ಅಡಿಕೆ ಗಿಡಗಳಿಗೆ ವಿಷಕಾರಿ ದ್ರವ ತುಂಬಿದ ದುಷ್ಕರ್ಮಿಗಳು: ಪರಿಚಯಸ್ಥರೇ ಮಾಡಿರುವ ಶಂಕೆ
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಚಿಕ್ಕಹೌಂಶಿ ಹೊಸೂರು ಗ್ರಾಮದಲ್ಲಿ ದುಷ್ಕರ್ಮಿಗಳು ಅಡಿಕೆ ಗಿಡಗಳಿಗೆ ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿರುವಂತಹ ಘಟನೆ ನಡೆದಿದೆ. ಜಮೀನು ವ್ಯಾಜ್ಯದ ಹಿನ್ನೆಲೆ ಪರಿಚಯಸ್ಥರೇ ಅಡಿಕೆ ಗಿಡಗಳನ್ನು ಹಾಳು ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಹಾನಗಲ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.
ಹಾವೇರಿ, ಜನವರಿ 30: ದುಷ್ಕರ್ಮಿಗಳು ಅಡಿಕೆ ಗಿಡಗಳಿಗೆ (nut plants) ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿರುವಂತಹ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕು ಚಿಕ್ಕಹೌಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಹೌಂಶಿ ಹೊಸೂರು ಗ್ರಾಮದ ಯುವ ರೈತ ರಾಜೇಶ್ ಪಾಟೀಲ್ ಅವರಿಗೆ ಅಡಿಕೆ ಗಿಡಗಳು ಸೇರಿವೆ. ಜಮೀನು ವ್ಯಾಜ್ಯದ ಹಿನ್ನೆಲೆ ಪರಿಚಯಸ್ಥರೇ ಅಡಿಕೆ ಗಿಡಗಳನ್ನು ಹಾಳು ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಅರ್ಧ ಎಕರೆ ಜಮೀನಿನಲ್ಲಿ 130 ಅಡಿಕೆ ಗಿಡಗಳು ಬೆಳೆಯಲಾಗಿತ್ತು. ಪ್ರತಿ ಅಡಿಕೆ ಗಿಡಗಳಿಗೂ ರಂಧ್ರ ಕೊರೆದು ರಾಸಾಯನಿಕ ವಿಷ ದ್ರಾವಣ ತುಂಬಿದ್ದಾರೆ.
ರೈತ ರಾಜೇಶ್ ಪಾಟೀಲ್ ಮೂರು ದಿನ ತಿರುಪತಿ ಪ್ರವಾಸಕ್ಕೆ ಹೋದಾಗ ಘಟನೆ ನಡೆದಿದೆ. ಊರಲ್ಲಿ ರೈತ ರಾಜೇಶ್ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅಡಿಕೆ ಗಿಡಗಳಿಗೆ ರಾತ್ರೋರಾತ್ರಿ ರಂಧ್ರ ಮಾಡಿ ರಾಸಾಯನಿಕ ವಿಷ ತುಂಬಿದ್ದಾರೆ. ಹೀಗಾಗಿ ಅಡಿಕೆ ಗಿಡಗಳು ಒಣಗುತ್ತಿದ್ದು, ಫಸಲು ಬಿಡುವ ಮೊದಲೇ ಹಾಳಾಗುತ್ತಿವೆ.
ಇದನ್ನೂ ಓದಿ: ಧಿಡೀರನೆ ಕುಸಿದ ಈರುಳ್ಳಿ ಬೆಲೆ: ಕೆಜಿಗೆ 3-4 ರೂ. ಮಾರಾಟ, ಕಂಗಾಲಾದ ರೈತ
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಾನಗಲ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.
ಕೋಟ್ಯಾಂತರ ರೂಪಾಯಿ ಅಡಿಕೆ ಮಂಡಿ ಮಾಲೀಕನಿಗೆ ಗೋಲ್ ಮಾಲ್
ಶಿವಮೊಗ್ಗ: ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಅಡಿಕೆಯನ್ನು ಮಾರಾಟಕ್ಕೆಂದು ಶಿವಮೊಗ್ಗ ಎಪಿಎಂಸಿ ಅಡಿಕೆ ಮಂಡಿಗೆ ತಂದಿದ್ದ ಅಡಿಕೆ ಬೆಳೆಗಾರರಿಗೆ ಮೋಸ ಮಾಡಲಾಗಿದೆ. ಅಡಿಕೆ ಅಂಗಡಿಯ ಮಾಲೀಕನಿಗೆ ಗೊತ್ತಿಲ್ಲದೇ ಇಬ್ಬರು ಮಹಿಳಾ ಸಿಬ್ಬಂದಿಗಳು ಮಾರಾಟ ಮಾಡಿದ್ದಾರೆ. ಮಾಲೀಕನಿಗೆ ಸಿಬ್ಬಂದಿಗಳು ಮೋಸ ಮಾಡಿದ್ದು ಒಂದೆಡೆ ಆದರೆ ಇತ್ತ ಅಂಗಡಿ ಮಾಲೀಕನನ್ನು ನಂಬಿ ಅಡಿಕೆ ಮಾರಾಟಕ್ಕೆ ನೂರಾರು ಕ್ವಿಂಟಲ್ ಅಡಿಕೆ ತಂದಿದ್ದ ರೈತರಿಗೆ ಮಾಲೀಕನಿಂದ ಸಮಸ್ಯೆಯಾಗಿದೆ.
ಇದನ್ನೂ ಓದಿ: ಅಡಿಕೆ ತೋಟ ನಾಶ ಮಾಡಿದ ದುಷ್ಕರ್ಮಿಗಳು, ವೈಷಮ್ಯಕ್ಕೆ 10 ವರ್ಷದಿಂದ ಪೋಷಣೆ ಮಾಡಿದ ಮರಗಳು ಸರ್ವನಾಶ
ಈ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರು ತಮಗೆ ಆಗಿರುವ ಮೋಸದ ಕುರಿತು ದೂರು ನೀಡಲು ಶಿವಮೊಗ್ಗ ಎಸ್ಪಿ ಕಚೇರಿಗೆ ಬಂದಿದ್ದರು. ಮಾಲೀಕನಿಗೆ ಮಹಿಳಾ ಸಿಬ್ಬಂದಿಗಳು ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆ. ಮಾಲೀಕ ಮತ್ತು ಸಿಬ್ಬಂದಿಗಳ ನಡುವಿನ ಸಮಸ್ಯೆಗೆ ಈಗ ಅಡಿಕೆ ಬೆಳೆಗಾರರ ಕೋಟಿ ಕೋಟಿ ಮೌಲ್ಯದ ಅಡಿಕೆಯು ನಾಪತ್ತೆಯಾಗಿದೆ.
ಸಿಬ್ಬಂದಿಗಳು ಅಡಿಕೆ ಮಾರಾಟ ಮಾಡಿಕೊಂಡಿದ್ದಾರೆ. ಇತ್ತ ಮಾಲೀಕನು ದೂರು ಕೊಟ್ಟಿದ್ದಾರೆ. ಆರೋಪಿಗಳು ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಕೋರ್ಟ್ ಕಚೇರಿ ಪೊಲೀಸ್ ಠಾಣೆ ಅಂತಾ ಕೇಸ್ ನಡೆಯುತ್ತದೆ. ಇವರ ಇಬ್ಬರ ಸಮಸ್ಯೆಯಲ್ಲಿ ಅಡಿಕೆ ಬೆಳಗಾರರು ಅಡಿಕೆಯು ಇಲ್ಲ. ಇತ್ತ ಅಡಿಕೆ ಮೌಲ್ಯದ ಹಣವು ಅಂಗಡಿ ಮಾಲೀಕನು ನೀಡಿಲ್ಲ. ಒಬ್ಬೊಬ್ಬ ರೈತ 10 ರಿಂದ 20 ಲಕ್ಷ ರೂ. ಮೌಲ್ಯದ ಅಡಿಕೆಯು ನಾಪತ್ತೆಯಾಗಿದೆ. ಹೀಗಾಗಿ ಎಸ್ಪಿ ಅವರಿಗೆ ಭೇಟಿ ಮಾಡಿ ಅಡಕೆ ಬೆಳೆಗಾರರು ತಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.