Afghanistan Blast: ಅಫ್ಘಾನಿಸ್ತಾನದ ಮಸೀದಿಗಳಲ್ಲಿ ಭಾರೀ ಸ್ಫೋಟ; 22 ಜನ ಸಾವು, ಹಲವರಿಗೆ ಗಾಯ
ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಷರೀಫ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ಇಸ್ಲಮಾಬಾದ್: ಅಫ್ಘಾನಿಸ್ತಾನದ (Afghanistan) ಮಜರ್-ಎ-ಷರೀಫ್ ಮತ್ತು ಕುಂದುಜ್ ನಗರಗಳಲ್ಲಿ ಪ್ರತ್ಯೇಕ ಸ್ಫೋಟಗಳು ಉಂಟಾಗಿ, 22 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಷರೀಫ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಂತೀಯ ಆರೋಗ್ಯ ಅಧಿಕಾರಿಯ ಪ್ರಕಾರ, ಉತ್ತರ ಅಫ್ಘಾನಿಸ್ತಾನದ ಮತ್ತೊಂದು ನಗರವಾದ ಕುಂದುಜ್‌ನಲ್ಲಿ ನಡೆದ ಸ್ಫೋಟದಿಂದ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನದ ಕಾಬೂಲ್‌ನ ಪ್ರೌಢಶಾಲೆಯೊಂದರ ಬಳಿ ಭಾರೀ ಸ್ಫೋಟ ಉಂಟಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 11 ಮಂದಿ ಗಾಯಗೊಂಡಿದ್ದಾರೆ. ಉತ್ತರದ ನಗರವಾದ ಮಜಾರ್-ಎ-ಷರೀಫ್‌ನಲ್ಲಿರುವ ಶಿಯಾ ಮಸೀದಿಯಲ್ಲಿ ನಡೆದ ಭಾರೀ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ 30ರಿಂದ 50 ಜನ ಗಾಯಗೊಂಡಿದ್ದಾರೆ. ಮೂರನೇ ದಾಳಿಯು ಉತ್ತರ ಅಫ್ಘಾನಿಸ್ತಾನದ ಮತ್ತೊಂದು ನಗರವಾದ ಕುಂದುಜ್‌ನಲ್ಲಿ ಸಂಭವಿಸಿದೆ. ಅಲ್ಲಿ 11 ಜನರು ಸಾವನ್ನಪ್ಪಿದ್ದಾರೆ.
ಮಜಾರ್-ಎ-ಶರೀಫ್‌ನಲ್ಲಿ ಉಂಟಾದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಆರೋಗ್ಯ ಪ್ರಾಧಿಕಾರದ ವಕ್ತಾರ ಜಿಯಾ ಝೆಂಡಾನಿ ತಿಳಿಸಿದ್ದಾರೆ. ಕುಂದುಜ್‌ನಲ್ಲಿರುವ ಆಸ್ಪತ್ರೆಗಳಿಗೆ 11 ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕುಂದುಜ್ ಸ್ಫೋಟದ ಸ್ಥಳ ಅಥವಾ ಕಾರಣ ತಿಳಿದಿಲ್ಲ.
ಇಸ್ಲಾಮಿಕ್ ಪವಿತ್ರವಾದ ರಂಜಾನ್ ತಿಂಗಳಿನಲ್ಲಿ ಈ ಸ್ಫೋಟಗಳು ನಡೆದಿವೆ. ಮಝರ್-ಎ-ಶರೀಫ್ ನಿವಾಸಿಯೊಬ್ಬರು ಅವರು ತಮ್ಮ ಸಹೋದರಿಯೊಂದಿಗೆ ಹತ್ತಿರದ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ದೊಡ್ಡ ಸ್ಫೋಟದ ಶಬ್ದವನ್ನು ಕೇಳಿದಾಗ ಮಸೀದಿಯ ಸುತ್ತಲಿನ ಪ್ರದೇಶದಿಂದ ಹೊಗೆ ಏರುತ್ತಿರುವುದನ್ನು ಕಂಡರು.
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಉದ್ಯೋಗಿಗಳು ಗಡ್ಡ ಬಿಡುವುದು ಕಡ್ಡಾಯ; ಸೂಟ್ ಧರಿಸಿದವರಿಗೆ ನೋ ಎಂಟ್ರಿ!
ಅಫ್ಘಾನಿಸ್ತಾನ: ಬಾಲಕಿಯರ ಶಾಲೆಗಳನ್ನು ತೆರೆದ ಕೆಲವೇ ಗಂಟೆಗಳ ನಂತರ ಮುಚ್ಚಿಸಿದ ತಾಲಿಬಾನ್