ಇಂದಿನಿಂದ “ಮನೆ ಮನೆ ರಾಮ” ಜಾಗೃತಿ ಅಭಿಯಾನ; ಲೌಡ್ ಸ್ಪೀಕರ್ ತೆರವಿಗೆ ಒತ್ತಾಯ

ಇಂದಿನಿಂದ ಮನೆ ಮನೆ ರಾಮ ಜಾಗೃತಿ ಅಭಿಯಾನ; ಲೌಡ್ ಸ್ಪೀಕರ್ ತೆರವಿಗೆ ಒತ್ತಾಯ
ಸಾಂದರ್ಭಿಕ ಚಿತ್ರ

ಅನಧಿಕೃತ ಆಜಾನ್ ಲೌಡ್ ಸ್ಪೀಕರ್ಗೆ ಹಿಂದೂಪರ ಸಂಘಟನೆಗಳು ಸೆಡ್ಡು ಹೊಡೆಯಲು ಮುಂದಾಗಿವೆ. ರಾಜ್ಯದ ಎಲ್ಲಾ ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಒತ್ತಾಯಿಸಿ ಅಭಿಯಾನ ಶುರು ಮಾಡಿವೆ. ಬೆಂಗಳೂರಿನ ರಾಜಾಜಿನಗರದ ಶಿವನಳ್ಳಿ ಸರ್ಕಲ್ನಿಂದ ಇಂದು ಮನೆ ಮನೆ ರಾಮ ಅಭಿಯಾನಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

TV9kannada Web Team

| Edited By: Ayesha Banu

Apr 22, 2022 | 7:56 AM

ಬೆಂಗಳೂರು: ರಾಜ್ಯದಲ್ಲಿ ಕಳೆದ ಐದಾರು ತಿಂಗಳಿಂದ ನಡೆಯುತ್ತಿರುವ ಧರ್ಮದುಳ್ಳುರಿ ಸದ್ಯ ತಣ್ಣಗಾಗೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಸದ್ಯ ಈಗ ಆಜಾನ್‌ ವಿವಾದ ಮತ್ತೆ ಧಗಧಗಿಸಲು ಶುರುವಾಗಿದೆ. ಈ ನಡುವೆ ದೇಗುಲದೊಳಗಿನ ಪೂಜೆ, ಮಂತ್ರದ ಶಬ್ಧ ಕೂಡಾ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಇಂದಿನಿಂದ “ಮನೆ ಮನೆ ರಾಮ” ಜಾಗೃತಿ ಅಭಿಯಾನ ಆರಂಭಿಸಲು ಹಿಂದೂಪರ ಸಂಘಟನೆಗಳ ಮುಂದಾಗಿವೆ.

ಅನಧಿಕೃತ ಆಜಾನ್ ಲೌಡ್ ಸ್ಪೀಕರ್ಗೆ ಹಿಂದೂಪರ ಸಂಘಟನೆಗಳು ಸೆಡ್ಡು ಹೊಡೆಯಲು ಮುಂದಾಗಿವೆ. ರಾಜ್ಯದ ಎಲ್ಲಾ ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಒತ್ತಾಯಿಸಿ ಅಭಿಯಾನ ಶುರು ಮಾಡಿವೆ. ಬೆಂಗಳೂರಿನ ರಾಜಾಜಿನಗರದ ಶಿವನಳ್ಳಿ ಸರ್ಕಲ್ನಿಂದ ಇಂದು ಮನೆ ಮನೆ ರಾಮ ಅಭಿಯಾನಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಳಿ‌ಮಠದ ಪೀಠಾಧ್ಯಕ್ಷ ರಿಷಿ ಕುಮಾರ್ ಸ್ವಾಮೀಜಿ ಬೆಳಿಗ್ಗೆ ಹತ್ತು ಗಂಟೆಗೆ ಚಾಲನೆ ನೀಡಲಿದ್ದಾರೆ. ಶ್ರೀ ರಾಮ ಸೇನೆ ಮನೆ ಮನೆ ರಾಮ ಅಭಿಯಾನಕ್ಕೆ ಕರೆ ಕೊಟ್ಟಿದೆ.

ಮೇ 9 ರೊಳಗೆ ಮಸೀದಿ ಮೇಲಿನ ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಒತ್ತಾಯಿಸಿವೆ. ತೆರವು ಮಾಡಲಿಲ್ಲ ಅಂದರೆ 9 ರ ಬೆಳಿಗ್ಗೆ ಐದು ಗಂಟೆಯಿಂದ ದಿನದ ಐದು ಬಾರಿ ರಾಜ್ಯದ ಎಲ್ಲಾ ದೇವಾಲಯಗಳ ಮೇಲೆ ಹನುಮಾನ್ ಚಾಲೀಸಾ, ಶ್ರೀ ರಾಮ ಜಯ ರಾಮ, ಓಂಕಾರ ಪಠಣೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯದ ಎಲ್ಲಾ ಮಠಾಧೀಶರು, ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ದೇವಾಲಯಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ 9 ರ ಸೋಮವಾದಂದು ಎಲ್ಲಾ ದೇವಾಲಯ, ಮಠ, ಮಾನ್ಯಗಳ ಮೇಲೆ ಲೌಡ್ ಸ್ಪೀಕರ್ ಹಾಕಲು ಮನವಿ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅನಧಿಕೃತ ಆಜಾನ್ ತೆರವಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ ಕೇವಲ ನೋಟಿಸ್ ಕೊಟ್ಟು ಜಿಲ್ಲಾಧಿಕಾರಿಗಳು ಸುಮ್ಮನಾಗಿದ್ದಾರೆ.

ಹೀಗಾಗಿ ಇಂದಿನಿಂದ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ತೆರವಿಗೆ ಆಗ್ರಹ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿವೆ. ಮೇ 9 ರಂದು ಸಂಘರ್ಷ ಆದ್ರು ಪರವಾಗಿಲ್ಲ ನಾವು ರಾಮ ಭಜನೆ ಮಾಡಿಯೇ ಸಿದ್ದ ಎಂದು ಶ್ರೀ ರಾಮ ಸೇನೆ ಎಚ್ಚರಿಸಿದೆ. ಹಿಂದೂಪರ ಸಂಘಟನೆಗಳು ಇಂದಿನಿಂದ ರಾಜ್ಯದ ಎಲ್ಲಾ ದೇವಾಲಯ ಮಂಡಳಿ ಸಂಪರ್ಕ ಮಾಡಲಿವೆ. ಮೇ 9 ರ ಮನೆ ಮನೆ ರಾಮ ಅಭಿಯಾನಕ್ಕೆ ಕೈ ಜೊಡಿಸುವಂತೆ ಮನವಿ ಮಾಡಲಿದ್ದಾರೆ. ಹಾಗೂ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವಂತೆ ಮನವಿ. ಎಲ್ಲರಿಗೂ ಒಂದೇ ಕಾನೂನು, ಎಲ್ಲರೂ ಪಾಲಿಸಲೇ ಬೇಕು ಅಂತ ಒತ್ತಾಯ.

ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಅಜಾನ್ ವಿವಾದ ಹೊಗೆಯಾಡ್ತಿರುವಾಗ್ಲೇ ಹಿಂದೂ ಮುಖಂಡರು ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಹಿಂದೂ ದೇವಾಲಯಗಳಲ್ಲಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಎಂದು ಬೇಡಿಕೆ ಇಟ್ಟಿವೆ. ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡೋ ದೇವಸ್ಥಾನಗಳಿಗೆ ಈ ಅನಮತಿ ಕೊಡಿ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಹರ್ಷ ಮುತಾಲಿಕ್ ಮನವಿ ಪತ್ರ ಸಲ್ಲಿಸಿದ್ದಾರೆ. ದೇವಸ್ಥಾನಗಳಲ್ಲಿ ಸುಪ್ರಭಾತ, ಪೂಜಾ ಮಂತ್ರ ಪಠಿಸೋದನ್ನ ಭಕ್ತಾದಿಗಳಿಗೆ ಮುಟ್ಟಿಸಲು ಮೈಕ್ ಅಗತ್ಯ. ಹೀಗಾಗಿ ಲೌಡ್ ಸ್ಪೀಕರ್, ಸೌಂಡ್ ಸಿಸ್ಟಂ, ಮೈಕ್ ಅಳವಡಿಕೆಗೆ ಅವಕಾಶ ಕೊಡಿ ಎಂದು ಧಾರ್ಮಿಕ ಪರಿಷತ್ ಸದಸ್ಯ, ಹಿಂದೂ ಮುಖಂಡ ಹರ್ಷ ಮುತಾಲಿಕ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದೇವರ ದರ್ಶನಕ್ಕೆ ಹಣವಿರುವವರಿಗೆ ಒಂದು ಸಾಲು, ಬಡವರಿಗೆ ಬಂದು ಸಾಲು ಇದ್ಯಾವ ನ್ಯಾಯ? ಭಕ್ತನ ಪ್ರಶ್ನೆಗೆ ದೇವರು ಕೊಟ್ಟ ಉತ್ತರವೇನು ಗೊತ್ತಾ?

ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್​ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ

Follow us on

Related Stories

Most Read Stories

Click on your DTH Provider to Add TV9 Kannada