ದಿಲ್ಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರ: ಅವತ್ತು ನನ್ನ ಮನೆಗೆ ಗೂಂಡಾಗಳು ನುಗ್ಗಿ ದಾಳಿ ಮಾಡಿದರು -ಬೆಂಗಳೂರಲ್ಲಿ ಕೇಜ್ರಿವಾಲ್ ಕಿಡಿ
ದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರವಾಗಿ ಬಿಜೆಪಿ ವಿರುದ್ಧ ಅರವಿಂದ ಕೇಜ್ರಿವಾಲ್ ಕಿಡಿಕಾರಿದ್ದು, ಅವತ್ತು ನನ್ನ ಮನೆಗೆ ನುಗ್ಗಿ ಗೂಂಡಾಗಳು ದಾಳಿ ಮಾಡಿದ್ದಾರೆ.
ಬೆಂಗಳೂರು: ಮೋದಿ ನನ್ನ ನಿವಾಸದ ಮೇಲೆ CBI ದಾಳಿ ಮಾಡಿಸಿದರು. ನನ್ನ ಬೆಡ್ ರೂಮ್ ತಪಾಸಣೆ ಮಾಡಿದ್ರೂ ಏನೂ ಸಿಗಲಿಲ್ಲ ಎಂದು ಬೆಂಗಳೂರಿನ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ನಮ್ಮ ಮಂತ್ರಿಗಳು, ಶಾಸಕರ ಮನೆಯಲ್ಲೂ ಏನೂ ಸಿಗಲಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ, ರಾಜಕೀಯ ಮಾಡೋಕೆ ಬರಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಕಷ್ಟಗಳೆಲ್ಲವೂ ನನಗೆ ಗೊತ್ತಿದೆ. ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಅನ್ನೋ ಆಸೆ ಇರುತ್ತೆ. ದೆಹಲಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ಉತ್ತಮ. ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಅಂಕ ಗಳಿಸುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್, ಆಡಿಟೋರಿಯಂ, ಲಿಫ್ಟ್ ಎಲ್ಲವೂ ಇದೆ. 75 ವರ್ಷಗಳಲ್ಲಿ ಯಾವ ಸರ್ಕಾರವೂ ಇದನ್ನು ಮಾಡಿರಲಿಲ್ಲ. ನಾವು ಪ್ರಾಮಾಣಿಕರು ಅಂತಾ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರೇ ನಮಗೆ ಪ್ರಮಾಣ ಪತ್ರ ಕೊಟ್ಟಿದ್ದಾರೆ. ದೇಶದ ಅತ್ಯಂತ ಪ್ರಾಮಾಣಿಕ ಸಿಎಂ ಅಂತಾ ಸರ್ಟಿಫಿಕೇಟ್ ಇದೆ. ಐಟಿ ದಾಳಿ ಮಾಡಿಸಿದ್ರೂ ಏನೂ ಸಿಗಲಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರವಾಗಿ ಬಿಜೆಪಿ ವಿರುದ್ಧ ಅರವಿಂದ ಕೇಜ್ರಿವಾಲ್ ಕಿಡಿಕಾರಿದ್ದು, ಅವತ್ತು ನನ್ನ ಮನೆಗೆ ನುಗ್ಗಿ ಗೂಂಡಾಗಳು ದಾಳಿ ಮಾಡಿದ್ದಾರೆ. ಆಗ ನಾನು, ನನ್ನ ಪತ್ನಿ, ಮಕ್ಕಳೂ ಮನೆಯಲ್ಲಿ ಇರಲಿಲ್ಲ. ಅವತ್ತು ನನ್ನ ಮನೆಯಲ್ಲಿ ನನ್ನ ತಂದೆ-ತಾಯಿ ಮಾತ್ರ ಇದ್ದರು. ಆದರೂ ಗೂಂಡಾಗಳಿಗೆ ಕೇಂದ್ರ ಸರ್ಕಾರ ಶಿಕ್ಷೆ ಕೊಡಲಿಲ್ಲ. ಬದಲಾಗಿ ಆ ಗೂಂಡಾಗಳನ್ನ ಮರುದಿನ ಪಕ್ಷಕ್ಕೆ ಸೇರಿಸಿಕೊಂಡ್ರು. ಗೂಂಡಾಗಳು, ಭ್ರಷ್ಟಾಚಾರಿಗಳು ಬಿಜೆಪಿ ಸೇರ್ಪಡೆ ಆಗ್ತಿದ್ದಾರೆ. ಅತ್ಯಾಚಾರಿಗಳ ಪರ ಬಿಜೆಪಿ ಪಕ್ಷದವರೆಲ್ಲ ಬೆಂಬಲಕ್ಕೆ ನಿಲ್ತಾರೆ ಎಂದರು.
ಇದನ್ನೂ ಓದಿ:
Afghanistan Blast: ಅಫ್ಘಾನಿಸ್ತಾನದ ಮಸೀದಿಗಳಲ್ಲಿ ಭಾರೀ ಸ್ಫೋಟ; 22 ಜನ ಸಾವು, ಹಲವರಿಗೆ ಗಾಯ